Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಆ್ಯಂಬಿ ವ್ಯಾಲಿ: ಭಾರತೀಯ ರಿಯಲ್ ಎಸ್ಟೇಟ್​ಗೆ ಬೇಡ- ಹಾಗಾದ್ರೆ ಮುಂದಿನ ಗತಿಯೇನು?

Monday, 18.09.2017, 3:08 PM       No Comments

ಮುಂಬೈ: ಇತ್ತೀಚೆಗೆ ದೇಶಾದ್ಯಂತ ರಿಯಲ್ ಎಸ್ಟೇಟ್ ಒಂದಷ್ಟು ಇಳಿಜಾರಿನಲ್ಲಿದೆ. ದೊಡ್ಡ ಮಟ್ಟದ ಹೂಡಿಕೆಗೆ ರಿಯಲ್ ಎಸ್ಟೇಟುದಾರರು ಮುಂದೆ ಬರುತ್ತಿಲ್ಲ. ಭೂಲೋಕದ ಸ್ವರ್ಗವನ್ನೇ ಹರಾಜಿಗೆ ಇಟ್ಟಿದ್ದೇವೆ. ಮುಂದೆ ಬನ್ನಿ ಅಂದ್ರೂ… ಆ ಸ್ವರ್ಗಸುಖ ಬೇಡ ಅಂತಿದ್ದಾರೆ ದೇಶೀಯ ರಿಯಲ್ ಎಸ್ಟೇಟುದಾರರು.

ಪರಿಸ್ಥಿತಿ ಹೀಗಿರುವಾಗ ಐಷರಾಮಿ ಆ್ಯಂಬಿ ವ್ಯಾಲಿ ಹರಾಜು ಪ್ರಕ್ರಿಯೆಯಲ್ಲಿದೆ. ದೇಶೀಯ ರಿಯಲ್ ಎಸ್ಟೇಟ್​ ಉದ್ಯಮದಲ್ಲಿ ದೊಡ್ಡ ಮಟ್ಟದ ಭಾರೀ ಕುಳಗಳು ಇದ್ದರೂ ಅವರೆಲ್ಲ ನಮಗೆ ಬೇಡ ಅನ್ನುತ್ತಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಎರಡು ವಿದೇಶೀ ಕಂಪನಿಗಳು ಆಸಕ್ತಿ ತೋರಿದ್ದು ಆ್ಯಂಬಿ ವ್ಯಾಲಿ ಖರೀದಿಗೆ ಮುಂದಾಗುವ ಲಕ್ಷಣಗಳಿವೆ. ಆದರೆ, ಖರೀದಿಗೆ ಮುಂದಾಗಿರುವ ಕಂಪನಿಗಳು ಹಾಗೂ ಖರೀದಿದಾರರ ಮಾಹಿತಿಯನ್ನು ಬಹಿರಂಗಪಡಿಸದೆ ಗೌಪ್ಯವಾಗಿ ಇಡಲಾಗಿದೆ.

ಆ್ಯಂಬಿ ವ್ಯಾಲಿ ಖರೀದಿಗೆ ಮುಂದಾಗಿರುವ ಖರೀದಿದಾರರನ್ನು ಬಹಳ ಕಟ್ಟುನಿಟ್ಟಾಗಿ ಪರಿಶೀಲಿಸಲು ಸುಪ್ರೀಂ ಕೋರ್ಟ್​ ಪರಿಶೀಲಕರನ್ನು ನೇಮಿಸಿದ್ದು, ಮೊದಲನೇ ಹಂತವಾಗಿ ಖರೀದಿದಾರರು ತಮ್ಮ KYC ದಾಖಲೆಗಳನ್ನು ಸಲ್ಲಿಸಿದ್ದಾರೆ.

ಹರಾಜು ಪ್ರಕ್ರಿಯೆ ಮುಗಿಯುವವರೆಗೂ ಖರೀದಿದಾರರ ಮಾಹಿತಿಯನ್ನು ಬಹಿರಂಗವಾಗದಂತೆ ಕಟ್ಟುನಿಟ್ಟು ಗೌಪ್ಯತೆ ಕಾಪಾಡಿಕೊಳ್ಳುವಂತೆ ನ್ಯಾಯಾಲಯ ಸೂಚನೆ ನೀಡಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ರಿಯಲ್​ ಎಸ್ಟೇಟ್ ಸಲಹೆಗಾರರು ಹೇಳುವಂತೆ ಆ್ಯಂಬಿ ವ್ಯಾಲಿಯನ್ನು ಕೊಳ್ಳಲು ಭಾರತದ ಯಾವೊಬ್ಬ ರಿಯಲ್​ ಎಸ್ಟೇಟ್​ ಉದ್ಯಮಿಯಿಂದಲೂ ಸಾಧ್ಯವಾಗೋಲ್ಲ. ಏಕೆಂದರೆ ಅಷ್ಟು ಪ್ರಮಾಣದ ಹಣವನ್ನು ಭಾರತದ ಬ್ಯಾಂಕ್​ಗಳು ಸಾಲ ನೀಡಲು ಮುಂದೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಆ್ಯಂಬಿ ವ್ಯಾಲಿಯನ್ನು ಕೊಳ್ಳಲು ಜಪಾನ್​ ಅಥವಾ ಚೀನಾ ರಿಯಲ್​ ಎಸ್ಟೇಟ್​ ಉದ್ಯಮಿಗಳಿಂದ ಮಾತ್ರ ಸಾಧ್ಯ. ಬಹುಶಃ ಆ ದೇಶಗಳ ರಿಯಲ್​ ಉದ್ಯಮಿಗಳೇ ಖರೀದಿಸಬಹುದು ಎಂದು ರಿಯಲ್​ ಎಸ್ಟೇಟ್ ಸಲಹೆಗಾರರು ತಿಳಿಸಿದ್ದಾರೆ.

ಈ ಮಧ್ಯೆ ಮಾರಿಷಸ್ ಮೂಲದ ಉದ್ಯಮಿಗಳು ಹಾಗೂ ರಾಯಲ್​ ಪಾರ್ಟನರ್​ ಇನ್ವೆಸ್ಟ್​ಮೆಂಟ್​ ಫಂಡ್​ ಕಂಪನಿಗಳು ಸಹರಾ ಕಂಪನಿ ಜತೆಗೂಡಿ ಆ್ಯಂಬಿವ್ಯಾಲಿಯನ್ನು ಕೊಳ್ಳಲು ಮುಂದಾಗಿದ್ದಾರೆ ಎಂದೂ ತಿಳಿದುಬಂದಿದೆ. (ಏಜೆನ್ಸೀಸ್​)

 

Leave a Reply

Your email address will not be published. Required fields are marked *

Back To Top