Wednesday, 15th August 2018  

Vijayavani

ಹೊರಗೆ ದೋಸ್ತಿ, ಒಳಗೆ ಕುಸ್ತಿ - ದೂರವಾಗದ ಸಿದ್ದು, ಕುಮಾರ ಮುನಿಸು - ರಾಯಣ್ಣನ ಪ್ರತಿಮೆ ಬಳಿ ಬಯಲಾಯ್ತು ಮೈತ್ರಿ ಹುಳುಕು        ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ - ಕೆಆರ್‌ಎಸ್‌ಗೆ ಭಾರಿ ಪ್ರಮಾಣದ ನೀರು- ಶ್ರೀರಂಗಪಟ್ಟಣ ಬಳಿ ಪ್ರವಾಹ ಪರಿಸ್ಥಿತಿ        ಮನೆ, ಮಠ , ಶಾಲೆ ಎಲ್ಲವೂ ಜಲಾವೃತ - ಹೊನ್ನಾಳಿಯಲ್ಲಿ ಸ್ಕೂಲ್‌ಗೆ ನುಗ್ಗಿದ ತುಂಗಭದ್ರ - ಅಪಾಯ ಲೆಕ್ಕಿಸದೆ ವಿದ್ಯಾರ್ಥಿಗಳ ಆಟ        ಕರಾವಳಿಯಲ್ಲಿ ಬಿಡುವುಕೊಡದ ವರುಣ - ಬೆಳ್ತಂಗಡಿಯಲ್ಲಿ ನಿರ್ಮಾಣ ಹಂತದ ಮನೆ ಕುಸಿತ - ಅತ್ತ ಹಾಸನದಲ್ಲಿ ರಸ್ತೆ ಕುಸಿತ        ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ - ನಾಲ್ಕು ವರ್ಷಗಳ ಬಳಿಕ ಲಿಂಗನಮಕ್ಕಿ ಭರ್ತಿ - ಜೋಗ ಜಲಾಪಾತದಲ್ಲಿ ಜಲ ವೈಭವ        ಕೇರಳದಲ್ಲಿ ತಗ್ಗದ ಪ್ರವಾಹ - ನೀರಿನಲ್ಲಿ ಸಿಲುಕೊಂಡ ರಾಜ್ಯ ಸಾರಿಗೆ ಬಸ್‌ - ಅಯ್ಯಪ್ಪನಿಗೂ ತಟ್ಟಿದ ನೆರೆಹಾವಳಿ       
Breaking News

ಶಾಸಕ ಪರಣ್ಣ ಮುನವಳ್ಳಿಗೆ ಕೊಲೆ ಬೆದರಿಕೆ

Monday, 11.06.2018, 3:02 AM       No Comments

ಗಂಗಾವತಿ(ಕೊಪ್ಪಳ): ಶಾಸಕ ಪರಣ್ಣ ಮುನವಳ್ಳಿಗೆ ಕೊಲೆ ಬೆದರಿಕೆ ಕರೆ ಮತ್ತು ಪತ್ರ ಬಂದಿದ್ದು, ನಗರದಲ್ಲಿ ಆತಂಕ ಸೃಷ್ಟಿಸಿದೆ.

ಅನಾಮಧೇಯನೊಬ್ಬನಿಂದ ಕರೆ, ಪತ್ರ ಬಂದ ಬಗ್ಗೆ ಶಾಸಕರು ನಗರ ಠಾಣೆಗೆ ಜೂ.9ರ ರಾತ್ರಿ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಜೂ.6ರಂದು ಬನ್ನಿಗಿಡದ ಕ್ಯಾಂಪ್​ನಲ್ಲಿರುವ ಶಾಸಕರ ನಿವಾಸಕ್ಕೆ ಪತ್ರ ರವಾನಿಸಿದ್ದು, ಪತ್ರದೊಂದಿಗೆ 500 ರೂ.ಮುಖಬೆಲೆಯ 4 ಖೋಟಾ ನೋಟುಗಳಿವೆ. ಜೂ.7ರಂದು ರಾತ್ರಿ 9.30ಕ್ಕೆ 8497024826 ನಂಬರ್​ನಿಂದ ಅನಾಮಧೇಯಯನೊಬ್ಬ ಕರೆ ಮಾಡಿ, ಖೋಟಾ ನೋಟು ಪೂರೈಕೆ ಕುರಿತು ಉಲ್ಲೇಖಿಸಿ, ಧಮಕಿ ಹಾಕಿದ್ದಾನೆ.

ಪತ್ರದಲ್ಲೇನಿದೆ?: ಕೋಬ್ರಾ ಎಂಬ ಹೆಸರಿನಲ್ಲಿ ಬಂದ ಕೈಬರಹದ ಪತ್ರದಲ್ಲಿ ಸರ್, 2014ರ ಚುನಾವಣೆಯಿಂದ 2018ರ ಚುನಾವಣೆ ವರೆಗೂ ನಮ್ಮ ಕರೆನ್ಸಿ ಬಳಸುತ್ತ, ಸಪ್ಲೈ ಮಾಡುತ್ತ ಸಹಕಾರ ನೀಡಿದ್ದಕ್ಕೆ ಥ್ಯಾಂಕ್ಯೂ. ನೀವು 2018ರ ಮೇ 9ರಂದು 500 ಮುಖ ಬೆಲೆಯ 1 ಕೋಟಿ ರೂ. ತೆಗೆದುಕೊಂಡು, ನಮಗೆ 50 ಲಕ್ಷ ರೂ. ನೀಡದೇ, ವಂಚಿಸಿದ್ದೀರಿ. ಮೂರ್ನಾಲ್ಕು ದಿನಗಳಲ್ಲಿ ನಿಮಗೆ 10ಲಕ್ಷ ರೂ.ಗಳನ್ನು ಟ್ರಾನ್ಸ್ ಪೋರ್ಟ್ ಕಂಪನಿಯೊಂದರ ಮೂಲಕ ಕಳುಹಿಸಲಾಗುವುದು. ಎಲ್​ಆರ್​ಎಲ್ ನಂಬರ್ ನಿಮಗೆ ಬೇಕೋ, ಪೊಲೀಸರಿಗೆ ಕಳಿಸಬೇಕೋ ನಿರ್ಣಯಿಸಿಕೊಳ್ಳಿ. ನಮ್ಮ ಹುಡುಗರು ಬರ್ತಾರೆ. ಹೆಚ್ಚು ಕಡಿಮೆ ಆದರೆ, ನಿಮ್ಮ ಜತೆಗೆ ನಮ್ಮ ಹುಡುಗರು ಅರೆಸ್ಟ್ ಆಗ್ತಾರೆ. ಆಮೇಲೆ ನಿಮ್ಮಿಷ್ಟ. ಐಟಿ, ಸಿಬಿಐ ಮತ್ತು ಪ್ರೆಸ್​ನವರಿಗೂ ನಂಬರ್ ಕೊಡಬೇಕಾಗುತ್ತದೆ..ಎಂದು ಎಚ್ಚರಿಕೆ ನೀಡಲಾಗಿದೆ.

ಫೋನ್​ನಲ್ಲಿ ಮಾತಾಡಿದ್ದೇನು?: ಫೋನ್ ಮಾಡಿದ್ದ ವ್ಯಕ್ತಿ ಹಣ ತಲುಪಿಸದಿದ್ದರೆ ಜೀವನ ಸಹಿತ ಉಳಿಸಲ್ಲ. ನಿಮ್ಮ ಮಾನ ಹರಾಜು ಹಾಕಿ, ಅಸಹ್ಯ ಭಾವನೆ ಬರುವಂತೆ ಮಾಡಲಾಗುವುದು. ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಠಾಣೆಗೆ ಬರೋ ಹಾಗೆ ಮಾಡುತ್ತೇವೆ. ಕೇಳಿದಷ್ಟು ಹಣ ನೀಡಿ.. ಎಂದು ಗದರಿದ್ದಾನೆ.

ಇದೇ ಮೊದಲಲ್ಲ: ಪರಣ್ಣ ಮುನವಳ್ಳಿಗೆ ಜೀವ ಬೆದರಿಕೆ ಬಂದ್ದದ್ದು ಇದೇ ಮೊದಲಲ್ಲ. 2016ರಲ್ಲಿ ಆಗಂತುಕರು ಪರಣ್ಣ ಮುನವಳ್ಳಿ ಮನೆಗೆ ನುಗ್ಗಿದ್ದರು. ಸಿಸಿ ಕ್ಯಾಮೆರಾದಲ್ಲಿ ಚಲವಲನ ದಾಖಲಾಗಿದ್ದರೂ, ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ.

ಪತ್ರದ ಮೂಲಕ ಕೊಲೆ ಬೆದರಿಕೆ ಬಂದಿದ್ದು, ಅನಾಮಧೇಯ ವ್ಯಕ್ತಿಯೊಬ್ಬ ದೂರವಾಣಿ ಮೂಲಕ ತೇಜೋವಧೆ ಮಾಡುವ ಕುರಿತು ಮಾತನಾಡಿದ್ದಾನೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

| ಪರಣ್ಣ ಮುನವಳ್ಳಿ ಗಂಗಾವತಿ ಶಾಸಕ

ಪಾತಕಿಗಳ ಕೃತ್ಯ?

ಇದು ಭೂಗತ ಪಾತಕಿಗಳ ಕೃತ್ಯ ಇರಬಹುದೆಂದು ಶಂಕಿಸಲಾಗಿದೆ. ಈ ಹಿಂದೆ ಇಕ್ಬಾಲ್ ಅನ್ಸಾರಿ ಶಾಸಕ ರಾಗಿದ್ದಾಗ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಅನ್ಸಾರಿಯ ಸ್ಥಿರ ದೂರವಾಣಿಗೆ ಕರೆ ಬಂದಿತ್ತು. ಕರೆ ಸ್ವೀಕರಿದ್ದ ಅವರ ಆಪ್ತ ಸಹಾಯಕ ನೀಡಿದ ದೂರಿನನ್ವಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

Back To Top