Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ವಿಜಯಪುರ ಮಹಾನಗರ ಪಾಲಿಕೆ ಎಡವಟ್ಟು: ಫಲಾನುಭವಿಗಳ ಕೈ ಸೇರಿಲ್ಲ ಆಶ್ರಯ ಮನೆ

Wednesday, 15.11.2017, 11:30 AM       No Comments

>> 3750 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದ ಪಟ್ಟಿ ಕ್ಯಾನ್ಸಲ್..!

ವಿಜಯಪುರ : ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಅನ್ನುವ ಹಾಗಾಗಿದೆ ವಿಜಯಪುರ ಮಹಾನಗರ ಪಾಲಿಕೆ ಸ್ಥಿತಿ. ಪಾಲಿಕೆ ಯಡವಟ್ಟಿನಿಂದಾಗಿ ಬಡವರಿಗೆ ಬರಬೇಕಿದ್ದ ಪ್ರಧಾನಮಂತ್ರಿ ಆವಾಸ್ ಯೋಜನೆ ಮನೆಗಳು ಸಿಗುತ್ತಿಲ್ಲ.

ಜುಲೈ 2016 ರಲ್ಲಿ ನಿರಾಶ್ರಿತರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಆಶ್ರಯ ಮನೆ ನೀಡುವುದಾಗಿ ಮಹಾನಗರ ಪಾಲಿಕೆ ಅರ್ಜಿ ಕರೆದಿತ್ತು. ಈ ವೇಳೆ 10 ಸಾವಿರ ನಿರಾಶ್ರಿತರು ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ 3750 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು.

ಮತ್ತೆ ಪಾಲಿಕೆ ಉಲ್ಟಾ ಹೊಡೆದಿದ್ದು ಅರ್ಹ ಫಲಾನುಭವಿಗಳು ಇಲ್ಲ ಅಂತ ಫಲಾನುಭವಿಗಳ ಲಿಸ್ಟ್ ಕ್ಯಾನ್ಸಲ್ ಮಾಡಿದೆ. ಇದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದ್ದು, ನಿರಾಶ್ರಿತರ ಪಟ್ಟಿ ಸಿದ್ಧವಿದ್ದರೂ ಇದನ್ನು ರದ್ದುಗೊಳಿಸಿ ಪಾಲಿಕೆ ಸದಸ್ಯರು ತಮಗೆ ಬೇಕಾದವರಿಗೆ ಮನೆ ಕೊಡಿಸಲು ಹುನ್ನಾರ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ವಿಜಯಪುರ ನಗರದಲ್ಲಿ 45ಕ್ಕೂ ಹೆಚ್ಚು ಸ್ಲಂಗಳಲ್ಲಿ ವಾಸಿಸುತ್ತಿದ್ದವರಿಗೆ ಆಸರೆ ಇಲ್ಲದಂತಾಗಿದ್ದು, ಈಗಿರುವ ಪಟ್ಟಿಯಂತೆ ಮನೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು ಆಯ್ಕೆಯಾಗಿರುವ ಫಲಾನುಭವಿಗಳಲ್ಲಿ ಬಹಳಷ್ಟು ಜನರು ಸೂಕ್ತ ದಾಖಲೆಗಳನ್ನು ಕೊಟ್ಟಿಲ್ಲದ್ದರಿಂದ ಪಟ್ಟಿಗಳನ್ನು ರದ್ದು ಮಾಡಲು ಯೋಚಿಸಲಾಗಿದೆ. ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿರಾಶ್ರಿತರ ಸಭೆ ಕರೆಯಲಾಗಿದ್ದು, ಪಟ್ಟಿ ರದ್ದುಗೊಳಿಸಬೇಕಾ ಅಥವಾ ಅನರ್ಹರನ್ನು ಕೈಬಿಟ್ಟು ಉಳಿದವರಿಗೆ ಮನೆ ಹಂಚಿಕೆ ಮಾಡಬೇಕಾ ಅನ್ನೋದು ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top