Thursday, 18th January 2018  

Vijayavani

ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ- ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್        ಯುಪಿ ಪೊಲೀಸರಿಂದ ನಡೀತು ಅಚಾತುರ್ಯ- 8 ವರ್ಷದ ಹುಡುಗನ ಎನ್​ಕೌಂಟರ್​- ಮಿಸ್​ ಫೈರ್​ ಆಯ್ತೆಂದು ಜಾರಿಕೆಯ ಉತ್ತರ        ಜಯಲಲಿತಾ ಸತ್ತಿದ್ದು ಡಿ.5ಕ್ಕಲ್ಲ ನಾಲ್ಕಕ್ಕೆ- ಶಶಿಕಲಾ ಸಹೋದರನಿಂದ ಹೊಸ ಬಾಂಬ್​- ಅಮ್ಮ ಸತ್ತು ವರ್ಷ ಕಳೆದ್ರೂ ನಿಂತಿಲ್ಲ ಊಹಾಪೋಹ        ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು- ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ- ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ- ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು- ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಬಸವಕಲ್ಯಾಣ ಮಳೆ ಅವಾಂತರ: ಜನ ರಕ್ಷಿಸಿ, ಸೈ ಎನಿಸಿಕೊಂಡ ಎಸಿ

Friday, 13.10.2017, 11:25 AM       No Comments

ಬೀದರ್: ಬಸವಕಲ್ಯಾಣದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗೆ ನುಗ್ಗಿದ ನೀರಿನಲ್ಲಿ ಹಲವಾರು ಮಕ್ಕಳು ಮತ್ತು ಮಹಿಳೆಯರು ಸಿಲುಕಿಕೊಂಡಿದ್ದರು. ಪರಿಸ್ಥಿತಿಯನ್ನರಿತ ಸಹಾಯಕ ಆಯುಕ್ತ ಶರಣಬಸಪ್ಪ ಕೊಟಗೋಳು ಖುದ್ದಾಗಿ ಅವರನ್ನೆಲ್ಲ ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಒಬ್ಬ ವೈದ್ಯರೂ ಇರದಿರುವುದನ್ನ ನೋಡಿ ಸಹಾಯಕ ಆಯುಕ್ತರು ಸಿಟ್ಟಾಗಿ ಅಧಿಕಾರಿಯನ್ನ ತರಾಟೆಗೆ ತೆಗೆದಿಕೊಂಡಿದ್ದಾರೆ.

ವಿಡಿಯೋ ನೋಡಿ:

ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಿಟ್ಟಿಗೆದ್ದ ಸಹಾಯಕ ಆಯುಕ್ತ ಕೊಟಗೋಳು ಉಪ ಆರೋಗ್ಯ ಅಧಿಕಾರಿ (ಡಿಎಚ್ಓ) ಮೊಬೈಲ್​​ಗೆ ಕರೆ ಮಾಡಿ ಡ್ಯೂಟಿ ವೈದ್ಯರು ಸೇರಿದಂತೆ ಆಸ್ಪತ್ರೆಯಲ್ಲಿ ಒಂದು ಕತ್ತೆಯೂ ಇಲ್ಲಲ್ರಿ ಎಂದು ಗರಂ ಆಗಿದ್ದಾರೆ.

ನಂತರ ಬೀಗ ಹಾಕಲಾದ ವಾರ್ಡ್​ನ ಬೀಗ ಮುರಿದು ಮಳೆಯಿಂದ ರಕ್ಷಣೆ ಮಾಡಿದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಅಲ್ಲಿ ಆಸರೆ ನೀಡಿ ಚಿಕಿತ್ಸೆ ಕೊಡಿಸಿದರು. ಸಹಾಯಕ ಆಯುಕ್ತರು ಸಂತ್ರಸ್ತರ ರಕ್ಷಣೆ ಮಾಡಿ ಎಲ್ಲರ ಪತ್ರಿಗೆ ಪಾತ್ರರಾಗಿದ್ದಾರೆ.‌ (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top