Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಬಾವನ ಮನೆಗೆ ಬೆಂಕಿಯಿಟ್ಟಿದ್ದ ಮುಸ್ತಫಾ ಕಾಲಿಗೆ ಪೊಲೀಸ್​ ಗುಂಡು

Thursday, 12.07.2018, 8:46 AM       No Comments

ಕಲಬುರಗಿ: ಅಕ್ಕನ ಮೇಲಿನ ಕೋಪಕ್ಕೆ ಬಾವನ ಮನೆಗೆ ಬೆಂಕಿ ಹಚ್ಚಿ ಎಸ್ಕೇಪ್​ ಆಗಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್​ ಮಾಡಿದ್ದಾರೆ.

ಜಿಲ್ಲೆಯ ಹೊರವಲಯದ ಸೇಡಂ ರಸ್ತೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದಾಗ, ಆತ್ಮರಕ್ಷಣೆಗಾಗಿ ಆರೋಪಿ ಮಹ್ಮದ್ ಮುಸ್ತಫಾ ಮೇಲೆ ಫೈರಿಂಗ್​ ನಡೆಸಿದ್ದಾರೆ.

ಜು.4 ರಂದು ತನ್ನ ಅಕ್ಕನೊಂದಿಗೆ ಜಗಳವಾಡಿ ಆಕೆಯ ಮನೆಗೆ ಬೆಂಕಿ ಇಟ್ಟಿದ್ದ. ಘಟನೆಯಲ್ಲಿ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದರು. ಜು. 10 ರಂದು ಹೈದರಾಬಾದ್‌ನಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಮುಸ್ತಫಾ ಎಸ್ಕೇಪ್ ಆಗಿದ್ದ. ಆದರೆ ನಿನ್ನೆ ಪೊಲೀಸರು ಮುಸ್ತಫಾನನ್ನು ಬಂಧಿಸಿ, ಇಂದು ವಿಚಾರಣೆ ವೇಳೆ ಮಾರಕಾಸ್ತ್ರಗಳ ಜಪ್ತಿಗೆ ಕರೆದೊಯ್ದಾಗ ಈ ಘಟನೆ ನಡೆದಿದೆ. ಮುಸ್ತಫಾ ಮಾಡಿರುವ ಹಲ್ಲೆಯಿಂದ ಇಬ್ಬರು ಎಎಸ್​ಐ ಮತ್ತು ಇಬ್ಬರು ಹೆಡ್​ ಕಾನ್ಸ್​ಟೆಬಲ್​ಗೆ ಗಾಯಗಳಾಗಿವೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top