Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಬುರಾರಿ ಪ್ರಕರಣದಲ್ಲಿ 12ನೇ ವ್ಯಕ್ತಿಯ ಕೈವಾಡವಿಲ್ಲ ; ಆತ್ಮದ ಜತೆ ಮಾತನಾಡುತ್ತಿದ್ದ ಲಲಿತ್​ ಭಾಟಿಯ!

Wednesday, 04.07.2018, 5:24 PM       No Comments

ನವದೆಹಲಿ: ಬುರಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೃತ ಕುಟುಂಬದ ಸುಮಾರು 20 ಸಂಬಂಧಿಕರನ್ನು ಭೇಟಿಯಾಗಿ ವಿಚಾರಣೆ ನಡೆಸಿದ್ದು, ತನಿಖೆಗೆ ಮನೋವೈದ್ಯರ ನೆರವು ಕೂಡ ಪಡೆಯಲಿದ್ದಾರೆ.

ಪ್ರಕರಣದಲ್ಲಿ 12 ನೇ ವ್ಯಕ್ತಿಯಾಗಿ ಸ್ವಯಂಘೋಷಿತ ದೇವಮಾನವರೊಬ್ಬರ ಕೈವಾಡ ಇದೆ ಎಂಬ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ.

ಮೊದಲಿಗೆ ನಿಗೂಢ ಸಾವನ್ನಪ್ಪಿದ ಕುಟುಂಬಸ್ಥರು ಕೊಂಡ್ಲಿ ಮೂಲದ ದೇವಮಾನವನ ಹಿಂಬಾಲಕರಾಗಿದ್ದರು ಎಂಬ ವಿವಾದ ಹಬ್ಬಿತ್ತು. ಆದರೆ, ಅವರ ಸಾವಿನಲ್ಲಿ ದೇವ ಮಾನವನ ಪಾತ್ರವಿಲ್ಲ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಕೈ ಬರವಣಿಗೆಯ ಪತ್ರವನ್ನು ಮನೆಯಲ್ಲಿ ವಶಪಡಿಸಿಕೊಂಡಿದ್ದು, ಮೋಕ್ಷ, ಶೂನ್ಯ ಹಾಗೂ ದೇವರನ್ನು ಸಂತೈಸುವುದು ಎಂಬ ಮೂವರು ಅಂಶಗಳು ಅದರಲ್ಲಿ ಉಲ್ಲೇಖವಾಗಿದೆ. 2008 ರಿಂದ ಬರೆಯಲಾದ ಕೆಲವು ತೆಳು ಹಾಳೆಗಳ ಟಿಪ್ಪಣಿ ದೊರೆತಿದ್ದು, ಲಲಿತ್​ ಭಾಟಿಯ ಎಂಬವರು ತಂದೆ ಸಾವಿನ ನಂತರ ಆಧ್ಯಾತ್ಮ ಕಡೆ ಮುಖಮಾಡಿದ್ದನ್ನು ಸೂಚಿಸುತ್ತದೆ.

ಪ್ರಕರಣ ಸಂಬಂಧ ಪೊಲೀಸರು ಮನೆಯೊಡತಿಯ ಹಿರಿಯ ಮಗ, ಅವಳ ಮಗಳು ಹಾಗೂ ಅವಳ ಮೃತ ಸೊಸೆಯ ಸಹೋದರಿಯರನ್ನು ಪ್ರಶ್ನಿಸಿದ್ದು, ಇವರೆಲ್ಲರೂ ಮೃತ ಕುಟುಂಬವು ಅತೀಂದ್ರಿಯ ಶಕ್ತಿಯ ವಶೀಕರಣದಲ್ಲಿ ತೊಡಗಿಕೊಂಡಿದ್ದರು ಎಂಬುದನ್ನು ನಿರಾಕರಿಸಿದ್ದಾರೆ. ಮನೆಯ ಹೊರಭಾಗದಲ್ಲಿ 11 ಪೈಪ್​ಗಳು ಕಾಣಿಸಿಕೊಂಡ ನಂತರ ಈ ವಿವಾದ ಹಬ್ಬಿತ್ತು.

ಘಟನೆ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ವಿಮ್ಹಾನ್ಸ್​ ವೈದ್ಯರ ಬಳಿ ಮಾತನಾಡಿ, ಇದೊಂದು ಹಂಚಿಕೆಯ ಮನೋರೋಗ. ಒಬ್ಬ ವ್ಯಕ್ತಿಯ ಭ್ರಮೆಯ ನಂಬಿಕೆಗಳು ಇನ್ನೊಬ್ಬರಿಗೆ ಹರಡುತ್ತವೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಮಂಗಳವಾರ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿದಾಗ, ಅವರಿಗೆ 2011 ರಿಂದ ನಮೂದಿಸಲಾಗಿದ್ದ ಮನಸಿನ ಮಾತುಗಳ ಟಿಪ್ಪಣಿಗಳು ದೊರಕಿದೆ. ಇದರಲ್ಲಿ ಮೋಕ್ಷ, ಶೂನ್ಯ ಹಾಗೂ ದೇವರನ್ನು ಸಂತೈಸುವ ಬಗೆಗೆ ಬರೆಯಲಾಗಿದೆ. ಅಲ್ಲದೆ, ಇನ್ನಿತರ ಪತ್ರಿಕೆಗಳು ಕೂಡ ಪೊಲೀಸರಿಗೆ ದೊರಕಿತ್ತು. ಮೃತ ಲಲಿತ್​ ಭಾಟಿಯಾ ಅವರು ತಂದೆಯಂತೆ ಅಹಂ ವ್ಯಕ್ತಿತ್ವವನ್ನು ಹೊಂದಿದ್ದನು. ಆಗಾಗ ಮಾತನಾಡುವಾಗ ತಂದೆಯಂತೆ ವರ್ತಿಸುತ್ತಿದ್ದನು. ಅಲ್ಲದೆ, ಆತ ಮೌನ ವ್ರತ ಎಂಬ ಕಾರ್ಯಕ್ರಮವನ್ನು ಆಗಾಗ ಗಮನಿಸುತ್ತಿದ್ದನು ಎಂಬುದು ತಿಳಿದು ಬಂದಿದೆ.

ಮೃತರಲ್ಲಿ ಧೃವ ಎಂಬಾತ ಮಕ್ಕಳಿಗೆ ಲಲಿತ್​ ಭಾಟಿಯ ಕುರಿತು ಅಂಕಲ್ ಆಗಾಗ ತಾತನ ಆತ್ಮವನ್ನು ಆವಾಹನೆ ಮಾಡುತ್ತಾರೆ​ ಎಂದು ಹೇಳುತ್ತಿದ್ದ ಎಂಬುದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ತನಿಖಾ ನಂತರ ಮೃತ ಕುಟುಂಬವು ಹಂಚಿಕೆ ಮನೋ ವಿಕಾರಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಒಬ್ಬ ವ್ಯಕ್ತಿಯ ಭ್ರಮೆಯ ನಂಬಿಕೆಗಳು ಇನ್ನೊಬ್ಬರಿಗೆ ಹರಡುತ್ತವೆ. ಈ ಪ್ರಕರಣದಲ್ಲಿ ಲಿಲತ್​ ಭಾಟಿಯ ತನ್ನ ಸತ್ತ ತಂದೆಯ ಜತೆಗೆ ಭ್ರಮಾ ಲೋಕದಲ್ಲಿ ಮಾತನಾಡುತ್ತಿದ್ದ. ಈತನ ನಂಬಿಕೆಗಳನ್ನು ಕುಟುಂಬದ ಇತರ ಸದಸ್ಯರು ಬಲವಾಗಿ ನಂಬಿದ್ದರು ಎಂದು ಮನೋವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top