Wednesday, 19th September 2018  

Vijayavani

ಭಿನ್ನಮತ ಶಮನಕ್ಕೆ ಕೈ ಪಡೆ ಕಸರತ್ತು - ಸಂಪುಟದಲ್ಲಿ ಖಾಲಿ ಇರೋದು ಆರು, ಆಕಾಂಕ್ಷಿಗಳು ಹತ್ತಾರು        ರಾಜ್ಯ ಕೈ ಪಡೆಯಲ್ಲಿ ಬಂಡಾಯ ಶಮನಕ್ಕೆ ಸರ್ಕಸ್ - ಇತ್ತ ದಿಲ್ಲಿಯಲ್ಲಿ ಸಿದ್ದು ವಾಕಿಂಗ್ ಮೂಲಕ ರಿಲ್ಯಾಕ್ಸ್ - ರಾಹುಲ್ ಜತೆ ಮೀಟಿಂಗ್        ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ರಣೋತ್ಸಾಹದಲ್ಲಿ ರಾಜ್ಯ ಕಮಲ ಪಾಳಯ - ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಸಭೆ - ಗಾಯತ್ರಿ ವಿಹಾರಕ್ಕೆ ಆಗಮನ        ಇಡಿ ಕೇಸ್ ಬಳಿಕ ಡಿಕೆ ಸಹೋದರರಲ್ಲಿ ತಳಮಳ - ಸುಪ್ರೀಂ ವಕೀಲರ ಜತೆ ಸುರೇಶ್ ನಿರಂತರ ಸಂಪರ್ಕ        ಅಗಸ್ತಾ ವೆಸ್ಟ್​ಲ್ಯಾಂಡ್ ಕಾಪ್ಟರ್ ಖರೀದಿ ಹಗರಣ - ಮಧ್ಯವರ್ತಿ ಮೈಕಲ್ ಹಸ್ತಾಂತರಕ್ಕೆ ದುಬೈಕೋರ್ಟ್ ಗ್ರೀನ್ ಸಿಗ್ನಲ್       
Breaking News

ನವಾಜ್​ ಷರೀಫ್​, ಮರ್ಯಮ್​ಗೆ ಜೈಲಿನಲ್ಲಿ ‘ಬಿ’ ದರ್ಜೆ ಸೌಲಭ್ಯ

Saturday, 14.07.2018, 1:29 PM       No Comments

ಇಸ್ಲಾಮಾಬಾದ್​: ಲಂಡನ್​ನ ಅವೆನ್​ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ ಮತ್ತು ಅವರ ಪುತ್ರಿ ಮರ್ಯಮ್​ ಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಕೇವಲ ಬಿ ದರ್ಜೆ ಸೌಲಭ್ಯ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

68 ವರ್ಷದ ನವಾಜ್​ ಷರೀಫ್​ ಮತ್ತು 44 ವರ್ಷದ ಅವರ ಪುತ್ರಿ ಮರ್ಯಮ್​ ಅವರನ್ನು ರಾವಲ್ಪಿಂಡಿಯ ಅತ್ಯಾಧುನಿಕ ಭದ್ರತಾ ಸೌಲಭ್ಯಗಳನ್ನು ಹೊಂದಿರುವ ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.

ಅಡಿಯಾಲಾ ಜೈಲಿನಲ್ಲಿ ಎ ಮತ್ತು ಬಿ ದರ್ಜೆಯ ಸೌಲಭ್ಯ ಪಡೆಯುವ ಕೈದಿಯ ಕೊಠಡಿಯಲ್ಲಿ ಒಂದು ಮಂಚ, ಒಂದು ಕುರ್ಚಿ, ಒಂದು ಟೀ ಪಾಟ್​, ವಿದ್ಯುತ್​ ಇಲ್ಲದಿದ್ದಾಗ ಬಳಸಲು ಒಂದು ಲಾಂಟೆನಾ, ಒಂದು ಶೆಲ್ಫ್​ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತದೆ.

ಜತೆಗೆ ಜೈಲು ಅಧಿಕಾರಿಗಳ ಅನುಮತಿಯ ಮೇರೆಗೆ ಎ ಮತ್ತು ಬಿ ದರ್ಜೆಯ ಕೈದಿಗಳಿಂದ ಹಣ ಪಡೆದು ಟಿವಿ, ಏರ್​ ಕಂಡಿಷನರ್​, ಫ್ರಿಜ್​​, ದಿನ ಪತ್ರಿಕೆಯನ್ನು ಒದಗಿಸಲು ಅವಕಾಶವಿದೆ ಎಂದು ಪತ್ರಿಕಾ ವರದಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್​ಎಬಿ) ನ್ಯಾಯಾಲಯ ಷರೀಫ್​ ವಿರುದ್ಧದ ಇನ್ನೆರಡು ಭ್ರಷ್ಟಾಚಾರ ಪ್ರಕರಣ ವಿಚಾರಣೆಯನ್ನು ಅಡಿಯಾಲಾ ಜೈಲಿನಲ್ಲಿ ನಡೆಸಲಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.

50 ಜನರಿಗೆ ಗಾಯ

ನವಾಜ್​ ಷರೀಫ್​ ಮತ್ತು ಅವರ ಪುತ್ರಿ ಲಾಹೋರ್​ ಏರ್​ಪೋರ್ಟ್​ಗೆ ಆಗಮಿಸಿದ ಸಂದರ್ಭದಲ್ಲಿ ಪೊಲೀಸರು ಮತ್ತು ಷರೀಫ್​ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ 20 ಪೊಲೀಸರು ಸೇರಿದಂತೆ ಕನಿಷ್ಠ 50 ಜನರು ಗಾಯಗೊಂಡಿದ್ದಾರೆ.

ಷರೀಫ್​ ಬೆಂಬಲಿಗರು ಮತ್ತು ಪಿಎಂಎಲ್​-ಎನ್​ ಪಕ್ಷದ ಕಾರ್ಯಕರ್ತರು ತಮ್ಮ ನಾಯಕನಿಗೆ ಶುಭ ಕೋರಲು ಲಾಹೋರ್​ ವಿಮಾನ ನಿಲ್ದಾಣಕ್ಕೆ ರ‍್ಯಾಲಿಯ ಮೂಲಕ ತೆರಳುತ್ತಿದ್ದರು. ಆದರೆ, ಪೊಲೀಸರು ಕಾರ್ಯಕರ್ತರನ್ನು ಮಾರ್ಗ ಮಧ್ಯೆ ತಡೆದಿದ್ದರು. ಈ ಸಂದರ್ಭದಲ್ಲಿ ಪೊಲಿಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು ಎಂದು ಪೊಲೀಸ್​ ಇಲಾಖೆಯ ವಕ್ತಾರ ನಿಯಾಬ್​ ಹೈದರ್​ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top