More

    ಹೊಸ ಚಿತ್ರದಲ್ಲಿ ರಣವೀರ್​ಗೆ ಇಬ್ಬರು ನಾಯಕಿಯರು … ಆ ಚಿತ್ರ ಯಾವ್ದು ಗೊತ್ತಾ?

    ಮುಂಬೈ: ಕಳೆದ ವರ್ಷ ಬಿಡುಗಡೆಯಾದ ‘ಸಿಂಬ’ ನಂತರ ನಟ ರಣವೀರ್​ ಸಿಂಗ್​ ಮತ್ತು ನಿರ್ದೇಶಕ ರೋಹಿತ್​ ಶೆಟ್ಟಿ ಇನ್ನೊಂದು ಹೊಸ ಚಿತ್ರದಲ್ಲಿ ಮತ್ತೆ ಜತೆಯಾಗಿ ಕೆಲಸ ಮಾಡುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಬಾರಿ ಆಕ್ಷನ್​ ಅಲ್ಲ, ಪಕ್ಕಾ ಕಾಮಿಡಿ ಎಂದು ಹೇಳಲಾಗಿತ್ತು.

    ಇದನ್ನೂ ಓದಿ: ಲಾಕ್​ಡೌನ್​ ನಂತರ ಗರಿಗೆದರಿದ ಬಾಲಿವುಡ್​ …

    ಈಗ ಆ ಚಿತ್ರದಿಂದ ಎರಡು ಅಪ್​ಡೇಟ್​ಗಳು ಬಂದಿವೆ. ಪ್ರಮುಖವಾಗಿ, ಅದು ಸಂಜೀವ್​ ಕುಮಾರ್​ ಅಭಿನಯದ ‘ಅಂಗೂರ್​’ ಚಿತ್ರದ ರೀಮೇಕ್​ ಆಗಿದ್ದು, ಈ ಚಿತ್ರದಲ್ಲಿ ರಣವೀರ್​ ಸಿಂಗ್​ಗೆ ನಾಯಕಿಯರಾಗಿ ಜಾಕ್ವೆಲೀನ್​ ಫರ್ನಾಂಡಿಸ್​ ಮತ್ತು ಪೂಜಾ ಹೆಗ್ಡೆ ಇಬ್ಬರೂ ನಟಿಸುತ್ತಿದ್ದಾರೆ.

    ‘ಅಂಗೂರ್​’ ಬಾಲಿವುಡ್​ನ ಕ್ಲಾಸಿಕ್​ ಚಿತ್ರ. ಶೇಕ್​ಸ್ಪಿಯರ್​ನ ‘ಕಾಮಿಡಿ ಆಫ್​ ಎರರ್ಸ್​’ ನಾಟಕವನ್ನು ಆಧರಿಸಿ ಗುಲ್ಜಾರ್​ ನಿರ್ದೇಶನ ಮಾಡಿದ್ದರು. ಇನ್ನು ಸಂಜೀವ್​ ಕುಮಾರ್​ ಮತ್ತು ದೇವನ್​ ವರ್ಮಾ ಈ ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಅದೇ ನಾಟಕವನ್ನಾಧರಿಸಿ, ಕನ್ನಡದಲ್ಲಿ ರಮೇಶ್​ ಅರವಿಂದ್​ ಅಭಿನಯದಲ್ಲಿ ‘ಉಲ್ಟಾ ಪಲ್ಟಾ’ ಚಿತ್ರ ನಿರ್ಮಾಣವಾಗಿತ್ತು. ಈಗ ಅದೇ ‘ಅಂಗೂರ್​’ ಚಿತ್ರವು ಬಾಲಿವುಡ್​ನಲ್ಲಿ ಇನ್ನೊಮ್ಮೆ ರೀಮೇಕ್​ ಆಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಇನ್ನೂ ಹಾಸಿಗೆ ಹಿಡಿದಿಲ್ಲ; ಏನೇನೋ ಬರೀಬೇಡಿ: ಸಂಜಯ್​ ದತ್​

    ರೋಹಿತ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಆಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ‘ಸಿಂಬಾ’, ‘ಸೂರ್ಯವಂಶಿ’ ನಂತರ ಮುಂದೇನು ಎಂದು ಅವರು ಯೋಚಿಸುತ್ತಿದ್ದಾಗ, ‘ಅಂಗೂರ್​’ ಚಿತ್ರವನ್ನು ರೀಮೇಕ್​ ಮಾಡುವ ಯೋಚನೆ ಹೊಳೆಯಿತಂತೆ. ಸದ್ಯಕ್ಕೆ ಕೆಲಸಗಳು ಪ್ರಾರಂಭವಾಗಿದ್ದು, ಮುಂದಿನ ವರ್ಷ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

    ಮಾನನಷ್ಟ ಮೊಕದ್ದಮೆ ಹಾಕಿದ್ದು ದುಡ್ಡಿಗಲ್ಲ, ಗೌರವಕ್ಕಾಗಿ ಎಂದ ರಿಚಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts