Friday, 25th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ವಿಶ್ವ ರೇಡಿಯೋ ದಿನ: ರೇಡಿಯೋದಿಂದ ಜನರು ಹತ್ತಿರಾಗುತ್ತಾರೆ ಅಂದ್ರು ಪ್ರಧಾನಿ

Tuesday, 13.02.2018, 4:46 PM       No Comments

ನವದೆಹಲಿ: ವಿಶ್ವ ರೇಡಿಯೋ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂದೇಶ ಕಳಿಸಿದ್ದು, ರೇಡಿಯೋ ಜನರನ್ನು ಹತ್ತಿರಕ್ಕೆ ಸೇರಿಸುತ್ತದೆ ಎಂದು ಹೇಳಿದ್ದಾರೆ.

ಪ್ರತಿ ತಿಂಗಳು ದೇಶದ ಜನತೆಯನ್ನು ಉದ್ದೇಶಿಸಿ ಮನ್‌ ಕಿ ಬಾತ್‌ನಲ್ಲಿ ಮಾತನಾಡುವ ಅವರು, ವಿಶ್ವದ ಎಲ್ಲ ರೇಡಿಯೋ ಮತ್ತು ರೇಡಿಯೋ ಕೇಳುಗರಿಗೆ ಶುಭಾಶಯ ಕೋರಿದ್ದಾರೆ.

ಸಂವಹನ ಮಾಧ್ಯಮವು ಯಾವಾಗಲೂ ಕಲಿಕೆಯ, ಹೊಸ ಅನ್ವೇಷಣೆಯ, ಮನರಂಜನೆ ಮತ್ತು ಜತೆಯಾಗಿ ಎಲ್ಲರನ್ನು ಬೆಳೆಸುವಂತಹ ಕೇಂದ್ರ ಬಿಂದುವಾಗಿದೆ. ಇದನ್ನು ಮನ್‌ ಕಿ ಬಾತ್‌ ಮೂಲಕ ತಾನು ಕಂಡುಕೊಂಡಿದ್ದೇನೆ ಎಂದು ತಿಳಿಸಿರುವ ಅವರು, ಮನ್‌ ಕಿ ಬಾತ್‌ನ ಎಲ್ಲ ಸಂಚಿಕೆಗಳ ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಕೂಡ ವಿಶ್ವ ರೇಡಿಯೋ ಅಂಗವಾಗಿ ಶುಭಾಶಯ ಕೋರಿದ್ದು, ಸಂವಹನಕ್ಕೆ ರೇಡಿಯೋ ಒಂದು ಶಕ್ತಿಶಾಲಿ ಮಾಧ್ಯಮ. ಇದು ನಮ್ಮ ಜೀವನವನ್ನು ಹಲವು ವಿಧಾನಗಳಲ್ಲಿ ತಲುಪುತ್ತದೆ. ರೇಡಿಯೋ ಮೂಲಕ ಕೇಳುವ ಧ್ವನಿಗೆ ವಿಶೇಷ ಶಕ್ತಿಯಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top