Thursday, 20th September 2018  

Vijayavani

Breaking News

ಬಡವರ ರೇಡ್ ಮಾಡಿದ್ರು, ಪ್ರಭಾವಿಗಳನ್ನು ಬಿಟ್ಟೋದ್ರು: ಬಡ ಅಜ್ಜಿ ಗುಬ್ಬವ್ವನ ಕಣ್ಣೀರು

Sunday, 09.09.2018, 4:38 PM       No Comments

ವಿಜಯಪುರ: ಭಾರೀ ಪ್ರಮಾಣದಲ್ಲಿದ್ದ ಪಿಒಪಿ ಗಣೇಶ ಮಾರಾಟ ಮಳಿಗೆ ಮೇಲೆ ರೇಡ್‌ಗೆ ತೆರಳಿದ್ದ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಮೇಲೆ ರಾಜಕೀಯ ಆರೋಪ ಎದುರಾಗಿದ್ದು, ಬಡವರ ಮೇಲೆ ರೇಡ್ ಮಾಡಿ, ಪ್ರಭಾವಿಗಳನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಪಿಒಪಿ ಗಣೇಶನನ್ನು ಮಾರಾಟ ಮಾಡಿದರೆ ಯಾರನ್ನೂ ಬಿಡುವುದಿಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದ ಡಿಸಿ ಕಾರ್ಯಾಚರಣೆ ಅರ್ಧಕ್ಕೆ ಮೊಟಕುಗೊಂಡಿದೆ.

ಇನ್ನು ಸುಮಾರು ಐದು ಲಕ್ಷ ರೂಪಾಯಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆಂದು ಇಟ್ಟುಕೊಂಡಿದ್ದ ಬಡ ಅಜ್ಜಿ ಗುಬ್ಬವ್ವ ಕಣ್ಣೀರು ಹಾಕಿದರೂ ಬಿಡದೆ ಸೀಜ್‌ ಮಾಡಿದ್ದಾರೆ. ನಂತರ 20 ಲಕ್ಷಕ್ಕೂ ಅಧಿಕ ಮೌಲ್ಯದ ಗಣೇಶ ಮೂರ್ತಿಗಳ ರೇಡ್‌ಗೆ ಹೋದಾಗ ಪಾಲಿಕೆ ಸದಸ್ಯರೊಬ್ಬರ ಒತ್ತಡಕ್ಕೆ ಮಣಿದು ರೇಡ್‌ ಮಾಡದೆ ಅರ್ಧಕ್ಕೆ ಉಳಿಸಿ ವಾಪಸ್ಸಾಗಿದ್ದಾರೆ.

ಇದರಿಂದಾಗಿ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಪ್ರಭಾವಿಗಳ ಒತ್ತಡದಿಂದಾಗಿ ಬಡವರಿಗೊಂದು ನ್ಯಾಯ, ದೊಡ್ಡವರಿಗೊಂದು ನ್ಯಾಯ ಎನ್ನುವಂತಾಗಿದೆ. ಬಡ ಅಜ್ಜಿಯ ಕಣ್ಣೀರಿಗೆ ಕರಗದ ಅಧಿಕಾರಿಗಳು, ಪ್ರಭಾವಿಗಳ ಒತ್ತಡಕ್ಕೆ ಮಣಿದು ವಾಪಸ್ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top