Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಇಂದಿನಿಂದ ಮೋದಿ ತ್ರಿರಾಷ್ಟ್ರ ಪ್ರವಾಸ

Monday, 16.04.2018, 3:07 AM       No Comments

ನವದೆಹಲಿ: ವಿದೇಶಗಳೊಂದಿಗಿನ ಬಾಂಧವ್ಯ ವೃದ್ಧಿ ಆಶಯದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಸ್ವೀಡನ್, ಬ್ರಿಟನ್ ಮತ್ತು ಜರ್ಮನಿ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಸೋಮವಾರ ಸ್ವೀಡನ್​ಗೆ ತೆರಳಿ 17ರಂದು ಸ್ಟಾಕ್​ಹೋಮ್ಲ್ಲಿ ನಡೆಯುವ ಚೊಚ್ಚಲ ಭಾರತ-ನಾರ್ಡಿಕ್ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. 1988ರ ಬಳಿಕ ಸ್ಟಾಕ್​ಹೋಮ್ೆ ಇದೇ ಮೊದಲ ಬಾರಿ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದು, ನಾರ್ವೆ, ಫಿನ್​ಲ್ಯಾಂಡ್ , ಡೆನ್ಮಾರ್ಕ್ ಮತ್ತು ಐಸ್​ಲ್ಯಾಂಡ್​ನ ಗಣ್ಯರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಐರೋಪ್ಯ ಒಕ್ಕೂಟದ ಆಚೆಗೆ ಸಭೆ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದಲ್ಲಿ ಇದೇ ಮಾದರಿ ನಾರ್ಡಿಕ್ ರಾಷ್ಟ್ರಗಳ ಸಭೆ ನಡೆದಿತ್ತು. ದೇಶಗಳ ಮುಖ್ಯಸ್ಥರು ಮತ್ತು ಸರ್ಕಾರಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅದರ ಬಳಿಕ ಇದೇ ಮೊದಲ ಬಾರಿಗೆ ನಾರ್ಡಿಕ್ ರಾಷ್ಟ್ರಗಳ ಪ್ರಧಾನಿ ಅಥವಾ ಅಧ್ಯಕ್ಷರ ಮಟ್ಟದ ಶೃಂಗವೊಂದು ಆಯೋಜನೆಯಾಗಿದೆ. ಐರೋಪ್ಯ ಒಕ್ಕೂಟದ ಬೆಂಬಲಿಗ ರಾಷ್ಟ್ರವಾದ ಭಾರತದ ಆಹ್ವಾನ ಮೇರೆಗೆ ನಾರ್ಡಿಕ್ ರಾಷ್ಟ್ರಗಳ ಪ್ರಮುಖರು ಶೃಂಗಕ್ಕೆ ಸಮ್ಮತಿಸಿರುವುದು ವಿಶೇಷ.

ಸ್ನೇಹಬಂಧ: ಭಾರತದಲ್ಲಿನ ಆರ್ಥಿಕ ಬೆಳವಣಿಗೆ ಮೇಲೆ ವಿಶ್ವಾಸವಿಟ್ಟು ಕಳೆದ ವರ್ಷ 275 ವಿವಿಧ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ. ಎರಡೂ ರಾಷ್ಟ್ರಗಳ ನಡುವಿನ ಪ್ರಜಾಪ್ರಭುತ್ವ ಮೌಲ್ಯಗಳ ಹಂಚಿಕೆಯನ್ನು ಶೃಂಗ ಪ್ರತಿನಿಧಿಸುತ್ತದೆ ಎಂದು ಭಾರತದ ನಾರ್ವೆ ರಾಯಭಾರಿ ನಿಲ್ಸ್ ರಾಗ್ನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಜರ್ಮನಿಯಲ್ಲಿ ಮರ್ಕೆಲ್ ಭೇಟಿ

ಸ್ವೀಡನ್ ಮತ್ತು ಬ್ರಿಟನ್ ಭೇಟಿ ಮುಗಿಸಿದ ಬಳಿಕ ಮೋದಿ ಏ. 20ರಂದು ಜರ್ಮನಿಯ ಬರ್ಲಿನ್​ನಲ್ಲಿ ಚಾನ್ಸಲರ್ ಏಂಜೆಲಾ ಮರ್ಕೆಲ್​ರನ್ನು ಭೇಟಿ ಮಾಡಲಿದ್ದಾರೆ. ನಾಲ್ಕನೇ ಅವಧಿಗೆ ಮರ್ಕೆಲ್ ಚಾನ್ಸಲರ್ ಆಗಿ ಆಯ್ಕೆಯಾದ ಬಳಿಕ ನಡೆಯುತ್ತಿರುವ ಮಹತ್ವದ ಭೇಟಿಯಿದು.

ನಾಲ್ಕು ದಿನ ಬ್ರಿಟನ್ ಪ್ರವಾಸ

ಸ್ವೀಡನ್​ನಲ್ಲಿ ಶೃಂಗಸಭೆ ಮುಕ್ತಾಯ ಬಳಿಕ ಪ್ರಧಾನಿ ನಾಲ್ಕು ದಿನಗಳ ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದಾರೆ. ಕಾಮನ್​ವೆಲ್ತ್ ಸರ್ಕಾರಗಳ 52 ಮುಖ್ಯಸ್ಥರ ಸಭೆ ಅಡಿಯಲ್ಲಿ (ಸಿಎಚ್​ಒಜಿಎಮ್ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಜತೆಗೆ ಮೋದಿ ಎರಡು ಬಾರಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೊಂದು ಅಭೂತಪೂರ್ವ ಸ್ವಾಗತವಾಗಿದೆ ಎಂದು ಭಾರತದ ಕಚೇರಿ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ರಾಣಿ ಎಲಿಜಬೆತ್-2 ಭಾಗವಹಿಸಲಿರುವ ಸಿಎಚ್​ಒಜಿಎಮ್ೆ ಆಹ್ವಾನ ನೀಡಲಾಗಿರುವ ಮೂರು ವಿಶ್ವನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರಾಗಿದ್ದಾರೆ. ಯುವರಾಜ ಚಾರ್ಲ್ಸ್ ಪ್ರಧಾನಿ ಸ್ವಾಗತಕ್ಕಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ.

ಶೃಂಗದ ಅಜೆಂಡಾ ಏನು?

ಎರಡು ದಿನಗಳ ಶೃಂಗಸಭೆಯಲ್ಲಿ ಆರು ದೇಶಗಳ ಪ್ರಮುಖರು ಪಾಲ್ಗೊಳ್ಳುತ್ತಿದ್ದು, ಪರಿಸರ ಮತ್ತು ವಾತಾವರಣ, ವ್ಯಾಪಾರ ಮತ್ತು ಹೂಡಿಕೆ, ಸಹಕಾರ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ರ್ಚಚಿಸಲಿದ್ದಾರೆ ಎಂದು ಭಾರತದ ಸ್ವೀಡನ್ ರಾಯಭಾರಿ ಕ್ಲಾಸ್ ಮೊಲಿನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

Back To Top