Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

‘ಗುಂಪು ಪೊಲೀಸ್​ಗಿರಿ’ಗೆ ಜನಮೆಚ್ಚುಗೆ

Sunday, 14.01.2018, 2:09 AM       No Comments

ಹುಬ್ಬಳ್ಳಿ: ಮನೆಕಳ್ಳತನ, ಸರಗಳ್ಳತನ ಸೇರಿದಂತೆ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೋಕುಲ ರೋಡ್ ಠಾಣೆ ಪೊಲೀಸರು ‘ಗುಂಪು ಪೊಲೀಸ್​ಗಿರಿ’ ಎಂಬ ವಿಭಿನ್ನ ಪ್ರಯತ್ನಕ್ಕೆ ನಾಂದಿ ಹಾಡಿದ್ದು, ಇದಕ್ಕೆ ಭಾರಿ ಜನಮೆಚ್ಚುಗೆ ವ್ಯಕ್ತವಾಗಿದೆ.

ನಗರ ಬೆಳೆದಂತೆಲ್ಲ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಪರಾಧಿಗಳನ್ನು ಹಿಡಿಯಲು ಪೊಲೀಸರು ಚಾಪೆ ಕೆಳಗೆ ನುಸುಳಿದರೆ, ಕಳ್ಳರು ರಂಗೋಲಿ ಕೆಳಗೇ ನುಸುಳುತ್ತಾರೆ. ಹಾಗಾಗಿ, ಅಂತಹ ಕೃತ್ಯಗಳಿಗೆ ಆರಂಭದಲ್ಲೇ ಕತ್ತರಿ ಪ್ರಯೋಗ ಮಾಡುವ ಉದ್ದೇಶದಿಂದ ಗೋಕುಲ ರೋಡ್ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಮಲ್ಲಯ್ಯ ಮಠಪತಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ.

ಹತ್ತಾರು ಪೊಲೀಸ್ ಸಿಬ್ಬಂದಿಯನ್ನು ಸೇರಿಸಿ ಗುಂಪು ರಚಿಸಲಾಗಿದೆ. ಇನ್ಸ್​ಪೆಕ್ಟರ್ ಮಲ್ಲಯ್ಯ ಮಠಪತಿ ತಂಡದ ನೇತೃತ್ವ ವಹಿಸಿದ್ದಾರೆ. ಅವರ ಜೊತೆಗೆ ಪಿಎಸ್​ಐ, ಎಎಸ್​ಐ, ಮುಖ್ಯಪೇದೆ, ಪೇದೆ ತಂಡದಲ್ಲಿದ್ದಾರೆ. ಈ ಗುಂಪಿನವರು ಪ್ರತಿನಿತ್ಯ ಒಂದೊಂದು ಬಡಾವಣೆಗೆ ಬೈಕ್​ನಲ್ಲಿ ತೆರಳುತ್ತಾರೆ. ಇನ್ಸ್​ಪೆಕ್ಟರ್ ಸೂಚನೆಯಂತೆ ಆಯಕಟ್ಟಿನ ಜಾಗಗಳನ್ನು ಪರಿಶೀಲಿಸುತ್ತ ಸಾಗುತ್ತಾರೆ.

ರೌಡಿಗಳು, ರಸ್ತೆಬದಿ ಮದ್ಯಪಾನ, ಧೂಮಪಾನ ಮಾಡುವವರು, ಹುಡುಗಿಯರನ್ನು ಚುಡಾಯಿಸುವವರು, ಕಾಲೇಜ್ ಬಳಿ ರ್ಯಾಗಿಂಗ್ ಮಾಡುವವರು, ಸಮಾಜ ಘಾತಕ ಶಕ್ತಿಗಳು, ಹೀಗೆ ಅಪರಾಧಿಗಳ ಮೇಲೆ ಈ ತಂಡ ಹದ್ದಿನ ಕಣ್ಣು ಇಡುತ್ತದೆ. ಜನಸಾಮಾನ್ಯರಿಗೆ ತೊಂದರೆ ಉಂಟಾಗಿದ್ದರೆ ಹೇಳಿಕೊಳ್ಳಬಹುದು. ಸಾಧ್ಯವಿದ್ದಲ್ಲಿ ಸ್ಥಳದಲ್ಲೇ ಪರಿಹಾರ ಒದಗಿಸುತ್ತಾರೆ.

ಹೀಗೆ ಪೊಲೀಸರು ಗುಂಪು ಗುಂಪಾಗಿ ಬರುವುದರಿಂದ ಅನೇಕ ಲಾಭಗಳಿವೆ. ಒಬ್ಬೊಬ್ಬರು ಬಂದರೆ ಕೆಲವರು ಹೆದರುವುದಿಲ್ಲ. ಖಾಕಿ ತೊಟ್ಟ ಪೊಲೀಸರು ಗುಂಪಿನಲ್ಲಿ ಬರುವುದರಿಂದ ಪುಂಡ ಪೋಕರಿಗಳು ಹಿಂಜರಿಯುತ್ತಾರೆ. ಪೊಲೀಸರು ಆಗಾಗ ಕಾಣುತ್ತಿರುವುದರಿಂದ ಅನೇಕರಿಗೆ ಕಾನೂನು ಪಾಲಿಸುವ ಕುರಿತು ನೆನಪಾಗುತ್ತಿರುತ್ತದೆ. ಇದರಿಂದಾಗಿ ಅಪರಾಧ ಕೃತ್ಯಗಳ ಸಂಖ್ಯೆಯೂ ಕಡಿಮೆಯಾಗಲಿದೆ ಎನ್ನುತ್ತಾರೆ ಗೋಕುಲ ರೋಡ್ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಮಲ್ಲಯ್ಯ ಮಠಪತಿ.

ಸಾರ್ವಜನಿಕರಿಗೆ ಅಭಯ

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಹೊಸ ಬೀಟ್ ಪದ್ಧತಿ’ಗೆ ಬೆಂಬಲವಾಗಿ ಈ ಯೋಜನೆ ರೂಪಿಸಲಾಗಿದೆ. ಗೋಕುಲ ರೋಡ್ ಠಾಣೆ ವ್ಯಾಪ್ತಿಯಲ್ಲಿ 68 ಬೀಟ್​ಗಳಿವೆ. ತೋಳನಕೆರೆ, ಗ್ರೀನ್ ಗಾರ್ಡನ್, ಶಿವಪುರ ಕಾಲನಿ, ಡಾಲರ್ಸ್ ಕಾಲನಿ, ಅಕ್ಷಯ ಪಾರ್ಕ್, ಚೈತನ್ಯ ನಗರ, ಗೋಕುಲ ಇಂಡಸ್ಟ್ರಿಯಲ್ ಎಸ್ಟೇಟ್, ರವಿನಗರ, ಶ್ರೀಕೃಷ್ಣ ಲೇಔಟ್, ಮಾರುತಿ ನಗರ, ರೇಣುಕಾ ನಗರ, ವಿವೇಕಾನಂದ ನಗರ, ಸಿಲ್ವರ್ ಟೌನ್, ಮಂಜುನಾಥ ನಗರ, ವೀರಾಂಜನೇಯ ನಗರ ಸೇರಿದಂತೆ ಇತರ ಬಡಾವಣೆಗಳಿಗೆ ಒಂದೊಂದು ದಿನ ಗುಂಪು ಪೊಲೀಸ್ ತಂಡ ತೆರಳಿ ಸಾರ್ವಜನಿಕರಿಗೆ ಅಭಯ ನೀಡುತ್ತಿದೆ.

Leave a Reply

Your email address will not be published. Required fields are marked *

Back To Top