Saturday, 24th March 2018  

Vijayavani

ಸಿಎಂ ತವರಿನಲ್ಲಿ AICC ಅಧ್ಯಕ್ಷರ ಸವಾರಿ- ಮೈಸೂರಿನಲ್ಲಿ ಎರಡು ದಿನ ರಾಹುಲ್ ರ‍್ಯಾಲಿ- ನಾಲ್ಕನೇ ಯಾತ್ರೆಗೆ ಸಜ್ಜಾಯ್ತು ಸಾಂಸ್ಕೃತಿಕ ನಗರಿ        ರಾಜ್ಯಸಭೆ ಚುನಾವಣೆ ಮುಗೀತಿದ್ದಂಗೆ ರಿಸೈನ್​ಗೆ ನಿರ್ಧಾರ- ಜೆಡಿಎಸ್​ಗೆ ರೆಬೆಲ್ಸ್ ಇಂದು ಗುಡ್​ಬೈ- ನಾಳೆ ರಾಹುಲ್​ ಸಮುಖದಲ್ಲಿ ಕೈಗೆ ಜೈ        ಫಲ್ಗುಣಿ ನದಿ ಒಡಲಿಗೆ ರಾಜರೋಷವಾಗಿ ಕನ್ನ- ಬೋಟ್​​ಗಟ್ಟಲೇ ಮರಳು ಲೂಟಿ- ಕಣ್ಣಿದ್ದು ಕುರುಡಾದ ಜಿಲ್ಲಾಡಳಿತ        ಜಿಲ್ಲಾ ಪಂಚಾಯತ್​​ನಲ್ಲೇ​​ ಶುರುವಾಗಿದೆ ನೀರಿಗೆ ಬರ- ಮಳೆನೀರು ಕೊಯ್ಲು ಅಳವಡಿಸಿದ್ರೂ ಜೀವಜಲಕ್ಕೆ ತತ್ವಾರ- ಧಾವಾಡ ZP ಕಚೇರಿಯಲ್ಲಿ ಇದೆಂಥ ನರಕ        ರಜನಿಕಾಂತ್ ಓದಿದ ಶಾಲೆಗೆ ನ್ಯೂ ಲುಕ್​- ಖಾಸಗಿ ಶಾಲೆಗೂ ಸೆಡ್ಡು ಹೊಡೆಯುತ್ತೆ ಫೆಸಿಲಿಟೀಸ್- ಸೂಪರ್ ಶಾಲೆ ಇಂದು ಉದ್ಘಾಟನೆ       
Breaking News

ಪುತ್ರನ ಪರವಾಗಿ ಕ್ಷಮೆ ಕೋರಿದ ಶಾಸಕ ಹ್ಯಾರಿಸ್

Monday, 19.02.2018, 7:52 PM       No Comments

<< ಕಾನೂನಿನ ಮುಂದೆ ಎಲ್ಲರೂ ಸಮಾನರು, ತನಿಖೆಗೆ ಸಂಪೂರ್ಣ ಸಹಕಾರ>>

ಬೆಂಗಳೂರು: ನನ್ನ ಪುತ್ರ ಮೊಹಮದ್​ ಹಾಗೂ ವಿದ್ವತ್​ ನಡುವೆ ನಡೆದಿರುವ ಈ ದುರದೃಷ್ಟ ಘಟನೆಗಾಗಿ ವಿದ್ವತ್​ ಹಾಗೂ ಕುಟುಂಬ ಮತ್ತು ಬೆಂಗಳೂರಿನ ನಾಗರೀಕರಲ್ಲಿ ಕ್ಷಮೆಯಾಚಿಸುವುದಾಗಿ ಕಾಂಗ್ರೆಸ್​ ಶಾಸಕ ಎನ್​.ಎ.ಹ್ಯಾರಿಸ್​ ಸೋಮವಾರ ತಿಳಿಸಿದ್ದಾರೆ.

ನನ್ನ ಮಗ ಮೊಹಮದ್​ ನಲಪಾಡ್ ಹ್ಯಾರಿಸ್​​​ನನ್ನು ಈಗಾಗಲೇ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ಒಪ್ಪಿಸಿದ್ದೇನೆ. ಈ ಪ್ರಕರಣಕ್ಕೆ ಮಾಧ್ಯಮಗಳು ಹೆಚ್ಚು ಒತ್ತು ನೀಡುತ್ತಿರುವುದು ನನ್ನ ರಾಜಕೀಯ ಬದುಕಿನ ಮೇಲೆ ಪ್ರಭಾವ ಬೀಳಲಿದೆ. ಕಳೆದ 9 ವರ್ಷಗಳಿಂದ ನನ್ನ ವಿಧಾನಸಭಾ ಕ್ಷೇತ್ರವಾದ ಶಾಂತಿನಗರದಲ್ಲಿ ಶ್ರದ್ಧೆ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. ಅದಕ್ಕೆ ಅಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದು ಮನವಿ ಮಾಡಿಕೊಂಡಿದ್ದಾರೆ.

ತಪ್ಪು ಮಾಡಿರುವುದು ನನ್ನ ಮಗನಾದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಶನಿವಾರ ನಡೆದಿರುವುದು ದುರ್ಘಟನೆಯಾಗಿದ್ದು ಇದು ನಡೆಯಬಾರದಿತ್ತು. ಪ್ರಕರಣದ ಕುರಿತಾದ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top