Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ಪಾಕಿಸ್ತಾನ ದಿಲ್ಲಿವರೆಗೂ ಬೃಹತ್ ಸುರಂಗ ಕೊರೆಯುತ್ತಿದೆ, ಏಕೆ ಗೊತ್ತಾ?

Wednesday, 11.10.2017, 1:23 PM       No Comments

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅರ್ಮಿಯಾ ಸೆಕ್ಟರ್‌ನ ಭಾರತ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಕೊರೆದಿದ್ದ ಸುರಂಗ ಮಾರ್ಗವನ್ನು ಕಳೆದ ವಾರ ಭಾರತೀಯ ಭದ್ರತಾ ಪಡೆ ಯೋಧರು ಗುರುತಿಸಿದ್ದರು. ಆದರೆ, ಇದೀಗ ಭಾರತದತ್ತ ದಿಕ್ಕು ಮಾಡಿರುವ ಇಂತಹ ಹಲವು ಸುರಂಗಗಳು ಪಾಕಿಸ್ತಾನದಲ್ಲಿ ಪತ್ತೆಯಾಗಿವೆ.

WION ಎಂಬ ವೆಬ್​ಸೈಟ್​ ತನ್ನ ವರದಿಯಲ್ಲಿ ತಿಳಿಸಿರುವಂತೆ ಪಾಕಿಸ್ತಾನದ ಮೈನ್ವಾಲಿ ಎಂಬ ಪ್ರದೇಶದಲ್ಲಿ ಹಲವು ಸುರಂಗ ಮಾರ್ಗಗಳು ಪತ್ತೆಯಾಗಿವೆ. ಇದು ಅಮೃತಸರದಿಂದ 350 ಕಿ.ಮೀ ಹಾಗೂ ದೆಹಲಿಯಿಂದ 750 ಕಿ.ಮೀ ದೂರದಲ್ಲಿದ್ದು, ಇಲ್ಲಿಗೂ ಸಂಪರ್ಕ ಕಲ್ಪಿಸುವ ಭಯಾನಕ ವಿಷಯ ಬಹಿರಂಗವಾಗಿದೆ.

ಇನ್ನು ಸುರಂಗಗಳನ್ನು ಅತಿ ಅಪಾಯಕಾರಿ ನ್ಯೂಕ್ಲಿಯರ್​ ಶಸ್ತ್ರಾಸ್ತ್ರಗಳನ್ನು ಇಡಲು ನಿರ್ಮಿಸಲಾಗಿದ್ದು, ಅನೇಕ ವಿಧ್ವಂಸಕ ಕೃತ್ಯಗಳನ್ನು ಎಸಗಲು ಈ ಸುರಂಗಗಳನ್ನು ಬಳಸಿಕೊಳ್ಳುವ ದೂರ ದುರಾಲೋಚನೆ ಪಾಕಿಸ್ತಾನದ್ದು ಎನ್ನಲಾಗುತ್ತಿದೆ.

ಸುರಂಗ ಹೇಗಿದೆ?
ಪತ್ತೆಯಾಗಿರುವ ಸುರಂಗಗಳು 10 ಮೀಟರ್​ ಎತ್ತರವಿದ್ದು, 10 ಮೀಟರ್ ಅಗಲ ಹೊಂದಿದೆ. ಅಲ್ಲದೆ ಈ ಸುರಂಗ ಮಾರ್ಗ ಪ್ರತಿಯೊಂದು ಪ್ರಮುಖ ರಸ್ತೆಗೂ ಸಂಪರ್ಕ ಕಲ್ಪಿಸುವಂತಿದೆ.

ಇನ್ನು ಸುರಂಗ ಮಾರ್ಗದಿಂದ ಸಂಪರ್ಕ ಕಲ್ಪಿಸುವ ಪ್ರತಿಯೊಂದು ದಾರಿಗೂ ಪ್ರತ್ಯೇಕ ದ್ವಾರಗಳಿವೆ. ಅಲ್ಲದೆ ಪ್ರತಿಯೊಂದು ಸುರಂಗದಲ್ಲೂ 12 ರಿಂದ 24 ನ್ಯೂಕ್ಲಿಯರ್​ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಇಡಲಾಗಿದ್ದು, ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿ ಸುರಂಗ ಕೊರೆಯಲಾಗಿದೆ.

ಇನ್ನು ಪತ್ತೆಯಾಗಿರುವ ಸುರಂಗಗಳ ಪ್ರದೇಶಗಳ ಬಳಿ ಬೃಹತ್ ಬೇಲಿ ನಿರ್ಮಿಸಲಾಗಿದ್ದು, ಯಾವುದೇ ತೊಂದರೆಯಾಗದಂತೆ ಬ್ಯಾರಿಕೇಡ್​ಗಳನ್ನು ನಿರ್ಮಿಸಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top