Saturday, 24th March 2018  

Vijayavani

Breaking News

ಕಾರ್ಟೋಸ್ಯಾಟ್​ 2 ಉಪಗ್ರಹ ಉಡಾವಣೆಗೆ ಪಾಕ್​ ತಕರಾರು

Friday, 12.01.2018, 11:42 AM       No Comments

ನವದೆಹಲಿ: ಭಾರತದ ಭೂ ಪರಿವೀಕ್ಷಣೆ ಉದ್ದೇಶದ ಕಾರ್ಟೋಸ್ಯಾಟ್​ 2 ಉಪಗ್ರಹ ಉಡಾವಣೆಗೆ ಪಾಕಿಸ್ತಾನ ತಕರಾರು ತೆಗೆದಿದೆ.
ಕಾರ್ಟೋಸ್ಯಾಟ್​ ಉಪಗ್ರಹವನ್ನು ನಾಗರಿಕ ಮತ್ತು ಮಿಲಿಟರಿ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ದಕ್ಷಿಣ ಏಷ್ಯಾ ಭಾಗದಲ್ಲಿ ಅಸಮಾನತೆಯನ್ನು ಉಂಟು ಮಾಡುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮೊಹಮ್ಮದ್​ ಫೈಸಲ್​ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಬಾಹ್ಯಾಕಾಶ ತಂತ್ರಜ್ಞಾನಗಳು ನಾಗರಿಕ ಮತ್ತು ಮಿಲಿಟರಿ ಉದ್ದೇಶ ಹೊಂದಿರುತ್ತವೆ. ಯಾವುದೇ ಒಂದು ರಾಷ್ಟ್ರದ ಬಾಹ್ಯಾಕಾಶ ತಂತ್ರಜ್ಞಾನದಿಂದ ಮತ್ತೊಂದು ರಾಷ್ಟ್ರದ ಮಿಲಿಟರಿ ಸಾಮರ್ಥ್ಯಕ್ಕೆ ಧಕ್ಕೆಯುಂಟಾಗಬಾರದು. ಭಾರತದ ಈ ನಡೆಯಿಂದ ಈ ಪ್ರದೇಶದ ಸ್ಥಿರತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ಎಂದು ಫೈಸಲ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾರ್ಟೋಸ್ಯಾಟ್​ ಉಪಗ್ರಹ ಉಡಾವಣೆ ಯಶಸ್ವಿ 

ಶುಕ್ರವಾರ ಬೆಳಗ್ಗೆ ಇಸ್ರೋ ಕಾರ್ಟೋಸ್ಯಾಟ್​ ಉಪಗ್ರಹ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top