Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

1990ರಿಂದಲೇ ಬೌದ್ದ ಶಿಕ್ಷಕರಿಂದ ಲೈಂಗಿಕ ಕಿರುಕುಳ, ಆರೋಪಗಳಲ್ಲಿ ಹೊಸದೇನು ಇಲ್ಲ: ದಲೈಲಾಮಾ

Sunday, 16.09.2018, 6:56 PM       No Comments

ನವದೆಹಲಿ: 1990 ರ ದಶಕದಿಂದಲೇ ಬೌದ್ಧ ಧರ್ಮದ ಶಿಕ್ಷಕರಿಂದ ಲೈಂಗಿಕ ದುರ್ಬಳಕೆಯ ಬಗ್ಗೆ ಆರೋಪ ಕೇಳಿ ಬರುತ್ತಿತ್ತು. ಹಾಗಾಗಿ ಈ ಆರೋಪಗಳಲ್ಲಿ ಹೊಸದೇನು ಇಲ್ಲ ಎಂದು ಟಿಬೆಟಿಯನ್‌ ಧರ್ಮಗುರು ದಲೈಲಾಮ ಭಾನುವಾರ ತಿಳಿಸಿದ್ದಾರೆ.

ನಾಲ್ಕು ದಿನಗಳ ಯೂರೋಪ್‌ ಪ್ರವಾಸದಲ್ಲಿರುವ ಅವರು, ನೆದರಲೆಂಡ್‌ನಲ್ಲಿ ಬೌದ್ದ ಶಿಕ್ಷಕರಿಂದ ಲೈಂಗಿಕ ಕಿರುಕುಳಕೊಳಗಿದ್ದ 12 ಜನ ಸಂತ್ರಸ್ತರು ದಲೈಲಾಮಾ ಅವರನ್ನು ಭೇಟಿ ಮಾಡಲು ಕೇಳಿಕೊಂಡಿದ್ದರಿಂದ ಅವರನ್ನು ಭೇಟಿ ಮಾಡಿದರು.

ನಾವು ಬೌದ್ದ ಧರ್ಮವನ್ನು ತೆರೆದ ಮನಸ್ಸು ಮತ್ತು ಹೃದಯದಿಂದ ಒಪ್ಪಿಕೊಂಡಿದ್ದೇವೆ. ಆದರೆ ಅದರ ಹೆಸರಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದೇವೆ ಎಂದು ದಲೈಲಾಮಾ ಅವರ ಭೇಟಿಯನ್ನು ಕೇಳಿದ್ದ ಸಂತ್ರಸ್ತರೊಬ್ಬರು ತಮ್ಮ ಅರ್ಜಿಯಲ್ಲಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ದಲೈಲಾಮಾ, ಈ ಎಲ್ಲ ಬೆಳವಣಿಗೆಗಳು ನನಗೆ ತಿಳಿದಿವೆ. ಇದರಲ್ಲಿ ಹೊಸದೇನಿಲ್ಲ. 25 ವರ್ಷದ ಹಿಂದೆಯೇ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪಶ್ಚಿಮದ ಬೌದ್ದ ಧರ್ಮದ ಶಿಕ್ಷಕರು ಲೈಂಗಿಕ ಕಿರುಕುಳ ನೀಡುತ್ತಿರುವ ಕುರಿತು ತಿಳಿಸಿದ್ದರು ಎಂದು ಧರ್ಮಶಾಲಾದಿಂದ ಗಡಿಪಾರಾಗಿರುವ 83 ವರ್ಷದ ದಲೈಲಾಮಾ ತಿಳಿಸಿದ್ದಾರೆ.

ಲೈಂಗಿಕವಾಗಿ ದುರುಪಯೋಗ ಪಡಿಸಿಕೊಳ್ಳುವವರು ಬುದ್ದನ ಬೋಧನೆಗಳಿಗೆ ಹೆದರುವುದಿಲ್ಲ. ಅವರೀಗ ಎಲ್ಲವನ್ನು ಸಾರ್ವಜನಿಕವಾಗಿಯೇ ಮಾಡುತ್ತಿದ್ದಾರೆ. ಜನರು ತಮ್ಮ ಅವಮಾನದ ಬಗ್ಗೆ ತಾವೇ ಕಾಳಜಿ ವಹಿಸಬೇಕಿದೆ ಎಂದು ತಿಳಿಸಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top