Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಗೌರಿ ಹತ್ಯೆ ತನಿಖೆ ದಿಕ್ಕು ತಪ್ಪಿಸುವ ಉದ್ದೇಶ: ಭಾವನಾ ಬೆಳಗೆರೆ

Saturday, 09.12.2017, 2:17 PM       No Comments

<< ನಮ್ಮಲ್ಲೂ ದಾಖಲೆಗಳಿವೆ ; ಕ್ಲೀನ್ ಚಿಟ್ ಸಿಗಲಿದೆ ಎಂದ ಪುತ್ರಿ>>

ಧಾರವಾಡ: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪತ್ರಕರ್ತ ರವಿ ಬೆಳಗೆರೆ ಪ್ರಕರಣದಲ್ಲಿ ನೈತಿಕ ಹಾಗೂ ಕಾನೂನು ಹೋರಾಟಕ್ಕೆ ಅಣಿಯಾಗಿರುವ ಪುತ್ರಿ ಭಾವನಾ ಬೆಳಗೆರೆ, ಗೌರಿ ಲಂಕೇಶ್ ಹತ್ಯೆ ತನಿಖೆ ದಿಕ್ಕುತಪ್ಪಿಸುವ ಉದ್ದೇಶದಿಂದ ತಂದೆ ಹೆಸರು ಸಿಕ್ಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದೊಡ್ಡ ಕೋಟೆ ಕಟ್ಟಿಕೊಂಡಿರುವ ರವಿ ಬೆಳಗೆರೆ 2ನೇ ಮದುವೆ ಸಲುವಾಗಿ ಕತ್ತು ಕೊಯ್ಯುತ್ತೀನಿ, ಶೂಟ್ ಮಾಡ್ತೀನಿ ಅನ್ನೋ ವ್ಯಕ್ತಿ ಅಲ್ಲ ಎಂದಿದ್ದಾರೆ.

ಹತ್ಯೆಗೆ ಸುಪಾರಿ ನೀಡಿದ್ದಾರೆನ್ನುವುದು ಕೇವಲ ಆರೋಪವಾಗಿದೆ. ಕಾನೂನು ಮುರಿದು ನಾವೇ ಸರಿ ಅಂತಾ ಹೇಳೋಕೆ ಆಗುವುದಿಲ್ಲ. ನಾಲ್ಕು ದಿವಸ ಕಾಯಲೇಬೇಕು ಕಾಯುತ್ತೇವೆ. ಪೊಲೀಸರ ಬಳಿ ದಾಖಲೆಗಳಿವೆ. ಅದಕ್ಕೆ ಅವರು ಆರೋಪ ಹೊರಿಸುತ್ತಾ ಇದಾರೆ. ನಮ್ಮ ಕಡೆ ಇರುವ ದಾಖಲೆಗಳನ್ನ ಪ್ರಸ್ತುತ ಪಡಿಸುತ್ತೇವೆ. ನಮ್ಮ ತಂದೆಗೆ ಕ್ಲೀನ್​ ಚಿಟ್​ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ತಂದೆಯ ಬಳಿ ಇರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡಿದ ಅವರು, ತಂದೆ ಗನ್ ಹೊಂದಿರೋದಕ್ಕೆ ಲೈಸೆನ್ಸ್ ಇದೆ. ಎಲ್ಲ ಆರೋಪಗಳಿಗೂ ಕಾನೂನಿನ ಪ್ರಕಾರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಆರೋಪಿ ಶಶಿ ಜತೆ ಫೋನ್​ನಲ್ಲಿ ಹೆಚ್ಚು ಮಾತನಾಡಲು ಕಾರಣವೇನು ಎಂದ ಕೇಳಿದ್ದಕ್ಕೆ ಪ್ರತಿಕ್ರಿಸಿದ ಅವರು, ನನ್ನ ತಂದೆ ಪಾತಕಿಗಳನ್ನ ಮಾತನಾಡಿಸುತ್ತಾರೆ. ಶಶಿ ಜತೆಗೂ ಮಾತನಾಡಿದ್ದಾರೆ. ಅಷ್ಟೇಕೆ ಮಾತನಾಡಿದ್ದಾರೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವವಾಗುವುದಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

Back To Top