Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಅತ್ಯುತ್ತಮ ಮೋದಿ, ನಿರಾಶಾದಾಯಕ ರಾಹುಲ್

Wednesday, 01.02.2017, 4:21 PM       No Comments

https://youtu.be/LW6QWGCuf78

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಗ್ರಾಮೀಣಾಭಿವೃದ್ಧಿ ಹಾಗೂ ಬಡ, ರೈತರ ಬಜೆಟ್ ಇದಾಗಿದೆ ಎಂದಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್ ಮುಂಬರುವ ದಿನಗಳಲ್ಲಿ ದೇಶದ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗಲಿದೆ. ವಿಶೇಷವಾಗಿ ಬಹುದೊಡ್ಡ ಕ್ಷೇತ್ರವಾಗಿರುವ ರೈಲ್ವೆ ಸೇವೆಗೆ ಒತ್ತು ಕೊಟ್ಟಿರುವುದನ್ನು ಕಾಣಬಹುದಾಗಿದೆ. ಭಷ್ಟಾಚಾರ ಮತ್ತು ಕಪ್ಪುಹಣ ತಡೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮದ ಪರಿಣಾಮವನ್ನು ಬಜೆಟ್ ಗಮನಿಸಬಹುದಾಗಿದೆ. ಜೇಟ್ಲಿ ಅವರು ಗ್ರಾಮೀಣಾಭಿವೃದ್ಧಿ, ಬಡ ಜನರ ಕಲ್ಯಾಣ ಹಾಗೂ ದಲಿತರು, ಶೋಷಿತರು ಮತ್ತು ರೈತರ ಕಲ್ಯಾಣಕ್ಕೆ ಹೊಸ ಯೋಜನೆ- ಅನುದಾನ ನೀಡುವಲ್ಲಿ ಮಹತ್ವ ನೀಡಿರುವುದನ್ನು ಗಮನಿಸಬಹುದಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಬೆನ್ನೆಲುಬಾಗಿರುವ ರೈತರ ಆದಾಯ ದುಪ್ಪಟ್ಟು ಆಗಬೇಕೆನ್ನುವುದೇ ಅರ್ಕಾರದ ಆಶಯವಾಗಿದೆ ಎಂದು ಹೇಳಿರುವ ಮೋದಿ, ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳಿಂದ ಮುಂಬರುವ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂದು ಹೇಳಿದರು.

 

ರೈಲ್ವೆ ಕ್ಷೇತ್ರವನ್ನೂ ಈ ಬಜೆಟ್​ನಲ್ಲಿ ಸೇರ್ಪಡೆ ಮಾಡಿ ಆ ಕ್ಷೇತ್ರಕ್ಕೆ ಸಿಗಬೇಕಾದ ನ್ಯಾಯ ಸಿಗದಂತೆ ಮಾಡಿದ್ದಾರೆ. ಇದೊಂದು ಒಳ್ಳೆಯ ಬಜೆಟ್ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ರೈತರ ಪರವಾಗಿಯೂ ಇರುವ ಬಜೆಟ್ ಇದಲ್ಲ. ಹೊಸದೇನನ್ನೂ ನೀಡಲಾಗಿಲ್ಲ.

-ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ

 

ಭಾರಿ ಪಟಾಕಿಗಳನ್ನು ನಿರೀಕ್ಷೆ ಮಾಡಿದ್ದೆವು. ಎಲ್ಲವೂ ಠುಸ್ ಆಗಿದೆ. ಜನಸಾಮಾನ್ಯನಿಗೆ ಏನನ್ನೂ ನೀಡಿಲ್ಲ. ಬಡವರಿಗೆ ಹೊರೆಯಾಗಬಲ್ಲ ಬಜೆಟ್ ಮಂಡಿಸಿದ್ದಾರಷ್ಟೆ. ಯುವಜನತೆಗೆ ಏನೂ ನೀಡಲಾಗಿಲ್ಲ. ನಿಜಕ್ಕೂ ನಿರಾಶಾದಾಯಕ ಬಜೆಟ್ ಇದಾಗಿದೆ.

– ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

 

ಬಡವರ, ಮಹಿಳೆಯರ ಪರವಾದ ಬಜೆಟ್ ಇದಾಗಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬಜೆಟ್​ನಲ್ಲಿ ಪ್ರತಿಬಿಂಬಿಸಿದೆ. ಈಗ ರಾಜಕಾರಣದಲ್ಲಿ ಪಾರದರ್ಶಕತೆ ಬಂದಿದೆ ಎನ್ನುವುದನ್ನು ಆತ್ಮವಿಶ್ವಾಸದಿಂದ ಹೇಳಿಕೊಳ್ಳಬಹುದು.

– ಅಮಿತ್ ಷಾ, ಬಿಜೆಪಿ ರಾಷ್ಟ್ರಾಧ್ಯಕ್ಷ

 

ಇಡೀ ರಾಜಕಾರಣದ ದಿಕ್ಕನ್ನೇ ಬದಲಾಯಿಸುವ ಮಾದರಿ ಬಜೆಟ್ ಇದಾಗಿದೆ. ಎಲ್ಲಾ ಕ್ಷೇತ್ರದವರೂ ಸ್ವಾಗತಿಸುವ ಬಜೆಟ್ ಇದಾಗಿದೆ.

– ಅನಂತ ಕುಮಾರ್, ಕೇಂದ್ರ ಸಚಿವ

 

ಮಹತ್ವದ ಮತ್ತು ಐತಿಹಾಸಿಕ ಬಜೆಟ್ ಇದಾಗಿದೆ. ದೂರಗಾಮಿ ಪರಿಣಾಮ ಇರುವಂತಹ ಬಜೆಟ್ ಇದಾಗಿದೆ.

– ನಿತಿನ್ ಗಡ್ಕರಿ, ಕೇಂದ್ರ ಸಚಿವ

 

ರಕ್ಷಣಾ ಕ್ಷೇತ್ರಕ್ಕೆ ಏನೇನನ್ನು ನೀಡಿಲ್ಲ. ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಮಂಡಿಸಿದ ಬಜೆಟ್ ಅಷ್ಟೆ.

– ರೇಣುಕಾ ಚೌಧರಿ, ಕಾಂಗ್ರೆಸ್ ನಾಯಕಿ

 

ಅತ್ಯುತ್ತಮ ಬಜೆಟ್ ಎನ್ನುವುದರಲ್ಲಿ ಯಾವುದೇ ಸಂದೇವಿಲ್ಲ. ಕೌಶಲಾಭಿವೃದ್ಧಿಗೆ ವಿಶೇಷ ಗಮನ ಹರಿಸಿರುವುದನ್ನು ಗಮನಿಸಬಹುದಾಗಿದೆ.

– ಸೋನಾಲಿ ಜೇಟ್ಲಿ, ಅರುಣ್ ಜೇಟ್ಲಿ ಪುತ್ರಿ

 

ಪ್ರತಿವರ್ಷ ಬಜೆಟ್ ಮಂಡನೆ ಮಾಡಿ ಏನು ಪ್ರಯೋಜನ? ಕಳೆದ ವರ್ಷ ಬಜೆಟ್​ನಲ್ಲಿ ನೀಡಲಾಗಿರುವ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ?

– ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ

 

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

 

Leave a Reply

Your email address will not be published. Required fields are marked *

Back To Top