Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಹೆದ್ದಾರಿಗಳಲ್ಲಿ ವಾಹನಗಳಿಗಿನ್ನು ಆವೇಗ

Monday, 16.04.2018, 7:38 PM       No Comments

<< ವೇಗದ ಮಿತಿ ತಾಸಿಗೆ ಸರಾಸರಿ 20 ಕಿ.ಮೀ. ಹೆಚ್ಚಿಸಿದ ಸರ್ಕಾರ >>

ನವದೆಹಲಿ: ಎಕ್ಸ್​ಪ್ರೆಸ್ ವೇ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿಯನ್ನು ತಾಸಿಗೆ ಸರಾಸರಿ 20 ಕಿ.ಮೀ.ಗೆ ಸರ್ಕಾರ ಹೆಚ್ಚಿಸಿದೆ. ಎಕ್ಸ್​ಪ್ರೆಸ್ ವೇಗಳಲ್ಲಿ ಸ್ವಂತ ಕಾರಿನಲ್ಲಿ ಸಂಚರಿಸುವವರಿಗೆ ಇದ್ದ ತಾಸಿಗೆ 100 ಕಿ.ಮೀ. ವೇಗದ ಮಿತಿಯು ಈಗ 120 ಕಿ.ಮೀ. ಏರಿಕೆ ಆಗಿದೆ. ಟ್ಯಾಕ್ಸಿ/ಕ್ಯಾಬ್​ಗಳಿಗೆ ಇದ್ದ ಗಂಟೆಗೆ 80 ಕಿ.ಮೀ. ವೇಗದ ನಿರ್ಬಂಧವನ್ನು 100 ಕಿ.ಮೀ.ಗೆ ಹೆಚ್ಚಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರಿನ ವೇಗದ ಮಿತಿ ತಾಸಿಗೆ 90 ಕಿ.ಮೀ.ನಿಂದ 100 ಕಿ.ಮೀ.ಗೆ ಏರಿಕೆಯಾಗಿದ್ದರೆ, ಟ್ಯಾಕ್ಸಿ/ಕ್ಯಾಬ್​ಗಳ ವೇಗದ ಮಿತಿಯು 20 ಕಿ.ಮೀ. ಏರಿಕೆಯಾಗುವ ಮೂಲಕ ಗಂಟೆಗೆ 100 ಕಿ.ಮೀ. ವೇಗಕ್ಕೆ ನಿಗದಿಗೊಂಡಿದೆ. ದ್ವಿಚಕ್ರ ಮೋಟಾರ್ ವಾಹನಗಳು ಮತ್ತು ವಾಣಿಜ್ಯ ಬಳಕೆಯ ವಾಹನಗಳ ವೇಗದ ಮಿತಿಯು ತಾಸಿಗೆ 80 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಇನ್ನು ನಗರ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಕಾರು, ಟ್ಯಾಕ್ಸಿ/ಕ್ಯಾಬ್​ಗಳಿಗೆ ತಾಸಿಗೆ 70 ಕಿ.ಮೀ. ಮಿತಿಯನ್ನು ಮತ್ತು ದ್ವಿಚಕ್ರ ಮೋಟಾರು ವಾಹನಗಳಿಗೆ 60 ಕಿ.ಮೀ. ಮಿತಿಯನ್ನು ನಿಗದಿ ಮಾಡಲಾಗಿದೆ.

ಈ ವೇಗದ ಮಿತಿಯು ಎಕ್ಸ್​ಪ್ರೆಸ್ ವೇ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುತಿಸಲಾದ ಕೆಲವು ಮಾರ್ಗಗಳಿಗೆ (ಸ್ಟ್ರೆಚ್) ಮಾತ್ರ ಅನ್ವಯವಾಗಲಿದ್ದು, ಉಳಿದ ಭಾಗಗಳಲ್ಲಿ ಮೊದಲಿನಂತೆಯೇ ವೇಗದ ಮಿತಿ ಜಾರಿಯಲ್ಲಿರಲಿದೆ. ಹಾಗೆಯೇ ಏರಿಕೆ ಮಾಡಲಾಗಿರುವ ವೇಗದ ಮಿತಿಯು ರಾಷ್ಟ್ರೀಯ ಹೆದ್ದಾರಿ ಅಥವಾ ಎಕ್ಸ್​ಪ್ರೆಸ್ ವೇ ಹಾದುಹೋಗುವ ಮಾರ್ಗಮಧ್ಯದ ಹಳ್ಳಿ, ಪಟ್ಟಣಗಳ ಪರಿಮಿತಿಯಲ್ಲಿ ಅನ್ವಯವಾಗುವುದಿಲ್ಲ. ಈ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ಗುರುತಿಸಿದ ವೇಗದ ಮಿತಿ ಮಾನದಂಡವು ಜಾರಿಯಲ್ಲಿರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೈ ವೇ ಸಚಿವಾಲಯ ಏಪ್ರಿಲ್ 6ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ. –ಏಜೆನ್ಸೀಸ್

Leave a Reply

Your email address will not be published. Required fields are marked *

Back To Top