Friday, 21st September 2018  

Vijayavani

Breaking News

ಮೂವರು ಕೊಲೆ ಆರೋಪಿಗಳ ಬಂಧನ

Thursday, 14.06.2018, 6:04 PM       No Comments

ಕೊಪ್ಪಳ: ಯಲಬುರ್ಗಾ ತಾಲೂಕಿನ ಚಿಲಕಮುಖಿ ಗ್ರಾಮದ ನಿವಾಸಿ ಹನುಮಂತಪ್ಪನನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಅನೂಪ್ ಶೆಟ್ಟಿ ತಿಳಿಸಿದರು.

ಆಸ್ತಿ ಹಾಗೂ ಅನೈತಿಕ ಸಂಬಂಧ ಈ ಕೊಲೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಣ್ಣ (37), ಪುಣ್ಯಮೂರ್ತಿ (51), ರಮೇಶ (51) ಎನ್ನುವ ಆರೋಪಿಗಳನ್ನು ಬಂಧಿಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಜಂಬೆ, ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಬೇಧಿಸಲು ಡಿವೈಎಸ್ಪಿ ಎಸ್.ಎಂ.ಸಂದಿಗವಾಡ ಸೇರಿ ಎರಡು ತಂಡಗಳನ್ನು ರಚಿಸಲಾಗಿತ್ತು. ಯಲಬುರ್ಗಾ ಸಿಪಿಐ ರಮೇಶ್ ಎಸ್.ರೊಟ್ಟಿ, ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಭೀಮಣ್ಣ ಸೂರಿ, ಬೇವೂರ ಠಾಣೆ ಪಿಎಸ್‌ಐ ನಾಗರಾಜ ಜಿ.ಟಿ., ಯಲಬುರ್ಗಾ ಠಾಣೆ ಪಿಎಸ್‌ಐ ಹಾಲೇಶ್ ಎಂ ಸೇರಿ ಇತರ ಅಧಿಕಾರಿಗಳು ತಂಡದಲ್ಲಿದ್ದರು. ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು. ಡಿವೈಎಸ್ಪಿ ಎಸ್.ಎಂ.ಸಂದಿಗವಾಡ, ಯಲಬುರ್ಗಾ ಠಾಣೆ ಸಿಪಿಐ ರಮೇಶ್ ಎಸ್.ರೊಟ್ಟಿ ಇತರ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *

Back To Top