Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಮೊನ್ನೆ ಯೋಗ ಕಲಿಸದಂತೆ ಬೆದರಿಕೆ, ಇಂದು ಮನೆಗೆ ಕಲ್ಲು..

Friday, 10.11.2017, 2:51 PM       No Comments

>> ಯೋಗಪಟು ರಾಫಿಯಾ ನಾಝ್ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

ರಾಂಚಿ : ಜಾರ್ಖಂಡ್ ನಲ್ಲಿ ಸ್ವಯಂ ಪ್ರೇರಣೆಯಿಂದ ಯೋಗ ಕಲಿತು ನಾಲ್ಕು ಜನರಿಗೆ ಕಲಿಸುತ್ತಾ ಶಹಬ್ಬಾಸ್ ಗಿರಿ ಪಡೆದ ಮುಸ್ಲಿಂ ಯುವತಿ ರಾಫಿಯಾ ನಾಝ್ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ.

ಡೊರಾಂಡೋ ಪ್ರದೇಶದಲ್ಲಿರುವ ಆಕೆಯ ನಿವಾಸದ ಕಿಟಕಿಗಳು ಕಲ್ಲು ಎಸೆತದಿಂದ ಒಡೆದು ಚೂರಾಗಿವೆ. ಪಾಲಕರು ಹಾಗೂ ನೆರೆಮನೆಯವರು ಆತಂಕದಲ್ಲಿ ಮುಳುಗಿದ್ದಾರೆ.

ಈ ಮುಂಚೆಯೇ ಫತ್ವಾ ಹೊರಡಿಸಿ ಯೋಗ ಕಲಿಕೆ ನಿಲ್ಲಿಸಲು ಮುಸ್ಲಿಂ ಮೌಲ್ವಿಗಳು ಎಚ್ಚರಿಸಿದ್ದರು. ಕೆಲವು ಹಿಂದೂ ಸಂಘಟನೆಗಳು ಹೆಸರು ಬದಲಾಯಿಸಿಕೊಳ್ಳಲು ಒತ್ತಾಯಿಸಿದ್ದವು. ಇದೆಲ್ಲದರಿಂದ ರಾಫಿಯಾಗೆ ದಿನದ 24 ಗಂಟೆಯೂ ಪೊಲೀಸ್ ಭದ್ರತೆ ನೀಡಲಾಗಿತ್ತು.

ಬುಧವಾರ ರಾತ್ರಿ ಕೆಲ ರಾಜಕೀಯ ನಾಯಕರು ರಾಫಿಯಾಳನ್ನು ಭೇಟಿ ಮಾಡಿದ ಬಳಿಕ ದುಷ್ಕರ್ಮಿಗಳು ಮನೆಯ ಮೇಲೆ ಕಲ್ಲಿನ ಸುರಿಮಳೆ ಗೈದಿದ್ದಾರೆ. ಆ ವೇಳೆ ಮನೆಯ ಒಳಗಡೆ ಇದ್ದದ್ದರಿಂದ ಎಷ್ಟು ಜನ ಈ ಕೃತ್ಯದಲ್ಲಿ ತೊಡಗಿದ್ದರು ಎನ್ನುವ ಕುರಿತು ಮಾಹಿತಿ ಇಲ್ಲ ಎಂದು ರಾಫಿಯಾ ತಿಳಿಸಿದ್ದಾಳೆ.

ಹಲವು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದ ರಾಫಿಯಾ, ಯೋಗಗುರು ಬಾಬಾ ರಾಮ್ದೇವ್ ಅವರ ಜತೆ ವೇದಿಕೆಯಲ್ಲಿ ಯೋಗವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಳು. ಇದೇ ಹಿನ್ನೆಲೆಯಲ್ಲಿ ಆಕೆಗೆ ಬೆದರಿಕೆಗಳು ಬರತೊಡಗಿದ್ದವು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top