Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಒಂದೇ ದಿನದಲ್ಲಿ 2.85 ಲಕ್ಷ ಟ್ವಿಟರ್​ ಫಾಲೋಯರ್​ಗಳನ್ನು ಕಳೆದುಕೊಂಡ ಮೋದಿ

Friday, 13.07.2018, 8:13 PM       No Comments

ನವದೆಹಲಿ: ಸಾಮಾಜಿಕ ಜಾಲ ತಾಣ ಟ್ವಿಟರ್​ ನಕಲಿ ಖಾತೆಗಳನ್ನು ತೊಡೆದು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದೇ ದಿನದಲ್ಲಿ 3 ಲಕ್ಷ ಫಾಲೋಯರ್​ಗಳನ್ನು ಕಳೆದುಕೊಂಡಿದ್ದಾರೆ. ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು 17 ಸಾವಿರ ಫಾಲೋಯರ್​ಗಳನ್ನು ಕಳೆದುಕೊಂಡಿದ್ದಾರೆ.

ಟ್ವಿಟರ್​ ಆರಂಭಿಸಿರುವ ನಕಲಿ ಖಾತೆ ಯಜ್ಱಕ್ಕೂ ಮೊದಲು ನರೇಂದ್ರ ಮೋದಿ ಅವರು 43.4 ಮಿಲಿಯನ್​ ಫಾಲೋಯರ್​ಗಳನ್ನು ಹೊಂದಿದ್ದರು. ಆದರೀಗ 43.1 ಫಾಲೋಯರ್​ಗಳನ್ನು ಹೊಂದಿದ್ದಾರೆ.

ವಿಶ್ವದ ಪ್ರಮುಖರ, ಪ್ರಮುಖ ಸಂಘ ಸಂಸ್ಥೆಗಳ ಟ್ವಿಟರ್​ ಅಕೌಂಟ್​ಗಳ ಮೇಲೆ 24 ಗಂಟೆಗಳ ನಿಗಾ ವಹಿಸುವ SocialBlade.com ಎಂಬ ವೆಬ್​​ಸೈಟ್​ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಅದರಂತೆ ಮೋದಿ ಅವರ @narendramodi ಟ್ವಿಟರ್​ ಖಾತೆಯು 2,84,746 ಫಾಲೋಯರ್​ಗಳನ್ನು ಕಳೆದುಕೊಂಡಿದೆ. ಇದೇ ವೇಳೆ ಪ್ರಧಾನಮಂತ್ರಿ ಕಚೇರಿ ಖಾತೆ @PMOIndia ಕೂಡ 140,635 ಫಾಲೋಯರ್​ಗಳನ್ನು ಕಳೆದುಕೊಂಡಿದೆ.

ಇನ್ನು ರಾಹುಲ್​ ಗಾಂಧಿ ಅವರ @RahulGandhi ಅವರ ಖಾತೆ 17,503 ಫಾಲೋಯರ್​ಗಳನ್ನು ಕಳೆದುಕೊಂಡಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಅವರದೇ ಪಕ್ಷದ ಮುಖಂಡ ಶಶಿ ತರೂರ್​ ಅವರು ಒಂದೂವರೆ ಲಕ್ಷ ಫಾಲೋಯರ್​ಗಳನ್ನು ಕಳೆದುಕೊಂಡಿದ್ದಾರೆ.

ನಕಲಿ ಖಾತೆಗಳು, ನಿರ್ಬಂಧಿತ ಖಾತೆಗಳನ್ನು ತನ್ನ ವೇದಿಕೆಯಿಂದ ನಿರ್ಮೂಲನೆ ಮಾಡುವುದಾಗಿ ಟ್ವಟಿರ್​ ಇತ್ತೀಚೆಗಷ್ಟೇ ಘೋಷಿಸಿತ್ತು. ಅದರಂತೆ ಶುಚಿ ಕಾರ್ಯಕ್ಕೆ ಟ್ವಿಟರ್​ ಚಾಲನೆ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಫಾಲೋಯರ್​ಗಳನ್ನು ಹೊಂದಿರುವವರ ಅಕೌಂಟ್​ಗಳಲ್ಲಿ ಭಾರಿ ಪ್ರಮಾಣದಲ್ಲಿ ಫಾಲೋಯರ್​ಗಳು ಕ್ಷಿಣಿಸುತ್ತಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ವಿಟರ್​ನ ಕಾನೂನು, ನೀತಿ ನಿರೂಪಣಾ ವಿಭಾಗದ ಮುಖ್ಯಸ್ಥ ವಿಜಯ್​ ಗದ್ದೆ, ” ಫಾಲೋಯರ್​ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿರುವುದರಿಂದ ಹಲವರಿಗೆ ಬೇಸರವಾಗಿರಬಹುದು. ಆದರೆ, ನಾವು ವಿಶ್ವಾಸಾರ್ಹತೆ, ಪಾರದರ್ಶಕತೆ ಮೂಲಕ ಟ್ವಿಟರ್​ಅನ್ನು ವಿಶ್ವಸನೀಯ ಮಾಧ್ಯಮವನ್ನಾಗಿಸಬೇಕಿದೆ,” ಎಂದಿದ್ದಾರೆ.

ಇನ್ನೂ ಯಾರ್ಯಾರು ಎಷ್ಟೆಷ್ಟು ಕಳೆದುಕೊಂಡರು?

  1. ಸುಷ್ಮಾ ಸ್ವರಾಜ್​ -74,132
  2. ಅಮಿತ್​ ಷಾ – 33,363
  3. ಅರವಿಂದ ಕೇಜ್ರಿವಾಲ್ ​- 91,555
  4. ಡೊನಾಲ್ಡ್​ ಟ್ರಂಪ್​ – 100,000
  5. ಬರಾಕ್​ ಒಬಾಮ- 400,000

Leave a Reply

Your email address will not be published. Required fields are marked *

Back To Top