Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಇಂದು ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್​ ಆಗಮನ: ಎಲ್ಲದಕ್ಕೂ ಸಿದ್ಧರಾಗಿರುವಂತೆ ಶಾಸಕರಿಗೆ ಬಿಎಸ್​ವೈ ಸೂಚನೆ

Tuesday, 18.09.2018, 9:02 AM       No Comments

ಬೆಂಗಳೂರು: ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಇಂದು ಬಿಜೆಪಿ ಹೈಕಮಾಂಡ್​ ರಾಜ್ಯಕ್ಕೆ ಎಂಟ್ರಿಕೊಡಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಸೂಚನೆ ಮೇರೆಗೆ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್​ ರಾವ್​ ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ.

ರಾಜ್ಯ ರಾಜಕೀಯದ ಪರಿಸ್ಥಿತಿ, ದಿನೇದಿನೆ ಆಗುತ್ತಿರುವ ಬೆಳವಣಿಗೆ ಬಗ್ಗೆ ಬಿ.ಎಸ್​.ಯಡಿಯೂರಪ್ಪ ಅಮಿತ್​ ಶಾ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಮೈತ್ರಿ ಸರ್ಕಾರದ ಪತನವಾಗುವುದು ನಿಶ್ಚಿತ ಎಂದೇ ಹೇಳಲಾಗುತ್ತಿದ್ದು ನಾಳೆ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಾಯಕರು ಭಾಗಿಯಾಗಲಿದ್ದಾರೆ.

ಒಂದೆಡೆ ಬಿಜೆಪಿಯ ಕೆಲವು ಶಾಸಕರನ್ನು ಸೆಳೆಯಲು ಕೈ, ತೆನೆ ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಕಾಂಗ್ರೆಸ್​, ಜೆಡಿಎಸ್​ ಮುಖಂಡರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು ಅಂಥವರ ಜತೆ ಬಿ.ಎಸ್​.ವೈ ಹಾಗೂ ಹೈಕಾಂಡ್​ ಮಾತುಕತೆ ನಡೆಸಲಿದೆ.

ನಾಳೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿರುವ ಬಿಜೆಪಿ ಶಾಸಕರ ಸಭೆಗೆ ಎಲ್ಲದಕ್ಕೂ ಸಿದ್ಧರಾಗಿ ಬರುವಂತೆ ಬಿಎಸ್​ವೈ ಸೂಚನೆ ನೀಡಿದ್ದಾರೆ. ಸಭೆ ಬಳಿಕ ರೆಸಾರ್ಟ್​ಗೆ ತೆರಳುವ ಸಾಧ್ಯತೆಯೂ ಇದೆ ಎಂಬುದು ಮೂಲಗಳ ಮಾಹಿತಿ.

Leave a Reply

Your email address will not be published. Required fields are marked *

Back To Top