Thursday, 20th September 2018  

Vijayavani

Breaking News

ಸಮಾಜ ಸೇವೆ ಮುಂದುವರೆಸಲು ಜೆಯುಡಿಗೆ ಪಾಕ್ ಸುಪ್ರೀಂ ಕೋರ್ಟ್​ ಗ್ರೀನ್​ ಸಿಗ್ನಲ್​

Thursday, 13.09.2018, 5:23 PM       No Comments

ಇಸ್ಲಾಮಾಬಾದ್​: ಮುಂಬೈ ದಾಳಿಯ ಮಾಸ್ಟರ್​ಮೈಂಡ್​ ಉಗ್ರ ಹಫೀಜ್​ ಸಯೀದ್​ ಮುಖ್ಯಸ್ಥನಾಗಿರುವ ಜಮಾತ್​ ಉದ್​ದವಾ (ಜೆಯುಡಿ) ಮತ್ತು ಫಲಾಹ್​ ಐ ಇನ್ಸಾನಿಯತ್​ ಫೌಂಡೇಷನ್​ (ಎಫ್​ಐಎಫ್​) ಸಂಘಟನೆಗಳು ತಮ್ಮ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರೆಸಲು ಪಾಕಿಸ್ತಾನ ಹೈಕೋರ್ಟ್​ ಅನುಮತಿ ನೀಡಿದೆ.

ಲಾಹೋರ್​ ಹೈಕೋರ್ಟ್​ ತೀರ್ಪನ್ನು ಪ್ರಶ್ನಿಸಿ ಪಾಕಿಸ್ತಾನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಇಬ್ಬರು ನ್ಯಾಯಮೂರ್ತಿಗಳಿದ್ದ ಪೀಠ ಈ ಆದೇಶವನ್ನು ನೀಡಿದೆ.

ಪಾಕಿಸ್ತಾನ ಸರ್ಕಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಟ್ಟಿಮಾಡಿರುವ ಸಂಘಟನೆಗಳಿಗೆ ಯಾವುದೇ ಕಂಪನಿ ಅಥವಾ ವ್ಯಕ್ತಿಗಳು ದೇಣಿಗೆ ನೀಡಬಾರದು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹಫೀಜ್​ ಸಯೀದ್​ ಕೋರ್ಟ್​ ಮೆಟ್ಟಿಲೇರಿದ್ದ. ಹಫೀಜ್​ ಅರ್ಜಿ ವಿಚಾರಣೆ ನಡೆಸಿದ್ದ ಲಾಹೋರ್​ ಹೈಕೋರ್ಟ್​ ಜೆಯುಡಿ ಮತ್ತು ಎಫ್​ಐಎಫ್​ ಸಂಘಟನೆಗಳ ಸಾಮಾಜಿಕ ಸೇವಾ ಕಾರ್ಯಗಳ ಮೇಲೆ ನಿರ್ಬಂಧ ಹೇರದಂತೆ ಪಾಕ್​ ಸರ್ಕಾರಕ್ಕೆ ಸೂಚಿಸಿತ್ತು.

ಸುಪ್ರೀಂ ಕೋರ್ಟ್​ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಹಫೀಜ್​ ಸಯೀದ್​ ನ್ಯಾಯ ಮತ್ತು ಸತ್ಯಕ್ಕೆ ಜಯ ಸಂದಿದೆ ಎಂದು ತಿಳಿಸಿದ್ದಾನೆ.

ಪಾಕ್​ ಅಧಿಕಾರಿಗಳ ಪ್ರಕಾರ ಜಮಾತ್​ ಉದ್​ ದವಾ ಸಂಘಟನೆ ಸುಮಾರು 300 ಕ್ಕೂ ಹೆಚ್ಚು ಮದರಸಾಗಳು, ಶಾಲೆಗಳು, ಆಸ್ಪತ್ರೆಗಳು, ಮುದ್ರಣಾಲಯಗಳನ್ನು ಹೊಂದಿದೆ. ಈ ಸಂಘಟನೆ ದೇಶಾದ್ಯಂತ ಸುಮಾರು 50,000 ಸ್ವಯಂ ಸೇವಕರನ್ನು ಹೊಂದಿದೆ, ಜತೆಗೆ ನೂರಾರು ಜನರು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top