Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News

ಭದ್ರತಾ ನಿಯಮಗಳನ್ನು ಕಡೆಗಣಿಸಿ ಸೀ ಪ್ಲೇನ್ ಏರಿ ಅಂಬಾಜಿ ದರ್ಶನ ಪಡೆದ ಮೋದಿ

Tuesday, 12.12.2017, 6:33 PM       No Comments

<< ಗುಜರಾತ್​ ಚುನಾವಣಾ ಪ್ರಚಾರದ ಕೊನೆಯ ದಿನ ಪ್ರಧಾನಿಯಿಂದ ಅಚ್ಚರಿಯ ನಡೆ >>

ಅಹಮದಾಬಾದ್​: ಗುಜರಾತ್​​ ವಿಧಾನಸಭೆ ಚುನಾವಣೆಯ 2ನೇ ಹಂತದ ಬಹಿರಂಗ ಚುನಾವಣಾ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸೀಪ್ಲೇನ್ ಬಳಸಿ ಹಾರಾಡಿದ್ದು, ಭದ್ರತಾ ಲೋಪದ ಚರ್ಚೆಗೆ ಕಾರಣವಾಗಿದೆ.

ಅಹಮದಾಬಾದ್​ನಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್​​ ಗಾಂಧಿ ರೋಡ್​ಶೋಗೆ ಅನುಮತಿ ದೊರೆತಿರಲಿಲ್ಲ. ಆದಾಗ್ಯೂ ಅಹಮದಾಬಾದ್​ನ ಸಾಬರಮತಿ ನದಿಯಿಂದ 180 ಕಿ.ಮೀ. ದೂರದಲ್ಲಿರುವ ಮೆಹಸಾನಾ ಜಿಲ್ಲೆಯ ಧರೋಯಿ ಡ್ಯಾಮ್ಗೆ ಸೀಪ್ಲೇನ್ ಮೂಲಕ ಪ್ರಧಾನಿ ತೆರಳಿದರು. ಚುನಾವಣೆ ಹಿನ್ನೆಲೆಯಲ್ಲಿ ಅಂಬಾಜಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಪುನಃ ಸೀಪ್ಲೇನ್ ಏರಿ ಸಾಬರಮತಿ ಕಡೆ ತೆರಳಿದರು.

ಭದ್ರತಾ ನಿಯಮದ ಅನ್ವಯ ಪ್ರಧಾನಿಯಾದವರು ಡಬಲ್​ ಅಥವಾ ಬಹು ಇಂಜಿನ್​ ವಿಮಾನವನ್ನು ಬಳಸಬೇಕು. ಆದರೆ, ಅವರು ಸಿಂಗಲ್​ ಇಂಜಿನ್​ ವಿಮಾನ ಬಳಸಿರುವುದು ಭದ್ರತಾ ಲೋಪಕ್ಕೆ ಕಾರಣವಾಗಿದೆ.

ಸೀಪ್ಲೇನ್ ಪೈಲಟ್​ ಜಾನ್​ ಗುಲೆಟ್​ ಮಾತನಾಡಿ, ಇದೊಂದು ಸಂತೋಷದಾಯಕ ಅನುಭವ ಹಾಗೂ ಪ್ರಧಾನಿ ಮೋದಿ ಅವರು ಒಳ್ಳೆಯ ಪ್ರಯಾಣಿಕ ಕೂಡ ಎಂದರು. ಕಡಲ ವಿಮಾನ ಈಗಾಗಲೇ ಹಲವು ದೇಶಗಳಲ್ಲಿ ಸಾಮಾನ್ಯವಾಗಿದೆ. ಭಾರತವು ನದಿ, ಸಮುದ್ರ ಹಾಗೂ ಕರಾವಳಿ ತೀರಗಳನ್ನು ಹೊಂದಿರುವುದರಿಂದ ಇದು ಜನಪ್ರಿಯವಾಗಲಿದೆ ಎಂದು ಹೇಳಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top