Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ಮುಂಬೈನಲ್ಲಿ ಸಬ್​ಇನ್ಸಪೆಕ್ಟರ್ ಪುತ್ರಿಯ ಅತ್ಯಾಚಾರ, ಕೊಲೆ: ಬೆಳಗಾವಿಯಲ್ಲಿ ಶವ

Thursday, 07.09.2017, 9:38 AM       No Comments

ಬೆಳಗಾವಿ: ಸ್ನೇಹಿತರೇ ಅತ್ಯಾಚಾರವೆಸಗಿ ಯುವ ಟೆಕ್ಕಿಯ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಂಬೈನ ಅಂಬರನಾಥದಲ್ಲಿ ಕೊಲೆ ಮಾಡಿ, ಶವವನ್ನು ಸೂಟ್​ಕೇಸ್​​ನಲ್ಲಿ ತಂದ ಕೊಲೆಗಡುಕರು ಬೆಳಗಾವಿಯ ಹೊರವಲಯದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮೋರಿಯಲ್ಲಿ ಬಿಸಾಕಿ ಹೋಗಿದ್ದಾರೆ.

ನಾಗಪುರ ಮೂಲದ 22 ವರ್ಷದ ಯುವತಿ ಅತ್ಯಾಚಾರಕ್ಕೀಡಾಗಿ ಕೊಲೆಯಾದವರು. ಇವರ ತಂದೆ ನಾಗಪುರದ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸಹಾಯಕ ಸಬ್​ಇನ್ಸಪೆಕ್ಟರ್​ ಆಗಿ ಸೇವೆಯಲ್ಲಿದ್ದಾರೆ. ಇನ್ನು, ನಿಕಲೇಶ್ ಪಾಟೀಲ್ (24) ಮತ್ತು ಅಕ್ಷಯ್​ ವಲೋದೆ (25) ಆರೋಪಿಗಳು.

ಸಂತ್ರಸ್ತ ಯುವತಿ ಅಂಕಿತಾ ಮುಂಬೈನ ಅಂಬರನಾಥನಲ್ಲಿ ಕಾಲ್ ಸೆಂಟರ್​ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಳು. ಆರೋಪಿಗಳು ಮತ್ತು ಸಂತ್ರಸ್ತ ಯುವತಿ ಪರಸ್ಪರ ಪರಿಚಯ ಇರುವವರು. ಸ್ನೇಹ ಸಲುಗೆಯ ಮೇಲೆ ಆರೋಪಿಗಳ ಜತೆ ಪ್ರಯಾಣ ಮಾಡುತ್ತಿದ್ದಾಗ ಮಾರ್ಗ ಬದಲಿಸಿ, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮಾರ್ಗ ಮಧ್ಯೆ ರೇಪ್ ಮಾಡಿದ ನಂತರ, ಯುವತಿ ಪೊಲೀಸರಿಗೆ ತಿಳಿಸುತ್ತಾಳೆ ಎಂಬ ಭೀತಿಯಿಂದ ಆಕೆಯನ್ನು ಕೊಲೆ ಮಾಡಿದ್ದಾರೆ. ಬಳಿಕ, ರತ್ನಗಿರಿಯಲ್ಲಿ ಹೊಸ ಸೂಟ್​ಕೇಸ್​ ಖರೀದಿ ಮಾಡಿಕೊಂಡು, ಅದರಲ್ಲಿ ಶವ ತುಂಬಿದ್ದಾರೆ. ನಂತರ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಬಳಿ ರಾಷ್ಟೀಯ ಹೆದ್ದಾರಿ ಪಕ್ಕದ ಮೋರಿಯಲ್ಲಿ ಎಸೆದು ಹೋಗಿದ್ದಾರೆ.

ಕಾರು ಚಾಲಕ ಅನುಮಾನಗೊಂಡು ಸೂಟ್​ಕೇಸ್​​ನಲ್ಲಿ ಏನಿದೆ ಅಂತ ಕೇಳಿದಾಗ ಕುಡಿದ ಅಮಲಿನಲ್ಲಿ ಯುವತಿಯ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ. ಆಗ ರೇಪ್​ ಅಂಡ್​ ಮರ್ಡರ್​ ಕೃತ್ಯ ಬಯಲಿಗೆ ಬಂದಿದೆ. ಈ ಕುರಿತು ಚಾಲಕ ರತ್ನಗಿರಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಡಿಗೆ ಕಾರು ಚಾಲಕನ ಮಾಹಿತಿ ಮೇರೆಗೆ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top