Monday, 25th September 2017  

Vijayavani

1. ರಾಜ್ಯದೆಲ್ಲೆಡೆ ವರುಣನ ಆರ್ಭಟ- ಬೆಂಗಳೂರು, ದಾವಣೆಗೆರೆಯಲ್ಲಿ ಮಳೆ ಅವಾಂತರ- ಕೆರೆಗಳೆಲ್ಲ ಭರ್ತಿ, ಮಂಡ್ಯದಲ್ಲಿ ಜಮೀನಿಗೆ ನುಗ್ಗಿತು ನೀರು 2. ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಪ್ರಕರಣ- ಬೆಂಗಳೂರಿನ ನ್ಯಾಷನಲ್​ ಕಾಲೇಜು ವಿರುದ್ಧ ನಿರ್ಲಕ್ಷ್ಯದ ಆರೋಪ- ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ 3. ಇಂದು ದೀನ್​ ದಯಾಳ್​​ ಜನುಮದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 4. ಜೆಮ್​ಶೆಡ್​ಪುರದಲ್ಲಿ ಭೀಕರ ಅಗ್ನಿ ಅವಘಡ- 8 ಜನ ಸಜೀವ ದಹನ, 25 ಮಂದಿಗೆ ಗಾಯ- ಪಟಾಕಿ ಕಾರ್ಖಾನೆಗೆ ಧಗಧಗಿಸಿದ ಕಿಡಿ 5. ಹುಟ್ಟಿದ ಆರೇ ನಿಮಿಷದಲ್ಲಿ ಮಗುವಿಗೆ ಆಧಾರ್- ಜನನ ಪ್ರಮಾಣಪತ್ರಕ್ಕೆ ಲಿಂಕ್​ ಮಾಡಿಸಿದ ಪೋಷಕರು- ಒಸ್ಮಾನಾಬಾದ್​ ಆಸ್ಪತ್ರೆಯಲ್ಲಿ ಭಾರಿ ಕಮಾಲ್​
Breaking News :

ಮೋದಿ ಭಾಷಣ ಹಿಂದುತ್ವವಾದ್ರೆ ಕೇಳುವಂತಿಲ್ಲ: ಸಿಎಂ ಸಿದ್ದು

Monday, 11.09.2017, 1:16 PM       No Comments

ಮೈಸೂರು: ದೀನ್ ದಯಾಳ್ ಜನ್ಮ ಶತಾಬ್ದಿ ಹಿನ್ನೆಲೆ ಎಲ್ಲಾ ವಿವಿಗಳಲ್ಲಿ ಪ್ರಧಾನಿ ಭಾಷಣ ಕಡ್ಡಾಯ ಪಡಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಇಂದು ಆಕ್ಷೇಪ ವ್ಯಕ್ತಪಡಿಸಿದರು.

ಸೆ.7 ರಂದು ಯುಜಿಸಿ ಆದೇಶ ಹೊರಡಿಸಿತ್ತು. ವಿಶ್ವವಿದ್ಯಾಲಯ ಮಾನ್ಯತೆ ಆಯೋಗದಿಂದ ಎಲ್ಲ ವಿವಿಗಳಿಗೆ ಪ್ರಧಾನಿ ಭಾಷಣ ಕಡ್ಡಾಯ ವೀಕ್ಷಣೆಗೆ ಯುಜಿಸಿ ಆದೇಶಿಸಿತ್ತು.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ‘ದೀನ್​ ದಯಾಳ ಜನ್ಮಶತಾಬ್ದಿ ಭಾಷಣ ಅಂದರೆ ಅದು ಹಿಂದುತ್ವದ ಭಾಷಣ, ಅಂತಹ ಭಾಷಣ ಕೇಳುವ ಅಗತ್ಯವಿಲ್ಲ ಅಂತಾ ಹೇಳಿದರು.

ಮೋದಿ ಭಾಷಣ ಹಿಂದುತ್ವದ ಭಾಷಣವಾದ್ರೆ ಅಂತಹ ಭಾಷಣ ಕೇಳುವಂತಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top