Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ರಾಜ್ಯದಲ್ಲಿ ಲೀಟರ್​ಗೆ 10 ಪೈಸೆ ಏರಿಕೆ

Tuesday, 16.01.2018, 1:13 PM       No Comments

ಬೆಂಗಳೂರು: ದೇಶಾದ್ಯಂತ ಮಂಗಳವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ತುಸು ಏರಿಕೆ ಕಂಡಿದೆ.

ರಾಜ್ಯದಲ್ಲಿ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ ಸುಮಾರು 10 ಪೈಸೆ ಏರಿಕೆ ಕಂಡಿದ್ದು, ಇಂದಿನ ಪೆಟ್ರೋಲ್​ ದರ 72.39 ರೂಗಳಷ್ಟಿದೆ. ಡೀಸೆಲ್​ ಬೆಲೆಯಲ್ಲೂ 14 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್​ಗೆ 62.92 ರೂ. ನಿಗದಿಯಾಗಿದೆ.

ಇನ್ನುಳಿದಂತೆ ದೆಹಲಿ, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈಗಳಲ್ಲೂ ತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 9 ಪೈಸೆ ಹೆಚ್ಳಳವಾಗಿದ್ದು, ಡೀಸೆಲ್​ ಬೆಲೆಯಲ್ಲಿ 14 ಪೈಸೆ ಏರಿಕೆ ಕಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇಂದಿನ ಪೆಟ್ರೋಲ್​ ದರ ಲೀಟರ್​ಗೆ 71.27 ರೂ. ನಿಗದಿಯಾಗಿದ್ದರೆ, ಡೀಸೆಲ್​ಗೆ 61.88 ರೂ.ಗಳಷ್ಟಿದೆ.

ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ಬೆಲೆ 74 ರೂಪಾಯಿಯಾದರೆ ಡೀಸೆಲ್​ ಬೆಲೆ 64.54 ರೂಗಳಾಗಿದೆ. ಮಹಾನಗರಿ ಮುಂಬೈನಲ್ಲಿ ಪೆಟ್ರೋಲ್​ಗೆ​ 79.15 ರೂ. ಹಾಗೂ ಡೀಸೆಲ್​ಗೆ 65.9 ರೂ. ದರ ನಿಗದಿಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್​ 73.89 ರೂ. ಹಾಗೂ ಡೀಸೆಲ್​ 65.23 ರೂ. ದರ ನಿಗದಿಯಾಗಿದೆ.

ದೇಶೀಯ ಇಂಧನ ಬೆಲೆಯು ಜಾಗತಿಕ ಕಚ್ಚಾ ಬೆಲೆಗಳು ಮತ್ತು ಡಾಲರ್ – ರೂಪಾಯಿ ವಿನಿಮಯ ದರದಿಂದ ನಿರ್ಧರಿಸಲ್ಪಡುತ್ತವೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top