Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ದಾಖಲೆಯ ಮುಂಗಾರು

Saturday, 11.08.2018, 3:03 AM       No Comments

ನವದೆಹಲಿ: ಈ ಬಾರಿಯ ಮುಂಗಾರು ಅಧಿವೇಶನ ಕಳೆದ ಎರಡು ದಶಕಗಳಲ್ಲೇ ಅತ್ಯಂತ ಯಶಸ್ವಿ ಅಧಿವೇಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶುಕ್ರವಾರ ಅಧಿವೇಶನ ಮುಕ್ತಾಯವಾಗಿದ್ದು, ಗರಿಷ್ಠ ಉತ್ಪಾದಕತೆ ದಾಖಲಾಗಿದೆ.

ಲೋಕಸಭೆಯ ಕಲಾಪ ನಿಗದಿತ ಸಮಯಕ್ಕಿಂತ ಹೆಚ್ಚು (ಶೇ.110) ಕೆಲಸ ಮಾಡಿದೆ. 2000ನೇ ಇಸವಿ ಬಳಿಕ ಅತ್ಯಂತ ಹೆಚ್ಚು ಕೆಲಸ ನಿರ್ವಹಿಸಿದ ಅಧಿವೇಶನ ಇದಾಗಿದೆ. ಆದರೆ ರಾಜ್ಯಸಭೆಯ ಕಾರ್ಯಕಲಾಪ ಪ್ರಮಾಣ ಶೇ.66ಕ್ಕೆ ಸೀಮಿತವಾಗಿದೆ. 2004ರ ಬಳಿಕ ಇದು ಅತ್ಯುತ್ತಮ ಕಲಾಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಲೋಕಸಭೆ ಹಾಗೂ ರಾಜ್ಯಸಭೆಯ ಪ್ರಶ್ನೋತ್ತರ ಸಮಯ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡು ಕಳೆದ 15 ವರ್ಷಗಳ ದಾಖಲೆ ಮುರಿದಿದೆ. ಲೋಕಸಭೆಯಲ್ಲಿ ಶೇ. 84 ಹಾಗೂ ರಾಜ್ಯಸಭೆಯಲ್ಲಿ ಶೇ.68 ಸಮಯ ಸದ್ಬಳಕೆಯಾಗಿದೆ ಎಂದು ಪಿಆರ್​ಎಸ್ ಅಧ್ಯಯನ ವರದಿ ಹೇಳಿದೆ.

ಈ ಕುರಿತು ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಹಾಗೂ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಸಂತಸ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ಆರಂಭದಲ್ಲೇ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ಹಾಗೂ ಸೋಲಿನ ಬಳಿಕ ನಡೆದ ರಾಜಕೀಯ ಬೆಳವಣಿಗೆ ಅಧಿವೇಶನದ ಯಶಸ್ಸಿಗೆ ಕಾರಣ ಎನ್ನಲಾಗಿದೆ.

ಬೆಂಗಳೂರು-ಮೈಸೂರಿಗೆ ಬುಲೆಟ್ ರೈಲು?

ಚೆನ್ನೈ- ಬೆಂಗಳೂರು- ಮೈಸೂರು ಬುಲೆಟ್ ರೈಲು ಯೋಜನೆ ಆರಂಭಿಸುವ ಕುರಿತು ಕಾರ್ಯಸಾಧ್ಯತೆ ವರದಿ ಪಡೆಯಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈಗಾಗಲೇ ಬೆಂಗಳೂರು ಹಾಗೂ ಮೈಸೂರು ನಡುವೆ ಹೈ ಸ್ಪೀಡ್ ರೈಲು ಆರಂಭಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಹಂತದಲ್ಲಿ ದೇಶದ ಬೃಹತ್ ನಗರಗಳಿಗೆ ಬುಲೆಟ್ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಕುರಿತು ಸರ್ಕಾರ ಚರ್ಚೆ ಆರಂಭಿಸಿದೆ. ಚೆನ್ನೈ-ಬೆಂಗಳೂರು-ಮೈಸೂರು, ದೆಹಲಿ-ಮುಂಬೈ, ದೆಹಲಿ-ಕೋಲ್ಕತ್ತ, ಮುಂಬೈ-ಚೆನ್ನೈ, ಮುಂಬೈ-ನಾಗ್ಪುರ ಹಾಗೂ ದೆಹಲಿ-ಚೆನ್ನೈ ಮಾರ್ಗಗಳ ಕುರಿತು ಅಧ್ಯಯನಕ್ಕೆ ನಿರ್ಧರಿಸಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಲಿಖಿತ ಉತ್ತರ ನೀಡಿದೆ. ಈ ಯೋಜನೆಗಳಿಗೆ ಫ್ರಾನ್ಸ್, ಸ್ಪೇನ್, ಚೀನಾ, ಜಪಾನ್ ಹಾಗೂ ಜರ್ಮನಿ ನೆರವು ಪಡೆಯಲಾಗುತ್ತಿದೆ. ಈ ಯೋಜನೆ ಮುಂಬೈ-ಅಹಮದಾಬಾದ್ ಬುಲೆಟ್ ಯೋಜನೆಗೆ ಹೊರತಾಗಿದೆ. ಕೇಂದ್ರ ಸರ್ಕಾರದ ಪ್ರಕಾರ 2022ರ ವೇಳೆಗೆ ಈ ಮಾರ್ಗ ಕಾರ್ಯಾರಂಭ ಮಾಡಬೇಕಿದೆ.

ಪ್ರಧಾನಿ ಮಾತು ಕಡತದಿಂದ ಹೊರಕ್ಕೆ

ರಾಜ್ಯಸಭೆ ಉಪಸಭಾಪತಿ ಚುನಾವಣೆ ಬಳಿಕ ಸಂಸತ್​ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಂದ ಬಿಜೆಪಿಯ ಸಂಸದರನ್ನು ಕೊಂಡುಕೊಳ್ಳಲು ಸಾಧ್ಯವಾಗಿಲ್ಲ ಎಂಬರ್ಥದ ಹೇಳಿಕೆ ನೀಡಿದ್ದರು. ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದನ್ನು ಕಡತದಿಂದ ತೆಗೆಯಲಾಗಿದೆ. ಪ್ರಧಾನಿ ಹೇಳಿಕೆಯನ್ನು ಕಡತದಿಂದ ತೆಗೆದಿರುವುದು ಅಪರೂಪದ ಪ್ರಕರಣ.

ಸೋನಿಯಾ ನೇತೃತ್ವದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಕುರಿತು ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಲೋಕಸಭೆ ಒಳಗೆ ಹಾಗೂ ಹೊರಗೆ ಶುಕ್ರವಾರ ಪ್ರತಿಭಟನೆ ನಡೆಯಿತು. ಪ್ರತಿಪಕ್ಷ ಸದಸ್ಯರು ಕಾಂಗ್ರೆಸ್ ಪ್ರತಿಭಟನೆಗೆ ಸಾಥ್ ನೀಡಿದರು.

Leave a Reply

Your email address will not be published. Required fields are marked *

Back To Top