Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

2018ಕ್ಕೆ ಸಂಭವಿಸಲಿದೆ ಭಾರಿ ಭೂಕಂಪ: ನಾಸಾ ವಿಜ್ಞಾನಿಗಳಿಂದ ಎಚ್ಚರಿಕೆ…!

Tuesday, 21.11.2017, 7:30 AM       No Comments

ನವದೆಹಲಿ: ಅದೇನೋ ಗೊತ್ತಿಲ್ಲ, ಡಿಸೆಂಬರ್​ ಹತ್ತಿರವಾಗ್ತಿದಂತೆ ಪ್ರಪಂಚ ಪ್ರಳಯ ಆಗುತ್ತೆ ಅನ್ನೋ ಸುದ್ದಿ ಹರಿದಾಡೋಕೆ ಶುರುವಾಗುತ್ತೆ. ಯಾಕಂದ್ರೆ 2012ರ ಡಿಸೆಂಬರ್​ನಲ್ಲೂ ಪ್ರಳಯದ ಸುದ್ದಿ ಆತಂಕ ಉಂಟು ಮಾಡಿತ್ತು. ಇದೀಗ ಮತ್ತೆ ಪ್ರಳಯದ ಸುದ್ದಿ ಗುಲ್ಲೆಬ್ಬಿದ್ದು, ಮುಂದಿನ ವರ್ಷದ ಡಿಸೆಂಬರ್​ನಲ್ಲಿ ಜಗತ್ತು ನಾಶವಾಗುತ್ತದೆ ಅಂತಾ ಕೆಲವು ಜ್ಯೋತಿಷಿಗಳು ಹೇಳಿದ್ರು. ಇದಕ್ಕೆ ಪುಷ್ಠಿ ನೀಡುವಂತೆ ನಾಸಾ ವಿಜ್ಞಾನಿಗಳು ಸಹ ಪ್ರಳಯದ ಬಗ್ಗೆ ಮಾತನಾಡಿದ್ದಾರೆ.

ಮುಂದಿನ ವರ್ಷ ಜಗತ್ತಿಗೆ ಭಾರಿ ಕಂಟಕ ಎದುರಾಗಲಿದೆ. 2018ರಲ್ಲಿ ಜಗತ್ತಿನಾದ್ಯಂತ ವಿನಾಶಕಾರಿ ಭೂಕಂಪ ಸಂಭವಿಸಲಿದೆ. ಹೀಗಂತಾ ನಾಸಾದ ಇಬ್ಬರು ವಿಜ್ಞಾನಿಗಳು ಭವಿಷ್ಯ ನುಡಿದ್ದಾರೆ. ಅಮೆರಿಕದ ಸಂಶೋಧಕ ರೋಜರ್​​ ಬಿಲ್​​ಹ್ಯಾಮ್ ಈ ಅಧ್ಯಯನ ಮಾಡಿದ್ದು, ಈ ಆಘಾತಕಾರಿ ಮಾಹಿತಿ ಹೊರಹಾಕಿದ್ದು, ವಿಶ್ವವೇ ಸರ್ವನಾಶವಾಗಲಿದೆಂದು ಹೇಳಿದ್ದಾರೆ.

ವಿಜ್ಞಾನಿಗಳು ಹೇಳಿದ್ದೇನು..?
# ಭೂಮಿಯ ತಿರುಗುವಿಕೆಯಲ್ಲಿ ಏರಿಳಿತದಿಂದಾಗಿ ಭೂಕಂಪ ಸಂಭವ
# ಈ ಹಿಂದೆಯೂ ಭೂಮಿಯ ತಿರುಗುವಿಕೆ ವೇಗ ಕಡಿಮೆಯಾದಾಗ ಭೂಕಂಪವಾಗಿತ್ತು
# ಅತೀ ಹೆಚ್ಚು ಜನಸಂಖ್ಯೆಯಿರೋ ಉಷ್ಣ ವಲಯ ಪ್ರದೇಶಗಳಲ್ಲಿ ಭೂಕಂಪನ
# ಜಗತ್ತಿನ ವಿವಿಧ ಭಾಗಗಳಲ್ಲಿ ತೀವ್ರ ಭೂಕಂಪನ ಸಂಭವಿಸಲಿದೆ
– ಭಾರತದಲ್ಲೂ ಸಂಭವಿಸಲಿದ್ಯಂತೆ ಭಾರಿ ಭೂಕಂಪ..!
# ನಾಸಾ ವಿಜ್ಞಾನಿ ರೋಜರ್​ ಬಿಲ್​ಹ್ಯಾಮ್​ರಿಂದ ಆಘಾತಕಾರಿ ವಿಚಾರ ಬಹಿರಂಗ
# ಇರಾನ್​, ಇರಾಕ್​ ಭೂಕಂಪದ ಬೆನ್ನಲ್ಲೆ ಬಿಲ್​ಹ್ಯಾಮ್​ರಿಂದ ಮಾಹಿತಿ

ಭೂಕಂಪಕ್ಕೆ ಕಾರಣವೇನು..?
ಭೂಮಿ ತಿರುಗುವಿಕೆಯಲ್ಲಿ ಏರಿಳಿತವಾಗಿರೋ ಕಾರಣ ಭೂಕಂಪ ಸಂಭವಿಸಲಿದೆ ಅಂತಾ ಅಮೆರಿಕದ ಸಂಶೋಧಕ ರೋಜರ್​​ ಬಿಲ್​​ಹ್ಯಾಮ್​​ ಹೇಳಿದ್ದಾರೆ. ಈ ಹಿಂದೆ ಭೂಮಿ ಪರಿಭ್ರಮಣೆ ವೇಗ ಕಡಿಮೆ ಆದಾಗಲೆಲ್ಲ ಹಲವೆಡೆ ಭೂಕಂಪ ಸಂಭವಿಸಿತ್ತು. ಅತೀ ಹೆಚ್ಚು ಜನಸಂಖ್ಯೆಯಿರೋ ಉಷ್ಣ ವಲಯ ಪ್ರದೇಶಗಳಲ್ಲಿ ಭೂಕಂಪನ ಆಗಲಿದೆಂದು ಶಕುನ ನುಡಿದಿದ್ದಾರೆ.

ಇನ್ನು, ಹಿಮಾಲಯ ಕುರಿತು ಸಂಶೋಧಿಸ್ತಿರೊ ಭೂ ವಿಜ್ಞಾನಿಗಳು ಭಾರತದಲ್ಲೂ ಭೂಕಂಪ ಸಾಧ್ಯತೆ ಬಗ್ಗೆ ಎಚ್ಚರಿಕೆ ಕೊಟ್ಟಿದ್ದು, ಕೆಲ ದಿನಗಳ ಹಿಂದೆಯಷ್ಟೆ ಇರಾನ್​ -ಇರಾಕ್​​ನಲ್ಲಿ ಸಂಭವಿಸಿದ ಭೂಕಂಪಕ್ಕೆ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ರು. ಇದರ ಬೆನ್ನಲ್ಲೆ ಈ ವರದಿ ಬಂದಿರೋದು ಜನರನ್ನ ಮತ್ತಷ್ಟು ಆತಂಕಕ್ಕೆ ದೂಡಿದೆ.

ಇನ್ನು, ಕೆಲದಿನಗಳ ಹಿಂದಷ್ಟೇ ಕೇರಳ ಮೂಲದ ನಾಸಾ ವಿಜ್ಞಾನಿ ಬಾಬು ಕಲಾಯಿ ಕೂಡ ಇದೇ ಆತಂಕ ವ್ಯಕ್ತಪಡಿಸಿದ್ರು. ಅಲ್ಲದೇ ಅಕ್ಟೋಬರ್​ನಲ್ಲಿ ಅಮೆರಿಕದಲ್ಲಿ ನಡೆದಿದ್ದ ಭೂವೈಜ್ಞಾನಿಕ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಈ ಆತಂಕದ ಸುದ್ದಿಯನ್ನು ಹೊರ ಹಾಕಿದ್ರು.

20ನೇ ಶತಮಾನದ ಆರಂಭದಿಂದ ಸಂಭವಿಸಿದ ಏಳು ಅಥವಾ ಅದಕ್ಕಿಂತ ಹೆಚ್ಚು ತೀವ್ರತೆಯ ಎಲ್ಲಾ ಭೂಕಂಪಗಳ ಬಗ್ಗೆ ಅಧ್ಯಯನ ನಡೆಸಿ ಈ ಭವಿಷ್ಯ ನುಡಿದಿದ್ದು, ಇವರ ಪ್ರಕಾರ 2018ರಲ್ಲಿ 20ಕ್ಕೂ ಹೆಚ್ಚು ಭಾರಿ ಭೂಕಂಪಗಳು ಸಂಭವಿಸಲಿವೆ ಎಂದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top