Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News

ಮುರಿದು ಬಿದ್ದ ಮಹಾ ಘಟಬಂಧನ್​: ನಿತೀಶ್​ ಕುಮಾರ್​ ರಾಜೀನಾಮೆ

Wednesday, 26.07.2017, 6:52 PM       No Comments

ಪಟನಾ: ನಾಟಕೀಯ ಬೆಳವಣಿಗೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನಿತೀಶ್​ ಕುಮಾರ್​ ಬುಧವಾರ ಸಂಜೆ ರಾಜ್ಯಪಾಲ ಕೇಸರಿ ನಾಥ ತ್ರಿಪಾಠಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಇದಕ್ಕೂ ಮುನ್ನ ನಿತೀಶ್​ ಜೆಡಿಯು ಶಾಸಕರೊಂದಿಗೆ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ತಮ್ಮ ರಾಜೀನಾಮೆ ನಿರ್ಧಾರವನ್ನು ಅಂತಿಮಗೊಳಿಸಿದ್ದರು.

ರಾಜೀನಾಮೆ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಿತೀಶ್​ ಕುಮಾರ್​ ಬಿಹಾರದ ಜನರಿಗೋಸ್ಕರ  ಪ್ರಜಾಪ್ರಬುತ್ವ ಉಳಿಸುವುದಕ್ಕಾಗಿ ನಾನು ರಾಜೀನಾಮೆ ನೀಡಿದ್ದೇನೆ. ನನಗೆ ಯಾವುದೇ ಅಜೆಂಡಾಗಳಿಲ್ಲ, ನನಗೆ ಬಿಹಾರದ ಅಭಿವೃದ್ಧಿಯಷ್ಟೇ ಮುಖ್ಯ ಎಂದು ತಿಳಿಸಿದರು.

ತೇಜಸ್ವಿ ಯಾದವ್​ ವಿರುದ್ಧದ ಆರೋಪಗಳ ಕುರಿತು ಒಂದು ತೀರ್ಮಾನ ತೆಗೆದುಕೊಳ್ಳಿ ಅಂತಾ ಹೇಳಿದ್ದೆ, ನಾನು ರಾಜೀನಾಮೆ ನೀಡುವಂತೆ ಹೇಳಿಲ್ಲ. ನಾವು ಮೈತ್ರಿಯ ನಿಯಮಗಳನ್ನ ಪಾಲನೆ ಮಾಡಲು ಯತ್ನಿಸಿದ್ದೇವೆ, ಈ ಕುರಿತು ರಾಹುಲ್​​ ಜತೆಗೂ ಈ ಬಗ್ಗೆ ಮಾತುಕತೆ ನಡೆಸಿದ್ದೆ. ಬಿಹಾರ ಕಾಂಗ್ರೆಸ್​ ನಾಯಕರಿಗೂ ಸಮಸ್ಯೆ ಬಗೆಹರಿಸಲು ಒಂದು ತೀರ್ಮಾನಕ್ಕೆ ಬನ್ನ ಅಂತಾ ಕೇಳಿಕೊಂಡಿದ್ದೆ ಆದರೆ ಯಾವುದೂ ಸಫಲವಾಗಲಿಲ್ಲ.

ಮಹಾಮೈತ್ರಿ ಉಳಿಸಿಕೊಳ್ಳಲು ನಾನು ಸಾಕಷ್ಟು ಪ್ರಯತ್ನ ನಡೆಸಿದ್ದೇನೆ, ಅಂತಿಮವಾಗಿ ರಾಜೀನಾಮೆ ನೀಡೋದು ಬಿಟ್ಟು ಬೇರೆ ಆಯ್ಕೆಗಳು ನನ್ನ ಬಳಿ ಇರಲಿಲ್ಲ ಎಂದು ನಿತೀಶ್​ ಕುಮಾರ್​ ತಾವು ರಾಜೀನಾಮೆ ನೀಡಿದ್ದಕ್ಕೆ ಕಾರಣಗಳನ್ನು ನೀಡಿದರು.

ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾನು ನಿತೀಶ್​ ಕುಮಾರ್​ ಅವರನ್ನು ಅಭಿನಂದಿಸುತ್ತೇನೆ. ನಿಮ್ಮ ತೀರ್ಮಾನವನ್ನು ದೇಶದ 125 ಕೋಟಿ ಜನರು ಸ್ವಾಗತಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ನಿತೀಶ್​ ಕುಮಾರ್​ಗೆ ಬೆಂಬಲ ಸೂಚಿಸಿದ್ದಾರೆ.

(ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top