Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಮೈಸೂರು ದಸರಾ: ಕಣ್ಮನ ಸೆಳೆಯುತ್ತಿವೆ ಚನ್ನಪಟ್ಟಣದ ಗೊಂಬೆಗಳು

Friday, 12.10.2018, 8:15 PM       No Comments

<< ಮಹಿಳಾ ದಸರಾದಲ್ಲಿ ಚಿತ್ರಕಲೆಗಳು, ಬಿದಿರು ಉತ್ಪನಗಳ ಆಕರ್ಷಣೆ >>

ಮೈಸೂರು: ನಗರದ ಜೆಕೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮಹಿಳಾ ದಸರಾದಲ್ಲಿ ಚನ್ನಪಟ್ಟಣದ ಗೊಂಬೆಗಳು, ಚಿತ್ರಕಲೆಗಳು, ಮಣ್ಣಿನ ಅಲಂಕಾರಿಕ ವಸ್ತುಗಳು, ಬಿದಿರಿನ ಉತ್ಪನ್ನಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ.

ಚನ್ನಪಟ್ಟಣ ತಾಲೂಕಿನ ಮುನಿಯಪ್ಪನದೊಡ್ಡಿಯ ಶ್ರೀ ಬೀರೇಶ್ವರ ಸ್ವ ಸಹಾಯ ಸಂಘದ ಸದಸ್ಯೆ ಜಯಲಕ್ಷ್ಮೀ ಅವರು ತಯಾರಿಸಿದ ಚನ್ನಪಟ್ಟಣದ ಗೊಂಬೆಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ. ಮರದಿಂದ ತಯಾರಿಸಿದ ವಿವಿಧ ರೀತಿಯ ಬುಗುರಿ, ಏರೋಪ್ಲೇನ್, ರೈಲು, ಪುಟ್ಟ ಗಾತ್ರದ ತಬಲ ಸೇರಿದಂತೆ ವಿವಿಧ ಆಟಿಕೆಗಳು ಪ್ರತಿಯೊಬ್ಬರನ್ನು ಕೈ ಬೀಸಿ ಕರೆಯುತ್ತಿದೆ.

ಆಕರ್ಷಕ ಚಿತ್ರಕಲೆಗಳು: ಪಿರಿಯಾಪಟ್ಟಣದ ಕಲಾವಿದೆ ಮಂಜುಳಾ ಅವರ ಚಿತ್ರಕಲಾ ಪ್ರದರ್ಶನ ಎಲ್ಲರ ಗಮನ ಸಳೆಯುತ್ತಿದೆ. ಗ್ರಾಮೀಣ ಜನಜೀವನಕ್ಕೆ ಸಂಬಂಧಿಸಿದಂತೆ ವಿವಿಧ ಚಿತ್ರಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ, ಮೇಲುಕೋಟೆ, ಬಾದಾಮಿ, ಮಡಿಕೇರಿಯ ಸುಂದರ ಚಿತ್ರಗಳು ಮಂಜುಳಾ ಅವರ ಕುಂಚದಲ್ಲಿ ಅರಳಿವೆ.

ಮಣ್ಣಿನ ಕಲಾಕೃತಿಗಳು

ಮಂಡ್ಯದ ಭವ್ಯಾ ಅವರು ಜೇಡಿಮಣ್ಣಿನಿಂದ ತಯಾರಿಸಿದ ಅಲಂಕಾರಿಕ ದೀಪಗಳು, ಗಣೇಶ ಮೂರ್ತಿಗಳು ಪ್ರತಿಯೊಬ್ಬರ ಗಮನ ಸೆಳೆಯುತ್ತಿವೆ. ಜೇಡಿಮಣ್ಣಿನಿಂದ ಯಾವ ರೀತಿ ಕಲಾಕೃತಿಗಳನ್ನು ತಯಾರಿಸಬಹುದೆಂದು ಅವರು ಪ್ರಾತ್ಯಕ್ಷಿಕೆ ಸಹ ನೀಡುತ್ತಿದ್ದಾರೆ.

ಬಿದಿರಿನ ಉತ್ಪನ್ನಗಳು

ಹುಣಸೂರಿನ ಮೇದರ್ ಬ್ಲಾಕ್‌ನ ಶ್ರೀಮಾರಮ್ಮ ಸೀಶಕ್ತಿ ಸ್ವಸಹಾಯ ಮಹಿಳಾ ಸಂಘದ ಚಿಕ್ಕತಾಯಮ್ಮ ಬಿದಿರಿನಿಂದ ತಯಾರಿಸಿರುವ ಮೊರ, ಬೀಸಣಿಕೆ, ಬುಟ್ಟಿ ಸೇರಿದಂತೆ ಹಲವು ಉತ್ಪನ್ನಗಳು ಗಮನ ಸೆಳೆಯುತ್ತಿವೆ. ಬೆಂಗಳೂರಿನ ಶ್ರೀ ಚೌಡೇಶ್ವರಿ ಸ್ವಸಹಾಯ ಗುಂಪಿನ ಶೈಲಾ ಅವರು ಹತ್ತಿಯಿಂದ ನೇಯ್ದ ಗೊಂಬೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಗ್ರಾಮದ ಸುಧಾ ಮನೆಯಲ್ಲೇ ನೇಯ್ದ ಕಾಟನ್ ಸೀರೆಗಳು ಮಹಿಳಾ ದಸರಾದ ಆಕರ್ಷಣೆಯಾಗಿವೆ.

Leave a Reply

Your email address will not be published. Required fields are marked *

Back To Top