Monday, 22nd October 2018  

Vijayavani

₹9 ಲಕ್ಷ ಅಡ್ವಾನ್ಸ್ ಪಡೆದಿದ್ದು ನಿಜ - ಸರ್ಜಾ ವಿರುದ್ಧ ಮೀ ಟೂ ಬಳಸಿಕೊಂಡಿಲ್ಲ - ದಿಗ್ವಿಜಯ ನ್ಯೂಸ್​ಗೆ ಚೇತನ್ ಹೇಳಿಕೆ        ಸರ್ಜಾ ವಿರುದ್ಧ ಮೀಟೂ ಆರೋಪ - ಕಿತ್ತಾಟ ಪರಿಹರಿಸಲು ಸಂಧಾನಕಾರರಾಗ್ತಾರಾ ಅಂಬಿ..?        ಅರ್ಜುನ್ ಸರ್ಜಾ ಮೀ ಟೂ ಕೇಸ್​​ಗೆ ಬಿಗ್ ಟ್ವಿಸ್ಟ್ - ಪ್ರೇಮಬರಹದಲ್ಲಿ ಚಾನ್ಸ್​ ಸಿಗದ್ದಕ್ಕೆ ರೀವೆಂಜ್ ಆರೋಪ        ಶ್ರುತಿ ವಿರುದ್ಧ ಚೇಂಬರ್​ಗೆ ದೂರು - ನಟಿ ಆರೋಪಕ್ಕೆ ಮತ್ತೆ ಗುಡುಗಿದ ನಟ ರಾಜೇಶ್        ಬೈಎಲೆಕ್ಷನ್​​ ಆಂತರಿಕ ಸಮೀಕ್ಷೆಯಲ್ಲಿ ಸೋಲಿನ ಸುಳಿವು - ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ತಂತ್ರಗಾರಿಕೆ        ಕರ್ತವ್ಯ ಬಹಿಷ್ಕರಿಸಿ ಸಿಬ್ಬಂದಿ ಪ್ರತಿಭಟನೆ - ಬೆಂಗಳೂರಿನ ಪೆನೇಷಿಯಾ ಆಸ್ಪತ್ರೆ ವಿರುದ್ಧ ಸಿಬ್ಬಂದಿ ಆಕ್ರೋಶ       
Breaking News

ಇಂದು ಸೂರ್ಯಗ್ರಹಣ

Saturday, 11.08.2018, 3:02 AM       No Comments

ನವದೆಹಲಿ: ಕಳೆದ ತಿಂಗಳ 27ರಂದು ನಡೆದಿದ್ದ ಖಗ್ರಾಸ ಚಂದ್ರಗ್ರಹಣದ ನಂತರ ಬಾನಂಗಳದಲ್ಲಿ ಮತ್ತೊಂದು ಕೌತುಕ ನಡೆಯಲಿದೆ. ಶನಿವಾರ ಭಾಗಶಃ ಸೂರ್ಯಗ್ರಹಣ ಸಂಭವಿಸಲಿದ್ದು, ಮೂರೂವರೆ ತಾಸಿನ ಈ ಖಗೋಳ ವಿದ್ಯಮಾನ ಭೂಖಂಡದ ಉತ್ತರಾರ್ಧಗೋಳದ ಹಲವು ದೇಶಗಳಲ್ಲಿ ಗೋಚರಿಸಲಿದೆ. ಆದರೆ, ಭಾರತದಲ್ಲಿ ಕಾಣಿಸುವುದಿಲ್ಲ.

ಗ್ರೀನ್​ವಿಚ್ ಮೀನ್ ಟೈಂ (ಜಿಎಂಟಿ) ಕಾಲಮಾನ ಪ್ರಕಾರ ಬೆಳಗ್ಗೆ 9.02ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 1.32) ಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 12.32ಕ್ಕೆ (ಭಾರತೀಯ ಕಾಲಮಾನ ಸಂಜೆ 5.02) ಮುಗಿಯಲಿದೆ.

ವರ್ಷದ ಕೊನೆಯ ಸೂರ್ಯಗ್ರಹಣ: ಪ್ರಸಕ್ತ ವರ್ಷ ಈಗಾಗಲೇ ಎರಡು ಸೂರ್ಯಗ್ರಹಣ ಸಂಭವಿಸಿದೆ. ಫೆ. 15ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು. ಅಟ್ಲಾಂಟಿಕ್ ಸಾಗರ, ಅಂಟಾರ್ಟಿಕಾ ಮತ್ತು ದಕ್ಷಿಣ ಅಮೆರಿಕದಲ್ಲಿ ಇದು ಗೋಚರವಾಗಿತ್ತು. ಜುಲೈ 13ರಂದು ಸಂಭವಿಸಿದ ಸೂರ್ಯ ಗ್ರಹಣ ಆಸ್ಟ್ರೇಲಿಯಾದ ದಕ್ಷಿಣ ಸಮುದ್ರದಿಂದ ಅಂಟಾರ್ಟಿಕಾದ ವರೆಗೆ ಗೋಚರಿಸಿತು. ಶನಿವಾರ ನಡೆಯಲಿರುವ ಸೂರ್ಯಗ್ರಹಣ ವರ್ಷದ ಕೊನೆಯ ಗ್ರಹಣವಾಗಿದೆ. ಸೂರ್ಯ, ಭೂಮಿ ಮಧ್ಯೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.

ಗೋಚರ ಎಲ್ಲಿಲ್ಲಿ?

ಕೆನಡಾ, ಈಶಾನ್ಯ ಅಮೆರಿಕ, ಗ್ರೀನ್​ಲೆಂಡ್, ಯುರೋಪ್​ನ ಉತ್ತರ ಭಾಗ, ಸೈಬೀರಿಯಾದ ಪೂರ್ವ ಭಾಗ, ಚೀನಾದ ಕೆಲವು ಪ್ರದೇಶ, ಏಷ್ಯಾದ ಮಧ್ಯ ಭಾಗಗಲ್ಲಿ ಗ್ರಹಣ ಕಾಣಿಸಲಿದೆ.

Leave a Reply

Your email address will not be published. Required fields are marked *

Back To Top