Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಪೊಲೀಸರಿಗೇ ಸವಾಲಾಗಿದ್ದ ಹಂತಕನ ಪತ್ತೆ ಹಚ್ಚಿದ ಶ್ವಾನ!

Wednesday, 13.09.2017, 8:33 PM       No Comments

ದಾವಣಗೆರೆ: ಪೊಲೀಸರಿಗೆ ಸವಾಲಾಗಿದ್ದ ಕೊಲೆ ಪ್ರಕರಣವನ್ನು ಶ್ವಾನವೊಂದು ಪತ್ತೆ ಹಚ್ಚಿದೆ. ವಾಸನೆಯ ಜಾಡು ಹಿಡಿದ ಶ್ವಾನ ಹಂತಕರು ಯಾರು ಎಂಬುದನ್ನು ಪತ್ತೆ ಮಾಡಿದೆ.

ಸೋಮವಾರ ರಾತ್ರಿ ದಾವಣಗೆರೆಯ ನಾಗನೂರು ಬಳಿ ಅಶೋಕ್​ ಎಂಬಾತನ ಬರ್ಬರ ಹತ್ಯೆ ನಡೆದಿತ್ತು. ಶವದ ಗುರುತು ಪತ್ತೆಯಾಗಬಾರದು ಅಂತ ಕಲ್ಲಿನಿಂದ ಜಜ್ಜಿ ಸಾಯಿಸಿದ್ದ ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು.

ಪೊಲೀಸರ ವಿಚಾರಣೆ ವೇಳೆ, ವಾಸನೆಯ ಜಾಡು ಹಿಡಿದು ಹೊರಟ ಶ್ವಾನ ಪೂಜಾ ಎಂಟು ಕಿಲೋ ಮೀಟರ್​​ ದೂರದಲ್ಲಿದ್ದ ಮನೆಯೊಂದರ ಮುಂದೆ ನಿಂತಿತ್ತು. ಆ ಮನೆಯಲ್ಲಿದ್ದವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂಬುದು ತಿಳಿದುಬಂದಿದೆ.

ಉದ್ಯೋಗಕ್ಕಾಗಿ ಚೆನ್ನೈಗೆ ಹೋಗಿದ್ದ ನಗರದ ಚಂದ್ರಮ್ಮ ಎಂಬುವರು ಅಲ್ಲೇ ಅಶೋಕ್​ ಎಂಬಾತನ ಜತೆ ಅಕ್ರಮ ಸಂಬಂಧ ಬೆಳೆಸಿದ್ದರು. ಇದನ್ನು ತಿಳಿದು ಚಂದ್ರಮ್ಮನ ಮಗ, ತನ್ನ ಸ್ನೇಹಿತರ ಜತೆ ಸೇರಿ ಅಶೋಕ್​ನನ್ನು ಕೊಲೆ ಮಾಡಿದ್ದಾನೆ. ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

 


Leave a Reply

Your email address will not be published. Required fields are marked *

Back To Top