Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಅಪಾಯದ ಮಟ್ಟ ಮೀರಿದ ಕಪಿಲೆ

Friday, 10.08.2018, 5:56 AM       No Comments

ನಂಜನಗೂಡು: ಕಬಿನಿ ಜಲಾಯಶದಿಂದ ಕಪಿಲಾ ನದಿಗೆ ಗುರುವಾರ 75 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಹೊರಹರಿವು ಹೆಚ್ಚಿಸಿದ ಪರಿಣಾಮ ನದಿ ಪಾತ್ರದ ನಿವಾಸಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಗಂಜಿ ಕೇಂದ್ರ ತೆರೆದು ಅಗತ್ಯ ಕ್ರಮ ಕೈಗೊಂಡಿದೆ.
ನದಿ ಪಾತ್ರದಲ್ಲಿ ಠಿಕಾಣಿ ಹೂಡಿದ್ದ ಮೀನುಗಾರರನ್ನು ಸ್ಥಳಾಂತರಿಸುವಂತೆ ರಾಜಸ್ವ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಮುಳುಗಡೆ ಪ್ರದೇಶವಾಗಿರುವ ಕುಳ್ಳಂಕಯ್ಯನಹುಂಡಿ, ಹಳ್ಳದಕೇರಿ, ತೋಪಿನ ಬೀದಿ ಸೇರಿದಂತೆ ಇತರ ಸಂತ್ರಸ್ಥರ ನೆರವಿಗಾಗಿ ಗಂಜಿ ಕೇಂದ್ರ ತೆರೆಯಲಾಗಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಎಂದು ತಹಸೀಲ್ದಾರ್ ಎಂ.ದಯಾನಂದ್ ತಿಳಿಸಿದ್ದಾರೆ.
ಕೃಷಿ ಚಟುವಟಿಕೆ ಸ್ಥಗಿತ:
ನದಿಯ ಪ್ರವಾಹದಿಂದಾಗಿ ತಾಲೂಕಿನ ಮುಳ್ಳೂರು, ನಗರ್ಲೆ, ಸರಗೂರು, ಸುತ್ತೂರು, ಕುಪ್ಪರವಳ್ಳಿ, ಬಿಳುಗಲಿ ಸೇರಿದಂತೆ ನಾನಾ ಕಡೆ ನದಿ ಪಾತ್ರದ ಜಮೀನುಗಳು ಜಲಾವೃತಗೊಂಡು ರೈತರು ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.
ಜೂನ್, ಜುಲೈ ತಿಂಗಳಲ್ಲಿ ಕಟಾವು ಹಂತದಲ್ಲಿದ್ದ ಭತ್ತದ ಫಸಲು ಮುಳುಗಡೆಗೊಂಡು ಸಂಕಷ್ಟಕ್ಕೀಡಾಗಿದ್ದ ರೈತರು, ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಿದ್ದರಿಂದ ಭತ್ತ, ರಾಗಿ ತಾಕು(ಒಟ್ಲು) ಬೆಳೆದು ನಾಟಿಗೆ ಕಾರ್ಯಕ್ಕೆ ಮುಂದಾಗಿದ್ದರು. ಇದೀಗ ಮಗದೊಮ್ಮೆ ಮೈದುಂಬಿ ಹರಿಯುತ್ತಿರುವ ಕಪಿಲೆಯ ಪ್ರವಾಹಕ್ಕೆ ಜಮೀನುಗಳು ಮುಳುಗಡೆಗೊಂಡು ರೈತರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
ಮನೆಗಳಿಗೆ ನುಗ್ಗಿದ ನೀರು:
ಕಪಿಲಾ ನದಿಯ ಹಿನ್ನೀರಿನ ಗುಂಡ್ಲು ನದಿಯೂ ಉಕ್ಕಿ ಹರಿಯುತ್ತಿದ್ದು ಹಳ್ಳದಕೇರಿ ಬಡಾವಣೆಯ ಮಂಜುನಾಥ್, ಶಿವಣ್ಣ, ನಾಗೇಶ್ ಹಾಗೂ ರಮೇಶ್ ಕುಟುಂಬದವರು ವಾಸಿಸುವ ಮನೆಯ ಮುಂದೆ ನದಿ ನೀರು ಚಾಚಿಕೊಂಡು ನಿಂತಿದೆ. ರಾತ್ರೋರಾತ್ರಿ ಪ್ರವಾಹ ಹೆಚ್ಚಾದರೆ ಈ ನಾಲ್ಕು ಮನೆಗಳು ಮುಳುಗಡೆಯಾಗುವ ಸಂಭವವಿದೆ. ಇನ್ನೂ ತೋಪಿನ ಬೀದಿಯ ಕೆಲ ಮನೆಗಳಿಗೆ ನೀರು ನುಗ್ಗಿದೆ.
ನದಿಯ ತಗ್ಗು ಪ್ರದೇಶದಲ್ಲಿರುವ ಕುಳ್ಳಂಕಯ್ಯನಹುಂಡಿ ಗ್ರಾಮದ ಮನೆಗಳ ಸಮೀಪದಲ್ಲೇ ನದಿ ನೀರು ನಿಂತಿದೆ. ಪ್ರವಾಹದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡರೂ ಮನೆಗಳು ಮುಳುಗಡೆಯಾಗುವ ಆತಂಕ ತಂದೊಡ್ಡಿದೆ. ಇನ್ನು ಹೆಜ್ಜಿಗೆ ಗ್ರಾಮದ ತುಸು ಎತ್ತರದ ಪ್ರದೇಶದಲ್ಲೇ ಇದ್ದರೂ ಈಗಾಗಲೇ ಮನೆಗಳ ಹತ್ತಿರವೇ ನೀರು ಹರಿಯುತ್ತಿದೆ.
ಗುಂಡ್ಲು ನದಿಯ ಪ್ರವಾಹಕ್ಕೆ ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ಗೋಳೂರು, ಆಲಂಬೂರು, ಗಾಂಧಿನಗರ, ದೇಬೂರು, ಕಣೇನೂರು ಗ್ರಾಮದ ಸಮೀಪವಿರುವ ನೀರೆತ್ತುವ ಘಟಕಗಳು ಜಲಾವೃತಗೊಂಡಿವೆ.

Leave a Reply

Your email address will not be published. Required fields are marked *

Back To Top