Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ನಿರೀಕ್ಷಿಸಿ ಬಂಪರ್ ಬಜೆಟ್!

Tuesday, 09.01.2018, 3:06 AM       No Comments

ಲೋಕಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಂತೆಯೇ ಜನಮನ ಗೆಲ್ಲುವ ಹೊಸ ಹೊಸ ತಂತ್ರಗಾರಿಕೆ ಹೆಣೆಯುತ್ತಿರುವ ಕೇಂದ್ರ ಸರ್ಕಾರವೀಗ ‘ಜನಪ್ರಿಯ ಬಜೆಟ್’ ಅಸ್ತ್ರಪ್ರಯೋಗಕ್ಕೆ ಸಜ್ಜಾಗಿದೆ. ಈ ಆಡಳಿತಾವಧಿಯಲ್ಲಿ ಇದು ಮೋದಿ ಆಡಳಿತಕ್ಕೆ ಸಿಗುವ ಕೊನೆಯ ಪೂರ್ಣ ಪ್ರಮಾಣದ ಮುಂಗಡಪತ್ರವಾದ್ದರಿಂದ ದೇಶದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಬಿಂದಿಗೆಯಲ್ಲಿ ಭರವಸೆ ತುಂಬಲಾಗುತ್ತಿದೆ. ತೆರಿಗೆ ವಿನಾಯಿತಿ ಮಿತಿ ಹೆಚ್ಚಳ, ಆರೋಗ್ಯ ವಿಮೆ ಸೌಲಭ್ಯ ವಿಸ್ತರಣೆ, ಠೇವಣಿ, ಹೂಡಿಕೆಗಳ ಮೇಲೆ ಹೊಸ ಕೊಡುಗೆಗಳ ಘೋಷಣೆ ಸಾಧ್ಯತೆ ಗೋಚರಿಸಿದೆ. ಒಟ್ಟಾರೆ ಕೇಂದ್ರ ಬಜೆಟ್​ನಲ್ಲಿರಬಹುದಾದ ಸಾಧ್ಯಾಸಾಧ್ಯತೆಗಳ ಕುರಿತಂತೆ ಸರ್ಕಾರದ ಮಟ್ಟದಲ್ಲಿ ನಡೆದಿರುವ ಚಿಂತನ-ಮಂಥನಗಳ ಕುರಿತ ಸಮಗ್ರ ನೋಟ ಇಲ್ಲಿದೆ.

ತೆರಿಗೆ ಮೇಲೆ ನಿರೀಕ್ಷೆ ಹೆಚ್ಚು

ಆರ್ಥಿಕ ಹೊರೆ ಎಷ್ಟಾದರೂ ಮುಂಗಡಪತ್ರದಲ್ಲಿ ಒಂದಷ್ಟು ಉಡುಗೊರೆ ಘೋಷಿಸುವ ವಿಷಯ ತೀವ್ರ ಚರ್ಚೆಗೊಳಗಾಗಿದೆ. ಈ ಪೈಕಿ, ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಾಡುವುದು ಒಂದಾದರೆ, ಕಡಿತಗೊಂಡ ತೆರಿಗೆಯಲ್ಲಿ ನಿಗದಿತ ಮೊತ್ತವನ್ನು ಬೇರೆ ಬೇರೆ ರೀತಿ ತೆರಿಗೆದಾರರಿಗೆ ಹಿಂತಿರುಗಿಸುವುದು ಮತ್ತೊಂದು ಚಿಂತನೆಯಾಗಿದೆ.

ಷೇರು ವಹಿವಾಟಿಗೆ ಹೊಸ ತೆರಿಗೆ?

ಸದ್ಯದ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗಕ್ಕೆ ಕೊಡುಗೆ ಘೋಷಿಸಬೇಕಾದರೆ, ಇನ್ನೊಂದೆಡೆ ಅದಕ್ಕೆ ಪರ್ಯಾಯವಾಗಿ ಸಂಪನ್ಮೂಲ ಕ್ರೋಡೀಕರಿಸಬೇಕು. ಈ ನಿಟ್ಟಿನಲ್ಲಿ ಬಹಳ ಹಿಂದೆ ಚಾಲ್ತಿಯಲ್ಲಿದ್ದ ಷೇರು ವಹಿವಾಟಿನ ದೀರ್ಘಾವಧಿ ಕ್ಯಾಪಿಟಲ್ ಗೇನ್ ತೆರಿಗೆ ಪುನಃ ಚಾಲ್ತಿಗೆ ತರಬಹುದು. ಇದು, ನಿಗದಿತ ವಹಿವಾಟು ಮಿತಿಗಿಂತ ಮೇಲ್ಪಟ್ಟ (ಉದಾಹರಣೆಗೆ 5ಲಕ್ಷ ರೂ.) ವಹಿವಾಟಿನ ಮೇಲೆ ಶೇಕಡ 10 ವಿಧಿಸುವ ಸಾಧ್ಯತೆ ಇದೆ. ಸರ್ಕಾರ ಒಂದೊಮ್ಮೆ ಈ ನಿರ್ಧಾರ ತೆಗೆದುಕೊಂಡರೆ, 5,000 ಹೂಡಿಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು. ಆದರೆ, 5 ಕೋಟಿ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ. ನವೆಂಬರ್​ನಲ್ಲಿ ನಡೆದ ಸಭೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್(ಬಿಎಸ್​ಇ)ಗೆ ಈ ವಿಷಯವನ್ನು ಸಚಿವಾಲಯ ಸೂಕ್ಷ್ಮವಾಗಿ ತಿಳಿಸಿತ್ತು ಎಂದು ಮೂಲಗಳು ತಿಳಿಸಿವೆ.

ವಿಮೆ, ಠೇವಣಿ ಕೊಡುಗೆ

ಇತ್ತೀಚೆಗೆ ಮ್ಯೂಚುವಲ್ ಫಂಡ್, ಷೇರುಪೇಟೆ ವಹಿವಾಟಿಗೆ ಹೆಚ್ಚುವರಿ ಉತ್ತೇಜನ ಘೋಷಿಸಿದ ಕಾರಣ ಹೂಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ, ಆಕರ್ಷಣೆ ಕಳೆದುಕೊಂಡಿರುವ ಬ್ಯಾಂಕುಗಳ ನಿಶ್ಚಿತ ಠೇವಣಿ ಮೇಲೆ ಹೆಚ್ಚುವರಿ ಕೊಡುಗೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಭಾವ್ಯ ಅನುಕೂಲ

# ತೆರಿಗೆ ಕಡಿತದ ಪಾಲು ಹಿಂತಿರುಗಿಸುವ ಸಾಧ್ಯತೆ

# ತೆರಿಗೆ ವಿನಾಯಿತಿ ಪ್ರಮಾಣ ಗರಿಷ್ಠ ಮಿತಿ -ಠಿ; 2.5 ಲಕ್ಷ ಮೀರುವ ಸಾಧ್ಯತೆ

# ಆರೋಗ್ಯ ವಿಮೆ ಮೇಲಿನ ಪ್ರಯೋಜನಗಳ ಹೆಚ್ಚಳ

# ನಿಶ್ಚಿತ ಠೇವಣಿ, ಹೂಡಿಕೆಗಳ ಮೇಲೆ ಇನ್ನಷ್ಟು ಕೊಡುಗೆ ಘೋಷಿಸುವ ನಿರೀಕ್ಷೆ

ಬಜೆಟ್ ನಿರೀಕ್ಷೆ ಯಾಕೆ?

# ಇನ್ನು ಒಂದೂವರೆ ವರ್ಷದ ಅವಧಿಯಲ್ಲಿ ಲೋಕಸಭೆ ಮತ್ತು ಎಂಟು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ತನ್ನ ಅಜೆಂಡಾದಂತೆ ಅಭಿವೃದ್ಧಿ ಪಥದಲ್ಲಿ ದೇಶವನ್ನು ಕೊಂಡೊಯ್ಯಬೇಕಾದರೆ ಜನರ ಮನಗೆದ್ದು, ಚುನಾವಣೆ ಗೆಲ್ಲಬೇಕಾದ ಅನಿವಾರ್ಯತೆ ಮೋದಿ ಸರ್ಕಾರದ ಮುಂದಿದೆ.

# ಗುಜರಾತ್ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ತಂದುಕೊಡುವಲ್ಲಿ ವಿಫಲವಾದ ಕೃಷಿ ಆದಾಯ ಹೆಚ್ಚಳ ಮತ್ತು ನಿರುದ್ಯೋಗ ನಿವಾರಣೆ ವಿಷಯಗಳ ಕಡೆಗೆ ಮೋದಿ ಸರ್ಕಾರ ಈಗ ಹೆಚ್ಚಿನ ಗಮನಹರಿಸಿದೆ. ಅಲ್ಲದೆ, ಸೆಪ್ಟೆಂಬರ್​ನಲ್ಲಿ ಕೊನೆಗೊಂಡ ತ್ರೖೆಮಾಸಿಕ ಕೃಷಿ ಬೆಳವಣಿಗೆ ದರ ಶೇಕಡ 1.7ಕ್ಕೆ ಕುಸಿದಿರುವುದು ಕಳವಳಕ್ಕೆ ಕಾರಣ.

# ಕೃಷಿ ಮತ್ತು ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟ ಜನಪ್ರಿಯ ಬಜೆಟನ್ನು ಈ ಸಲ ನಿರೀಕ್ಷಿಸಬಹುದು. ಮುಖ್ಯವಾಗಿ ಗ್ರಾಮೀಣ ಮೂಲಸೌಕರ್ಯ, ಉದ್ಯೋಗದ ಕಡೆಗೆ ಒತ್ತುಕೊಟ್ಟು ಸರ್ಕಾರ ಮುಂಗಡಪತ್ರವನ್ನು ಸಿದ್ಧಪಡಿಸುತ್ತಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

# ಇನ್ನಷ್ಟು ತೆರಿಗೆ ಸುಧಾರಣೆ ಕ್ರಮ ನಿರೀಕ್ಷಿಸಲಾಗುತ್ತಿದೆ. ಕಾರ್ಪೆರೇಟ್ ವಲಯದ ಬೇಡಿಕೆಗೆ ಅನುಗುಣವಾಗಿ ತೆರಿಗೆ ದರ ಇಳಿಸುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಜುಲೈನಲ್ಲಿ ಜಿಎಸ್​ಟಿ ಜಾರಿಗೊಳಿಸಿದ ಬಳಿಕ ಆದಾಯ ಸಂಗ್ರಹದಲ್ಲಿ ಕಂಡು ಬಂದ ಕೊರತೆ ನೀಗಿಸುವುದಕ್ಕಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ ಮೂಲಕ ಪ್ರಯತ್ನಿಸುವುದು.

Leave a Reply

Your email address will not be published. Required fields are marked *

Back To Top