Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ-ಉಪಚುನಾವಣೆ ಹೊತ್ತಲ್ಲಿ ಬೇಕಿತ್ತಾ ಇದೆಲ್ಲಾ..?        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಕೆ ಕುರಿತು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕನ ನೇಮಕ        ಅಮೆರಿಕಾ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ತಟ್ಟಲಿದೆ ಭಾರಿ ಬಿಸಿ        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಕಲೆಕ್ಷನ್​-ಸ್ಯಾಂಡಲ್​​​ವುಡ್​​​​ನ ದಾಖಲೆಗಳೆಲ್ಲ ಪೀಸ್​ ಪೀಸ್​​       
Breaking News

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಪ್ರಧಾನಿ ಮೋದಿಗೆ ಕರೆ ಮಾಡಿದ್ಯಾಕೆ?

Friday, 09.02.2018, 9:58 AM       No Comments

ನವದೆಹಲಿ: ಮಾಲ್ಡೀವ್ಸ್​ ಬಿಕ್ಕಟ್ಟು ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮೂಲಕ ಪರಸ್ಪರ ಚರ್ಚೆ ನಡೆಸಿರುವುದಾಗಿ ಶುಕ್ರವಾರ ವರದಿಯಾಗಿದೆ.

ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ, ಉತ್ತರ ಕೊರಿಯಾ ಪರಮಾಣು ಬೆದರಿಕೆ, ಮ್ಯಾನ್ಮಾರ್ ನಿರಾಶ್ರಿತರು ಹಾಗೂ ಇಂಡೋ – ಫೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

ಉಭಯ ನಾಯಕರು ಮಾಲ್ಡೀವ್ಸ್​ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿ, ಪ್ರಜಾಪ್ರಭುತ್ವ ಸಂಸ್ಥೆ ಹಾಗೂ ಕಾನೂನಿನ ನಿಯಮಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ ಎಂದು ವೈಟ್​ಹೌಸ್​ ಆಡಳಿತ ಮೂಲ ತಿಳಿಸಿದೆ.

ಮಾಲ್ಡೀವ್ಸ್​ ಬಿಕ್ಕಟ್ಟೇನು?
ರಾಜಕೀಯ ಕೈದಿಗಳನ್ನ ಬಿಡುಗಡೆಗೊಳಿಸಿ, ಅವರ ಮೇಲಿನ ಪ್ರಕರಣಗಳ ಮರುವಿಚಾರಣೆಗೆ ಒಳಪಡಿಸಬೇಕೆಂದು ಫೆ. 1 ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸಲು ಮಾಲ್ಡೀವ್ಸ್​ ಸರ್ಕಾರ ನಿರಾಕರಿಸಿತ್ತು. ಹೀಗಾಗಿ ತೀವ್ರಗೊಳ್ಳುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಅಧ್ಯಕ್ಷ ಅಬ್ದುಲ್ಲಾ ಯಮೀನ್ 15 ದಿನಗಳ ತುರ್ತು ಪರಿಸ್ಥಿತಿ ಘೋಷಿಸಿದ್ದರು.

ಇದರಿಂದ ಭದ್ರತಾ ಪಡೆಗಳಿಗೆ ಅನುಮಾನಾಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆಯುವ ಅಧಿಕಾರ ದೊರೆತಂತಾಗಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೌಮುನ್ ಅಬ್ದುಲ್ ಗಯೂಮ್ ರನ್ನ ಬಂಧಿಸಿದ್ದರು. ಅಲ್ಲದೆ, ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಾಧೀಶ ಅಬ್ದುಲ್ ಸಯೀದ್ ಹಾಗೂ ನ್ಯಾಯಾಧೀಶ ಅಲಿ ಅಮೀದ್ ರನ್ನ ಕೂಡ ಬಂಧಿಸಿದ್ದರು.

ಸದ್ದಿವಾಹಿನಿಗಳಿಗೆ ಬೆದರಿಕೆ
ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಮಾಲ್ಡೀವ್ಸ್​ ಸರ್ಕಾರ ಸುದ್ದಿವಾಹಿನಿಗಳ ಮೇಲೆ ನಿಯಂತ್ರಣ ಹೇರಿದೆ. ಇಲ್ಲಿನ ಸುದ್ದಿವಾಹಿನಿ ರಾಜೆ ಟಿವಿಯನ್ನು ರದ್ದು ಮಾಡುವಂತೆ ಒತ್ತಡ ಹೇರಿ ಭದ್ರತಾ ಸಿಬ್ಬಂದಿ ಬೆದರಿಕೆ ಹಾಕಿದೆ. ರಾಷ್ಟ್ರೀಯ ರಕ್ಷಣೆಗೆ ಧಕ್ಕೆಯಾಗುವಂತಹ ಸುದ್ದಿಗಳನ್ನು ಬಿತ್ತರಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮಾಲ್ಡೀವ್ಸ್​ನ ರಕ್ಷಣಾ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top