Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News

ತುಮಕೂರಿನಲ್ಲಿ ಇದ್ದಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ರೆಡ್‌ಮಿ ಮೊಬೈಲ್

Thursday, 12.10.2017, 11:57 AM       No Comments

ತುಮಕೂರು: ಮೊಬೈಲ್​ ಜಗತ್ತಿನಲ್ಲಿ ಆಪತ್ತುಗಳು ಸಾಲು ಸಾಲು ಎದುರಾಗುತ್ತಿವೆ. ಯಾವ ಸಂಧರ್ಭದಲ್ಲಿ ಏನಾಗುತ್ತದೋ ಎಂದು ಹೇಳುವುದೇ ಕಷ್ಟವಾಗಿದೆ. ಇಂದಿನ ದಿನದಲ್ಲಿ ಮೊಬೈಲ್​ ಅನ್ನು ಜೇಬಿನಲ್ಲಿಟ್ಟುಕೊಳ್ಳುವುದು ಸಾವನ್ನು ಜೊತೆಗಿಟ್ಟುಕೊಂಡು ಓಡಾಡಿದಂತಾಗಿದೆ.

ವಿಡಿಯೋ ನೋಡಿ: ಹೊಸ ರೆಡ್‌ಮಿ ಮೊಬೈಲ್ ಇದ್ದಕಿದ್ದಂತೆ ಬ್ಲಾಸ್ಟ್..!

ಮೊಬೈಲ್​ ಸ್ಫೋಟಗೊಂಡು ಸಾವಿನ್ನಪ್ಪಿರುವ ಪ್ರಕರಣಗಳನ್ನು ದಿನ ನಿತ್ಯ ಕೇಳ್ತಾನೇ ಇದೀವಿ… ಇದೀಗ ತುಮಕೂರಿನಲ್ಲಿ ಹೊಸದಾಗಿ ಕೊಂಡುಕೊಂಡ ರೆಡ್​ಮಿ ಮೊಬೈಲ್​ ಸ್ಪೋಟಗೊಂಡಿರುವ ಘಟನೆ ಗುರುವಾರ ನಡೆದಿದೆ.

ಮೊಬೈಲ್‌ಗೆ ಸ್ಕ್ರೀನ್ ಗಾರ್ಡ್ ಹಾಕಲು ಬ್ಯಾಟರಿ ತೆಗೆದ ತಕ್ಷಣ ಮೊಬೈಲ್​ ಬ್ಲಾಸ್ಟ್​ ಆಗಿದೆ. ತುಮಕೂರಿನ ಪ್ರದೀಪ್ ಎಂಬುವರ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಬ್ಲಾಸ್ಟ್ ಆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top