Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಶಿಕ್ಷಕ ವೃತ್ತಿಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

Wednesday, 13.06.2018, 1:20 PM       No Comments

ಮೈಸೂರು: ಒಂದು ಕಾಲದಲ್ಲಿ ನಾನು ಜನಪ್ರಿಯ ಪ್ರಾಧ್ಯಾಪಕ. ಈಗಲೂ ಆ ವೃತ್ತಿ ಮೇಲೆ ಪ್ರೀತಿ, ಅಭಿಮಾನ ಇದೆ.‌ ನನಗೆ ರಾಜಕೀಯಕ್ಕಿಂತ ಖುಷಿ ನೀಡಿದ್ದು ಶಿಕ್ಷಕ ವೃತ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಮಾಜಿ ಸಿಎಂ ನೇತೃತ್ವದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು ರಾಜಕೀಯಕ್ಕೆ ಬಂದಿಲ್ಲದಿದ್ದರೆ, ಪ್ರಖ್ಯಾತ ಪ್ರಾಧ್ಯಾಪಕ ಆಗ್ತಿದ್ದೆ. 1 ಗಂಟೆ ಪಾಠ ಮಾಡುವುದು ಅತ್ಯಂತ ಖುಷಿ ನೀಡುತ್ತಿತ್ತು. ಈಗಲೂ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಇಷ್ಟ. ಆದರೆ, ವಯಸ್ಸಾಗಿದೆ. 71 ಕ್ಕೆ ಕಾಲಿಡುತ್ತಿದ್ದೇನೆ ಎಂದು ಶಿಕ್ಷಕ ವೃತ್ತಿಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಪ್ರಜಾಪ್ರಭುತ್ವದಲ್ಲಿ ಅತೃಪ್ತಿ, ಅಸಮಾಧಾನ ಸಹಜ
ಪ್ರಜಾಪ್ರಭುತ್ವಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗಲ್ಲ. ಎಲ್ಲರಿಗೂ ಸಚಿವ ಆಗಬೇಕೆಂಬ ಆಸೆ ಇರುತ್ತೆ. ಆಗದಿದ್ದಲ್ಲಿ ಅತೃಪ್ತಿ, ಅಸಮಾಧಾನ ಸಹಜ . ಅಸಮಾಧಾನ ಇರಲೇಬಾರದು ಅಂತ ನಾನು ಹೇಳಲ್ಲ. ಯಾರು ಸಚಿವರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಿದೆ. ಹೀಗಿರುವಾಗ ಎಲ್ಲರೂ ಪಕ್ಷದ ನಿರ್ಧಾರವನ್ನು ಗೌರವಿಸಬೇಕಾಗುತ್ತೆ ಎಂದು ಅತೃಪ್ತರನ್ನು ಸಂತೈಸಿದರು.

ಮುದುಕನಿಗೆ ಯಾಕೆ ಮತ್ತೊಂದು ಮದುವೆ?
ಇತ್ತೀಚೆಗೆ ಒಂದು ಆತ್ಮಾವಲೋಕನ ಸಭೆಗೆ ಹೋಗಿದ್ದೆ. ಅಲ್ಲಿ ಶಾಸಕ ಚಿಮ್ಮನಕಟ್ಟಿ ನಿಮಗೆ 71 ಅಲ್ಲ ಸರ್ 21, ಮತ್ತೊಂದು ಮದುವೆ ಮಾಡೋ ಉತ್ಸಾಹದಲ್ಲಿದ್ದೇವೆ ಎಂದು ಹೇಳಿದರು. ಹುಡುಗಿಯರು ಕೇಳಿಸಿಕೊಂಡರೆ ತಪ್ಪು ತಿಳ್ಕೊತ್ತಾರೆ ಅಂದೆ. ಅದಕ್ಕೆ ಹೃದಯವಂತಿಕೆಯಲ್ಲಿ ಸದಾ ಯುವಕರು ಎಂದು ಹೇಳಿದರು. ಹೌದೌದು, ಹೃದಯವಂತಿಕೆಯಲ್ಲಿ ನಾನು ಯಂಗ್ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಎಲ್ಲ ಯೋಜನೆಗಳು ಮುಂದುವರಿಯುತ್ತೆ
ರೈತರ ಸಂಪೂರ್ಣ ಸಾಲಮನ್ನಾ ವಿಚಾರವಾಗಿ ಮಾತನಾಡಿ, ಸಿಎಂ ಕುಮಾರಸ್ವಾಮಿ ಬಳಿ ಹಣಕಾಸು ಖಾತೆ ಇದೆ. ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಿದ್ದಾರೆ. ನಮ್ಮ ಪಕ್ಷ ಯಾವಾಗಲೂ ರಾಜ್ಯದ ರೈತರ ಪರವಾಗಿರುತ್ತದೆ. ಸದ್ಯದ ಪರಿಸ್ಥಿತಿಗೂ, ಹಿಂದಿನ ಸರ್ಕಾರದ ಆಡಳಿತಕ್ಕೂ ಸಂಬಂಧವಿಲ್ಲ. ನನ್ನ ಅವಧಿಯಲ್ಲಿದ್ದ ಎಲ್ಲ ಯೋಜನೆಗಳು ಮುಂದುವರಿಯುತ್ತೆ ಎಂದು ತಿಳಿಸಿದರು.

ಕಾಂಗ್ರೆಸ್​ ಪಕ್ಷದ ಗೆಲುವು
ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಬಗ್ಗೆ ಪ್ರತಿಕ್ರಿಯಿಸಿ, ಇದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಗೆಲುವಲ್ಲ. ಇದು ಕಾಂಗ್ರೆಸ್ ಪಕ್ಷದ ಜಯ. ನಮ್ಮ ಅಭ್ಯರ್ಥಿ ಸೌಮ್ಯಾರೆಡ್ಡಿ ಉತ್ತಮವಾಗಿ ಕೆಲಸ ಮಾಡಿದ್ದರು.‌ ಅದರ ಪರಿಣಾಮವಾಗಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

Back To Top