Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News

ಗುಜರಾತ್​ ಚುನಾವಣಾ ಪ್ರಚಾರದ ವೇಳೆ ಮುಜುಗರಕ್ಕೀಡಾದ್ರಾ ರಾಹುಲ್..?

Sunday, 10.12.2017, 2:13 PM       No Comments

ಅಹಮದಾಬಾದ್: ಗುಜರಾತ್​ನಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್​ ಗಾಂಧಿ ಭಾನುವಾರ ಪ್ರಚಾರದ ವೇಳೆ ಕೊಂಚ ಕಾಲ ಮುಜುಗರಕ್ಕೀಡಾದ ಘಟನೆ ನಡೆದಿದೆ.

ತಮ್ಮ ಮತ ಬೇಟೆಯ ಅಂಗವಾಗಿ ಡಾಕೋರ್​ನಲ್ಲಿರುವ ರಾಂಚೋಡ್​ ಜೀ ದೇವಾಲಯಕ್ಕೆ ಭಾನುವಾರ ರಾಹುಲ್​ ಭೇಟಿ ನೀಡಿದ್ದರು. ಈ ವೇಳೆ ದರ್ಶನ ಪಡೆದು ದೇವಾಲಯದಿಂದ ಹೊರ ಬರುವ ವೇಳೆ ಅಲ್ಲಿ ನೆರೆದಿದ್ದ ಜನ ರಾಹುಲ್​ರನ್ನು ನೋಡಿದ್ದಾರೆ.

ಈ ವೇಳೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ರಾಹುಲ್​ರನ್ನು ನೋಡಿದ ಮಂದಿ ‘ಮೋದಿ, ಮೋದಿ’ ಎಂದು ಕೂಗಲು ಪ್ರಾರಂಭಿಸಿದ್ದಾರೆ. ಇದನ್ನು ಕೇಳಿದ ರಾಹುಲ್​ ಸ್ವಲ್ಪ ಮುಜುಗರ ಅನುಭವಿಸಿದ್ದಾರೆ.

ಆನಂತರ ಡಾಕೋರ್​ನಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ರಾಹುಲ್ ಪಾಲ್ಗೊಂಡರು. ಎರಡನೇ ಹಂತದ ಮತದಾನ ಡಿ.14ರಂದು ನಡೆಯಲಿದ್ದು 18 ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top