Saturday, 24th March 2018  

Vijayavani

Breaking News

ದಿವಂಗತರ ಜೊತೆ ಬದುಕಿರುವವರ ಫೋಟೋಗೂ ಹಾರ

Tuesday, 14.11.2017, 5:09 PM       No Comments

>> ಧಾರವಾಡ ಗ್ರಂಥಾಲಯ ಸಪ್ತಾಹದಲ್ಲಿ ಯಡವಟ್ಟು

ಧಾರವಾಡ‌: ದಿವಂಗತ ಜ್ಞಾನಪೀಠ ಪುರಸ್ಕೃತರ ಜತೆಯಲ್ಲೇ ಬದುಕಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋಗಳಿಗೆ ಹಾರ, ಕುಂಕುಮ ಇಟ್ಟು, ವಿಭೂತಿ ಹಚ್ಚಿ ಪೂಜೆ ಮಾಡಿರುವ ಘಟನೆ ಧಾರವಾಡದ ಗ್ರಂಥಾಲಯ ಸಪ್ತಾಹದಲ್ಲಿ ನಡೆದಿದೆ.

ಧಾರವಾಡದ ಕಲಾಭವನದಲ್ಲಿ ಸಾರ್ವಜನಿಕ ಗ್ರಂಥಾಲಯ‌ ಇಲಾಖೆ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಆಯೋಜಕರಿಂದ ಈ ಯಡವಟ್ಟು ನಡೆದಿದೆ.

ದಿವಂಗತ ಜ್ಞಾನಪೀಠ ಪುರಸ್ಕೃತರ ಫೋಟೋಗಳ ಜೊತೆಗೆ ಬದುಕಿರುವ ಜ್ಞಾನಪೀಠ ಪುರಸ್ಕೃತರಾದ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರರ ಫೋಟೋಗಳಿಗೂ ಪೂಜೆ ಮಾಡಲಾಗಿದೆ.

ಕಾರ್ನಾಡ್​ ಹಾಗೂ ಕಂಬಾರರ ಫೋಟೋಗಳಿಗೆ ಹಾರ ಹಾಕಿರುವುದು ಸಚಿವ ತನ್ವೀರ್ ಸೇಠ್​ ಕಣ್ಣಿಗೆ ಬಿದ್ದ ಬಳಿಕ ಫೋಟೋದಿಂದ ಹಾರವನ್ನು ತೆಗೆಸಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top