Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಮೈಸೂರು ವಾರಿಯರ್ಸ್​ಗೆ ಆಲ್ರೌಂಡರ್ ಜೆ. ಸುಚಿತ್ ಸಾರಥ್ಯ

Friday, 10.08.2018, 3:03 AM       No Comments

ಮೈಸೂರು: ಮುಂಬರುವ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಟೂರ್ನಿಗೆ ಮೈಸೂರು ವಾರಿಯರ್ಸ್ ತಂಡ ಸಜ್ಜಾಗಿದೆ. ಸ್ಥಳೀಯ ಯುವ ಆಲ್ರೌಂಡರ್ ಜೆ. ಸುಚಿತ್​ಗೆ ಈ ಬಾರಿ ತಂಡದ ಸಾರಥ್ಯ ವಹಿಸಲಾಗಿದ್ದರೆ, ಟೀಮ್ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಗುರುವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ, ತಂಡದ ಮಾಲೀಕರಾಗಿರುವ ಎನ್.ಆರ್. ಗ್ರೂಪ್ ವತಿಯಿಂದ ವಾರಿಯರ್ಸ್ ಬಳಗವನ್ನು ಅನಾವರಣಗೊಳಿಸಲಾಯಿತು. ತಂಡದ ಮ್ಯಾನೇಜರ್ ಎಂ.ಆರ್.ಸುರೇಶ್, ತಂಡದ ಸದಸ್ಯರನ್ನು ವೇದಿಕೆಗೆ ಆಹ್ವಾನಿಸುವ ಮೂಲಕ ಹೆಸರು ಪ್ರಕಟಿಸಿದರು. ‘ತಂಡದ 18 ಆಟಗಾರರು ಈಗಾಗಲೇ ರಾಜ್ಯದ ವಿವಿಧ ಹಂತಗಳ ಕ್ರಿಕೆಟ್​ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇದರಲ್ಲಿ ಅನೇಕ ಸ್ಥಳೀಯ ಪ್ರತಿಭೆಗಳು ಇದ್ದಾರೆ. ಮ್ಯಾಕ್ಸಿ್ವಟಾ, ಬಕಾರ್ಡಿ, ಬಾರ್ಬೆಕ್ಯು ನೇಷನ್, ಪಾಠಕ್ ಡೆವೆಲಪರ್ಸ್, ಟೆಕ್ಮಿಲ್, ಕೊಲಂಬಿಯಾ ಏಷ್ಯಾ, ಓಕ್ಲೆ, ಜಿ-ಶಾಕ್ ಮತ್ತು ಬಿಐಟಿ ಸಂಸ್ಥೆಗಳು ಈ ಬಾರಿ ಮೈಸೂರು ವಾರಿಯರ್ಸ್ ತಂಡದ ಪ್ರಾಯೋಜಕರಾಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. ‘ವಾರಿಯರ್ಸ್ ತಂಡದ ಫ್ರಾಂಚೈಸಿ ಆಗಿರುವುದಕ್ಕೆ ತುಂಬ ಸಂತೋಷವಾಗಿದೆ. 2014ರ ಆವೃತ್ತಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈ ಬಾರಿಯೂ ನಮ್ಮ ತಂಡದಲ್ಲಿ ಅಮಿತ್ ವರ್ಮ, ಕೆ.ಗೌತಮ್ ಜೆ.ಸುಚಿತ್, ರಾಜು ಭಟ್ಕಳ, ಶೋಯೆಬ್ ಮ್ಯಾನೇಜರ್ ಅವರಂಥ ಅನುಭವಿ ಆಟಗಾರರಿದ್ದಾರೆ. ಜತೆಗೆ ಯುವ ಪ್ರತಿಭೆಗಳಿದ್ದು, ಈ ಬಾರಿಯೂ ಕಪ್ ಗೆಲ್ಲುವ ನಿರೀಕ್ಷೆ ಇದೆ’ ಎಂದು ತಂಡದ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ವಿಶ್ವಾಸ ವ್ಯಕ್ತಪಡಿಸಿದರು. ಕೆಎಸ್​ಸಿಇ ಮೈಸೂರು ವಲಯದ ಸಂಚಾಲಕ ಬಾಲಚಂದರ್, ಎ.ವಿ.ಶಶಿಧರ್, ಅಧ್ಯಕ್ಷ ಸುಧಾಕರ್ ರೈ, ಎನ್.ಆರ್. ಗ್ರೂಪ್​ನ ಆರ್.ಗುರು, ಪವನ್ ರಂಗಾ, ಕಿರಣ್ ರಂಗಾ, ಅನಿರುದ್ಧ್ ರಂಗಾ ಮತ್ತಿತರರಿದ್ದರು. ಜೆ.ಸುಚಿತ್ ಜತೆಗೆ ಬಿ.ಎನ್.ಭರತ್, ಎಸ್. ಪಿ. ಮಂಜುನಾಥ್, ವೈಶಾಖ್ ವಿಜಯ್ಕುಮಾರ್, ಕೆ.ಎಚ್.ಮನೋಜ್, ಕಿಶನ್ ಬೆಡಾರೆ, ಗೌತಮ್ ಸಾಗರ್ ತಂಡದಲ್ಲಿರುವ ಸ್ಥಳೀಯ ಪ್ರತಿಭೆಗಳಾಗಿದ್ದಾರೆ. ಕೆಪಿಎಲ್​ಗೆ ಆ. 15ರಂದು ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ.

ಮೈಸೂರು ವಾರಿಯರ್ಸ್ ತಂಡ: ಜೆ.ಸುಚಿತ್ (ನಾಯಕ), ಅಮಿತ್ ವರ್ಮ, ಕೆ.ಗೌತಮ್ ರಾಜು ಭಟ್ಕಳ, ಬಿ.ಎನ್. ಭರತ್, ಎಸ್.ಪಿ. ಮಂಜುನಾಥ್, ಶೋಯೆಬ್ ಮ್ಯಾನೇಜರ್, ಅರ್ಜುನ್ ಹೊಯ್ಸಳ, ಕೆ.ವಿ.ಸಿದ್ಧಾರ್ಥ್, ಪ್ರತೀಕ್ ಜೈನ್, ವೈಶಾಖ್ ವಿಜಯ್ಕುಮಾರ್, ಶರತ್ ಶ್ರೀನಿವಾಸ್, ಕೆ.ಎಚ್. ಮನೋಜ್, ಕುಶಾಲ್ ವಾಧ್ವಾನಿ, ಲವ್​ನಿತ್ ಸಿಸೋಡಿಯಾ, ವಿನಯ್ಸಾಗರ್, ಕಿಶನ್ ಬೆಡಾರೆ, ಗೌತಮ್ ಸಾಗರ್; ಮುಖ್ಯ ಕೋಚ್: ಆರ್.ಎಕ್ಸ್. ಮುರಳಿ, ಫಿಸಿಯೋ: ಶ್ರೀರಂಗ, ಮೋಹನ್​ದಾಸ್, ಫಿಟ್ನೆಸ್ ಟ್ರೇನರ್: ಶ್ಯಾಮ್ಾವ್, ಟೀಮ್ ಮ್ಯಾನೇಜರ್: ಎಂ.ಆರ್.ಸುರೇಶ್, ಸಂಯೋಜಕ: ಎನ್.ಅರುಣ್​ಕುಮಾರ್, ಆರ್.ಮಧುಸೂದನ್.

ಕ್ರಿಕೆಟ್ ಪ್ರೇಮಿಗಳು ಮತ್ತು ಫ್ರಾಂಚೈಸಿಗಳು ಎಲ್ಲ ಆಟಗಾರರಿಗೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ತಂಡದ ಆಟಗಾರರು ಅಭ್ಯಾಸ ನಡೆಸುತ್ತಿದ್ದು, ಈ ಬಾರಿಯೂ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ.

| ಜೆ. ಸುಚಿತ್ ವಾರಿಯರ್ಸ್ ತಂಡದ ನಾಯಕ

ಅಂತಾರಾಷ್ಟ್ರೀಯ, ರಣಜಿ ಸೇರಿ ಎಲ್ಲ ಟೂರ್ನಿಗಳಲ್ಲಿ ಆಡಿರುವ ನನ್ನ ಅನುಭವವನ್ನು ವಾರಿಯರ್ಸ್ ಆಟಗಾರರೊಂದಿಗೆ ಹಂಚಿಕೊಳ್ಳುತ್ತೇನೆ. ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಉತ್ತಮ ನಾಯಕ, ಉತ್ತಮ ಕೋಚ್ ಇದ್ದು, ಈ ಬಾರಿ ಮೈಸೂರು ವಾರಿಯರ್ಸ್ ತಂಡವೇ ಕಪ್ ಗೆಲ್ಲುವ ವಿಶ್ವಾಸವಿದೆ.

| ವೆಂಕಟೇಶ್​ಪ್ರಸಾದ್ ವಾರಿಯರ್ಸ್ ತಂಡದ ಮೆಂಟರ್

ಈ ಬಾರಿ ನಮ್ಮ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮವಾಗಿದೆ. ಅನೇಕ ಹೊಸ ಪ್ರತಿಭಾನ್ವಿತ ಆಟಗಾರರೂ ತಂಡದಲ್ಲಿದ್ದು, ಮೈದಾನದ ಒಳಗೆ ಮತ್ತು ಹೊರಗೆ ಶೇ.100 ಶ್ರಮ ಹಾಕುತ್ತೇವೆ. ಒಟ್ಟಿನಲ್ಲಿ ಈ ಬಾರಿ ಕಪ್ ಗೆಲ್ಲುವುದೇ ಗುರಿ.

| ಆರ್.ಎಕ್ಸ್.ಮುರಳಿಧರ್ ವಾರಿಯರ್ಸ್ ತರಬೇತುದಾರ

Leave a Reply

Your email address will not be published. Required fields are marked *

Back To Top