Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ನೋ ಜಾಬ್ ನೋ ವೋಟ್ : ಸಿಎಂ ವಿರೋಧಿ ಆಂದೋಲನಕಾರನ ಮೇಲೆ ಹಲ್ಲೆ

Thursday, 11.01.2018, 6:14 PM       No Comments

ಮೈಸೂರು: ಸಿಎಂ ವಿರುದ್ಧ ಫ್ರೀಡಂ ಪಾರ್ಕ್​ ಬಳಿ ನೋ ಜಾಬ್ ನೋ ವೋಟ್ ಹೆಸರಿನ ಆಂದೋಲನ ನಡೆಸುತ್ತಿದ್ದ ಚಳವಳಿಗಾರನ ಮೇಲೆ ಸಿಎಂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ.

ಚಳವಳಿಯ ರೂವಾರಿ ಒಡಿಸ್ಸಾ ಮೂಲದ ಪತ್ರಕರ್ತ, ಚಂದ್ರ ಮಿಶ್ರ ಅವರ ಮೇಲೆ ಹಲ್ಲೆ ನಡೆಸಲಾಗಿದೆ.  2013ರ ಚುನಾವಣೆಯಲ್ಲಿ 20 ಸಾವಿರ ಉದ್ಯೋಗ ಭರವಸೆ ನೀಡಿದ್ದ ಸಿಎಂ ಇನ್ನೂ ಉದ್ಯೋಗ ನೀಡದ್ದಕ್ಕೆ ವರುಣ ಕ್ಷೇತ್ರದಾದ್ಯಂತ ಸಿಎಂ ವಿರೋಧಿ ಆಂದೋಲನ ಶುರುವಾಗಿದೆ.

ಹಳ್ಳಿಗೆ ತೆರಳಿ ಉದ್ಯೋಗ ನೀಡದ ಸಿಎಂ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಉದ್ಯೋಗ ನೀಡದ ಸಿಎಂಗೆ ಮುಂದಿನ ಚುನಾವಣೆಯಲ್ಲಿ ವೋಟು ಇಲ್ಲ ಎಂಬ ಕರ ಪತ್ರ ಹಂಚಿಕೆ ಮಾಡಿದ್ದಾರೆ.

ಇದರಿಂದ ಆಕ್ರೋಶಕ್ಕೊಳಗಾದ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಪ್ರಶಾಂತ್ ಗೌಡ ಸಹಚರರು ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರ ವಿರುದ್ಧ ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

Back To Top