Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಪತ್ನಿ ಬಿಟ್ಟು ವಿದೇಶದಲ್ಲಿ ಸೆಟ್ಲ್​ ಆಗುವ ಪತಿಗೆ ವೆಬ್​ಸೈಟ್​ನಲ್ಲಿ ಸಮನ್ಸ್​!

Thursday, 14.06.2018, 2:15 PM       No Comments

ನವದೆಹಲಿ: ಭಾರತದಲ್ಲೇ ಪತ್ನಿಯನ್ನು ಬಿಟ್ಟು ವಿದೇಶಕ್ಕೆ ಹೋಗಿ ಸೆಟ್ಲ್ ಆಗುವ ಪತಿಯರಿಗೆ ಬುದ್ಧಿ ಕಲಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ವೆಬ್​ ಸೈಟ್​ನಲ್ಲಿ ಸಮನ್ಸ್​ ಜಾರಿ ಮಾಡುವ ವಿಭಿನ್ನ ನಿರ್ಣಯ ಕೈಗೊಂಡಿದೆ.

ವಿದೇಶದಲ್ಲಿ ಕೆಲಸದಲ್ಲಿರುವ ಹಲವರು ಭಾರತದಲ್ಲಿ ಮದುವೆಯಾದ ಬಳಿಕ ಪತ್ನಿಯನ್ನು ಇಲ್ಲೇ ಬಿಟ್ಟು ಹೋಗುತ್ತಾರೆ. ಹೆಂಡತಿಗೆ ಪಾಸ್​ಪೋರ್ಟ್​, ವೀಸಾ ಏನೂ ಮಾಡಿಸದೆ ಅವರ ಪಾಡಿಗೆ ಅವರನ್ನು ಬಿಡುತ್ತಾರೆ. ತಮ್ಮ ಸರಿಯಾದ ವಿಳಾಸವನ್ನೂ ನೀಡುವುದಿಲ್ಲ. ಸಂಪರ್ಕಕ್ಕೂ ಸಿಗುವುದಿಲ್ಲ. ಇಂಥ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಇಂಥ ಪ್ರಕರಣಗಳ ವಿರುದ್ಧ ಕಾನೂನು ಕ್ರಮ ನಿರ್ಣಯವನ್ನು ಇತ್ತೀಚೆಗೆ ಗೃಹ ಸಚಿವ ರಾಜನಾಥ್​ ಸಿಂಗ್​ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸರ್ಕಾರದ ಸಚಿವರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದರಲ್ಲಿ ವಿದೇಶಾಂಗ ಸಚಿವಾಲಯ, ಕಾನೂನು ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಗಳು ಪಾಲ್ಗೊಂಡಿದ್ದರು.
ಎನ್​ಆರ್​ಐ ಪ್ರಕರಣಗಳಲ್ಲಿ ಸಂತ್ರಸ್ತರಾಗುವ ಮಹಿಳೆಯರಿಗೆ ತಕ್ಷಣ ಪರಿಹಾರ ನೀಡುವ ಕೆಲಸವನ್ನು ನಾವು ಒಟ್ಟಾಗಿ ಮಾಡುತ್ತೇವೆ. ಇದಕ್ಕೆ ಉಳಿದೆಲ್ಲ ಇಲಾಖೆಗಳೂ ಸಹಕಾರ ಕೊಡುವುದಾಗಿ ತಿಳಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಟ್ವೀಟ್​ ಮಾಡಿದೆ.

Leave a Reply

Your email address will not be published. Required fields are marked *

Back To Top