Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಪತಿಗೆ ಕೈ ತೋರಿಸಿ ಮಾತನಾಡಿದ್ದಕ್ಕೆ ವೈದ್ಯಾಧಿಕಾರಿಗೆ ಜಿಪಂ ಸದಸ್ಯೆಯಿಂದ ಅವಾಜ್​

Thursday, 14.06.2018, 8:11 AM       No Comments

ದಾವಣಗೆರೆ: ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಸಕರ ಸಮ್ಮುಖದಲ್ಲೇ ಅವಾಜ್ ಹಾಕಿರುವ ಘಟನೆ ನಡೆದಿದೆ.
ಬಿಜೆಪಿ ಶಾಸಕ ಎಸ್​.ವಿ.ರಾಮಚಂದ್ರಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಕುಮಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಶಾಂತಕುಮಾರಿ ಪತಿ ಶಶಿಧರ್​ ಕೂಡ ಇದ್ದರು. ವೈದ್ಯಾಧಿಕಾರಿ ಮೇಲೆಯೂ ಅವರೇ ಅಧಿಕಾರ ಚಲಾಯಿಸಿದರು.

ಆಗ ವೈದ್ಯಾಧಿಕಾರಿ ಮುರಳೀಧರ್​ ಅವರು, ಸುಮ್ಮನೆ ಆರೋಪ ಮಾಡಬೇಡಿ. ಇಡೀ ಸ್ಟಾಫ್​ ಕರೆಸಿ ಕೇಳಿ ನೋಡಿ ಅಂತು ಬೆರಳು ತೋರಿಸಿ ಮಾತನಾಡಿದರು. ಇಷ್ಟಕ್ಕೇ ಕೋಪಗೊಂಡ ಜಿಲ್ಲಾ ಪಂಚಾಯಿತಿ ಸದಸ್ಯೆ ಮುರಳೀಧರ್​ಗೆ ಫುಲ್​ ಆವಾಜ್​ ಹಾಕಿದರು. ನನ್ನ ಪತಿಗೇ ಕೈ ತೋರಿಸಿ ಮಾತನಾಡುತ್ತೀಯಾ ಹುಷಾರ್​ ಎಂದು ತರಾಟೆಗೆ ತೆಗೆದುಕೊಂಡರು. ಇಷ್ಟೆಲ್ಲಾ ಆದರೂ ಶಾಸಕರು ಮಾತ್ರ ಸುಮ್ಮನಿದ್ದರು. ಹೀಗೆ ಪತ್ನಿಯ ಅಧಿಕಾರವನ್ನು ಪತಿ ಚಲಾಯಿಸುವುದು ಎಷ್ಟರಮಟ್ಟಿಗೆ ಸರಿ? ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *

Back To Top