Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಧರ್ಮಸ್ಥಳದಲ್ಲಿ ತುಲಾಭಾರ: ಆಣೆ ಪ್ರಮಾಣದ ಋಣ ತೀರಿಸಿದ ಎಚ್​ಡಿಕೆ

Tuesday, 27.06.2017, 5:15 PM       No Comments

ಮಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ತುಲಾಭಾರವನ್ನು ನೆರವೇರಿಸಿದ್ದಾರೆ.

ಮಂಗಳವಾರ ಮಂಜಾನೆ 7 ಗಂಟೆಯ ವೇಳೆಗೆ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ಮಂಜುನಾಥನ ದರ್ಶನ ಪಡೆದು ಸನ್ನಿಧಾನದಲ್ಲಿ ತುಲಾಭಾರ ಸೇವೆ ಮಾಡಿದ್ದಾರೆ.

ಕಾಕತಾಳೀಯವೋ!? :

ಕುಮಾರಸ್ವಾಮಿ ಅವರ ಧರ್ಮಸ್ಥಳದ ಭೇಟಿಯ ಹಿಂದೆ ಹಲವು ಕಾರಣಗಳು ಬೆಳಕಿಗೆ ಬಂದಿದೆ. 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದ ಎಚ್​.ಡಿ.ಕೆ ಜೂನ್ 27ರಂದೇ ಧರ್ಮಸ್ಥಳದಲ್ಲಿ ಬಿಎಸ್​ವೈ ಅವರನ್ನು ಆಣೆ ಪ್ರಮಾಣಕ್ಕೆ ಅಹ್ವಾನಿಸಿದ್ದರು. ಈ ಆಣೆ ಪ್ರಮಾಣದ ವಿಚಾರ ರಾಷ್ಟ್ರಾದ್ಯಾಂತ ಸುದ್ದಿಯಾಗಿತ್ತು.

ಇನ್ನು ಕಾಕತಾಳೀಯವೋ ಎಂಬಂತೆ ಹರಕೆ ಸಲ್ಲಿಸಲು ಕುಮಾರಸ್ವಾಮಿ ಇಂದು ಜೂನ್ 27ರಂದೇ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಏಕೆಂದರೆ ಜೂನ್ 27ರಂದೇ 2011ರಲ್ಲಿ ಕುಮಾರಸ್ವಾಮಿ ಆಣೆ ಪ್ರಮಾಣ ಮಾಡಿದ್ದರು.

Leave a Reply

Your email address will not be published. Required fields are marked *

Back To Top