Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ನಲಪಾಡ್​ಗೆ ಷರತ್ತು ಬದ್ಧ ಜಾಮೀನು ಮಂಜೂರು

Thursday, 14.06.2018, 10:46 AM       No Comments

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ಗೆ ಹೈಕೋರ್ಟ್​ ಗುರುವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣದ ಕುರಿತು ನಿನ್ನೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ಅಂತಿಮ ತೀರ್ಪು ಕಾಯ್ದಿರಿಸಿತ್ತು. ಬೆಳಗ್ಗೆ 10.30ಕ್ಕೆ ನಲಪಾಡ್​ ಜಾಮೀನು ಅರ್ಜಿ ವಿಚಾರಣೆ ಆರಂಭಿಸಿ, ಸಾಕ್ಷ್ಯ ನಾಶಪಡಿಸಬಾರದು, ಅಗತ್ಯವಿದ್ದರೆ ತನಿಖೆಗೆ ಸಹಕರಿಸಬೇಕು ಹಾಗೂ ಅವಶ್ಯವಿದ್ದಾಗ ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂದು ಎರಡು ಲಕ್ಷದ ಬಾಂಡ್​ ಮತ್ತು ಇಬ್ಬರ ಶ್ಯೂರಿಟಿ ಮೇರೆಗೆ ಷರತ್ತುಬದ್ಧ ಜಾಮೀನು ನೀಡಿದೆ.

ಮೂರೂವರೆ ತಿಂಗಳ ಬಳಿಕ ಶಾಸಕ ಹ್ಯಾರಿಸ್ ಪುತ್ರನಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಫೆ.17ರಂದು ವಿದ್ವತ್ ಹಲ್ಲೆ ಪ್ರಕರಣದಲ್ಲಿ ನಲಪಾಡ್ ಜೈಲು ಸೇರಿದ್ದ.

ನಲಪಾಡ್​ ಹಲ್ಲೆ ಪ್ರಕರಣದ ಟೈಮ್​ಲೈನ್​ 

ಫೆ.17, 2018: ಮೊಹಮದ್ ನಲಾಪಡ್ ಹ್ಯಾರಿಸ್ ಅಂಡ್ ಟೀಂನಿಂದ ಫರ್ಜಿ ಕಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ.

ಫೆ.18, 2018: ಬೆಂಗಳೂರು ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಲಪಾಡ್ ವಜಾ.

ಫೆ.19, 2018: ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ನಲಪಾಡ್ ಶರಣಾಗತಿ. ಎರಡು ದಿನಗಳ ಕಾಲ ಪೊಲೀಸ್ ವಶದಲ್ಲಿ ವಿಚಾರಣೆ.

ಫೆ.21, 2018: 14 ದಿನಗಳ ನ್ಯಾಯಾಂಗ ಬಂಧನಕ್ಕೆ ನಲಪಾಡ್, ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಮೊರೆ.

ಫೆ.22, 2018 : ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ಕುಟುಂಬದ ಜತೆ ರಾಜಿ ಸಂಧಾನಕ್ಕೆ ಶಾಸಕ ಹ್ಯಾರಿಸ್ ಯತ್ನ, ವಿಫಲ.

ಫೆ.23, 2018: ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ, ಆಕ್ಷೇಪಣೆಗೆ ಸರ್ಕಾರಕ್ಕೆ ಕಾಲವಕಲಾಶ ನೀಡಿ ವಿಚಾರಣೆ ಮುಂದೂಡಿಕೆ.

ಫೆ.27, 2018: ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ, ಮಾರ್ಚ್ 2 ಕ್ಕೆ ತೀರ್ಪು ಕಾಯ್ದಿರಿಸಿದ ಸೆಷನ್ಸ್ ಕೋರ್ಟ್.

ಮಾ.02, 2018: ನಲಪಾಡ್ ಮತ್ತು 6 ಜನ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಸೆಷನ್ಸ್ ಕೋರ್ಟ್.

ಮಾ.05, 2018: ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಲಪಾಡ್ ರಿಂದ ಹೈಕೋರ್ಟ್​​ಗೆ  ಮೇಲ್ಮನವಿ.

ಮಾ.07, 2018: ಶೀಘ್ರ ಅರ್ಜಿ ಕೈಗೆತ್ತಿಕೊಳ್ಳುವಂತೆ ಮನವಿ. ಮನವಿ ತಳ್ಳಿ ಹಾಕಿದ ನ್ಯಾ.ಶ್ರೀನಿವಾಸ್​ ಹರೀಶ್​ ಕುಮಾರ್​. ಲಿಸ್ಟ್​ ಪ್ರಕಾರ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ. ಅಲ್ಲಿವರೆಗೆ ಕಾಯಿರಿ ಎಂದ ನ್ಯಾಯಮೂರ್ತಿ.

ಮಾ.09, 2018: ಸುದೀರ್ಘ ಮೂರು ಗಂಟೆಗಳ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್.

ಮಾ.12, 2018: ವಾದ ಪ್ರತಿವಾದ ಆಲಿಸಿ ನಲಪಾಡ್ ಜಾಮೀನು ಅರ್ಜಿ ವಿವಾರಣೆ ಪೂರ್ಣಗೊಳಿಸಿ ಮಾರ್ಚ್ 14ಕ್ಕೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್.

ಮಾ.14, 2018: ಮೇಲ್ನೋಟಕ್ಕೆ ನಲಪಾಡ್ ಕ್ರೂರತೆ ಸಾಬೀತು, ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠ.
ಸೆಷನ್ಸ್ ಕೋರ್ಟ್, ಹೈಕೋರ್ಟ್ ಆದೇಶ ಪ್ರಶ್ನಿಸಲು ಅವಕಾಶವಿದ್ರೂ ತಮ್ಮ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿದ್ದ ಹಿನ್ನೆಲೆ ಸುಪ್ರೀಂ ಕದ ತಟ್ಟದಿರಲು ನಿರ್ಧರಿಸಿದ ಶಾಸಕ ಹ್ಯಾರಿಸ್.

ಮೇ.01, 2018: ನಲಪಾಡ್ ಅಂಡ್ ಟೀಂ ವಿರುದ್ಧ ನ್ಯಾಯಾಲಯಕ್ಕೆ 600ಕ್ಕೂ‌ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ ಪೊಲೀಸರು.

ಮೇ.16, 2018: ಮತ್ತೆ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ನಲಪಾಡ್ ರಿಂದ ಅರ್ಜಿ. ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಸರ್ಕಾರಕ್ಕೆ ನೋಟಿಸ್.

ಮೇ.19, 2018: ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ, ನಲಪಾಡ ಪರ ವಕೀಲರ ವಾದ ಮಂಡನೆ.

ಮೇ.24, 2018: ನಲಪಾಡ್ ಜಾಮೀನು ಅರ್ಜಿಗೆ 396 ಪುಟಗಳ ಆಕ್ಷೇಪಣೆ ಸಲ್ಲಿಸಿದ SPP ಎಂ.ಎಸ್. ಶ್ಯಾಂ ಸುಂದರ್.

ಮೇ.28, 2018: ನಲಪಾಡ್ ಪರ ವಕೀಲ ಉಸ್ಮಾನ್ ರಿಂದ ವಾದ, SPP ಎಂ.ಎಸ್. ಶ್ಯಾಂ ಸುಂದರ್ ರಿಂದ ಪ್ರತಿವಾದ.

ಮೇ.29, 2018: ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ. ಅಂತಿಮ ತೀರ್ಪನ್ನು ಮೇ 30 ಮಧ್ಯಾಹ್ನ 2.30ಕ್ಕೆ ಕಾಯ್ದಿದಿರಿಸಿದ ನ್ಯಾ.ಪರಮೇಶ್ವರ ಪ್ರಸನ್ನ.ಬಿ.

ಮೇ.30, 2018: ನಲಪಾಡ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ 63ನೇ ಸಿಟಿ ಸಿವಿಲ್ ಕೋರ್ಟ್.

ಜೂ.01,2018: ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ.

ಜೂ.06,2018: ಹೈಕೋರ್ಟ್ ನಲ್ಲಿ ನಲಪಾಡ್ ಅರ್ಜಿ ವಿಚಾರಣೆ ಆರಂಭ. SPPಗೆ ನೋಟಿಸ್.

ಜೂ.13,2018: SPPಯಿಂದ ಆಕ್ಷೇಪಣೆ ಸಲ್ಲಿಕೆ. ವಾದ ಪ್ರತಿವಾದ ಮುಕ್ತಾಯ ಜೂನ್ 14ಕ್ಕೆ ಅಂತಿಮ ತೀರ್ಪು ಕಾಯ್ದಿರಿಸಿದ ಹೈಕೋರ್ಟ್. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *

Back To Top