Saturday, 17th March 2018  

Vijayavani

ರಾಜ್ಯದಲ್ಲಿ ಮತ್ತೆ ರಾಹುಲ್​ ಟೆಂಪಲ್​ರನ್​ - ಉಡುಪಿಗೆ ವಿಸಿಟ್ಟು​​​.. ಕೃಷ್ಣಮಠಕ್ಕೆ ಡೌಟು - ಕಾಂಗ್ರೆಸ್​​ನಲ್ಲಿ ಹೈಕಮಾಂಡ್​ ಆದ್ರಾ ಸಿಎಂ..        ಧರ್ಮ ಸಂಕಷ್ಟಕ್ಕೆ ಹೈಕಮಾಂಡ್​ ಎಂಟ್ರಿ - ಚುನಾವಣೆಗಾಗಿ ವಿಷ್ಯ ಸೈಡ್​ಗಿಡೋಕೆ ತಾಕೀತು - ಅತ್ತ ದಿಲ್ಲೀಲಿ ಮೊಯ್ಲಿಗೆ ವರಿಷ್ಠರ ಎಚ್ಚರಿಕೆ        ಕಾಂಗ್ರೆಸ್ ಕೋಟೆಯಲ್ಲಿ ಕೇಸರಿ ಮಾಸ್ಟರ್​ಪ್ಲಾನ್​ - ನಾಲ್ಕೂ ದಿಕ್ಕಿನಲ್ಲಿ ಚಾಣಕ್ಯನ ತಂಡ - ಸಿಎಂ ತವರಲ್ಲಿ ರಾಜೇಂದ್ರ ಅಗರ್​ವಾಲ್​​ ತಂತ್ರಗಾರಿಕೆ        ಮಾರ್ಚ್​ 21ಕ್ಕೆ ಎಲೆಕ್ಷನ್​ಗೆ ಮುಹೂರ್ತ ಸಾಧ್ಯತೆ - ಇವಿಎಂ ಬೇಡ ಅಂತ ಕೈ ನಿರ್ಣಯ - ಬ್ಯಾಲೆಟ್ ಪೇಪರ್​​ಗೆ ಎಚ್​​​ಡಿಡಿ ಅಭಿಮತ        ಭಾರತದ ಬ್ಯಾಂಕ್​​ಗಳಿಂದಲೇ ನಡೆದಿದೆ ಪ್ರಮಾದ - ಸಾಲ ವಾಪಸ್​​ ಕಟ್ಟೋದಾಗಿ ಮಲ್ಯ ವಾದ - ಮದ್ಯದ ದೊರೆ ದೇಶಕ್ಕೆ ಬರೋದೇ ಅನುಮಾನ        ನಾಡಿನೆಲ್ಲೆಡೆ ನಾಳೆ ಯುಗಾದಿ ಸಂಭ್ರಮ - ಶ್ರೀಶೈಲದಲ್ಲಿ ಜನಜಾಗೃತಿ ಸಮಾವೇಶ - ಪ್ರಧಾನಿ ಮೋದಿಯಿಂದ ಹಬ್ಬದ ಶುಭಾಶಯ       
Breaking News

ಪ್ಯಾರಿಸ್​ನಲ್ಲಿ ಮತ್ತೆ ಐಸಿಸ್ ದಾಳಿ, ಪೊಲೀಸ್ ಅಧಿಕಾರಿ ಸಾವು

Friday, 21.04.2017, 7:49 AM       No Comments

ಪ್ಯಾರಿಸ್: ಫ್ರಾನ್ಸ್​ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇನ್ನು ಮೂರು ದಿನಗಳು ಬಾಕಿ ಇರುವಂತೆ ಐಸಿಸ್ ಉಗ್ರನೋರ್ವ ಪ್ಯಾರಿಸ್​ನಲ್ಲಿ ಪೊಲೀಸ್ ಕಾರಿನ ಮೇಲೆ ದಾಳಿ ನಡೆಸಿ ಓರ್ವ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾನೆ. ವೀಕ್ಷಿಸಿ ದಿಗ್ವಿಜಯ ನ್ಯೂಸ್ LIVE

ದಾಳಿ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ.

ಪ್ಯಾರಿಸ್​ನ ಚಾಂಪ್ಸ್ ಎಲಿಸೀಸ್ ಬಳಿ ಗುರುವಾರ ರಾತ್ರಿ 9 ಗಂಟೆ (ಸ್ಥಳೀಯ ಕಾಲಮಾನ) ಸುಮಾರಿಗೆ ಶಂಕಿತ ಉಗ್ರನೊಬ್ಬ ಪೊಲೀಸ್ ಕಾರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾನೆ. ಉಗ್ರನ ಗುಂಡಿನ ದಾಳಿಗೆ ಸ್ಥಳದಲ್ಲೇ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟರೆ ಇತರ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ತಕ್ಷಣ ಪ್ರತಿದಾಳಿ ನಡೆಸಿದ ಪೊಲೀಸರು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಉಗ್ರನನ್ನು ಹೊಡೆದುರುಳಿಸಿದ್ದಾರೆ.

ಫ್ರಾನ್ಸ್​ನ ಉಗ್ರ ನಿಗ್ರಹ ಪೊಲೀಸ್ ಪಡೆಯ ಬಳಿ ದಾಳಿಕೋರನ ಕುರಿತು ಮಾಹಿತಿ ಇತ್ತು. ಕಳೆದ ವರ್ಷ ಪ್ಯಾರಿಸ್​ನ ಉಪನಗರದಲ್ಲಿದ್ದ ಈತನ ಮನೆಯ ಮೇಲೂ ಸಹ ದಾಳಿ ನಡೆಸಲಾಗಿತ್ತು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ಘಟನೆ ಬಳಿಕ ‘‘ಪ್ಯಾರಿಸ್​ನಲ್ಲಿ ನಡೆದ ದಾಳಿಗೆ ನಾವೇ ಹೊಣೆ, ನಮ್ಮ ಸಂಘಟನೆಗೆ ಸೇರಿದ ಉಗ್ರನೇ ಅಲ್ಲಿ ದಾಳಿ ನಡೆಸಿದ್ದು’’ ಎಂದು ಐಸಿಸ್ ಸಂಘಟನೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

2015ರಿಂದ ಫ್ರಾನ್ಸ್​ನಲ್ಲಿ ಉಗ್ರರು ನಡೆಸಿರುವ ದಾಳಿಗಳಿಗೆ 230 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಪ್ಯಾರಿಸ್​ನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ನಡೆದ ಉಗ್ರ ದಾಳಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಖಂಡಿಸಿದ್ದಾರೆ.

– ಪಿಟಿಐ

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top