Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಹೆಲಿಕಾಪ್ಟರ್ ಪತನ: ಒಎನ್​ಜಿಸಿ ಐವರು ದುರ್ಮರಣ

Saturday, 13.01.2018, 6:55 PM       No Comments

ಮುಂಬೈ: ಜುಹುದಿಂದ ಮುಂಬೈಗೆ ಹೊರಟಿದ್ದ ಪವನ್ ಹಾನ್ಸ್ ಹೆಲಿಕಾಪ್ಟರ್‌ವೊಂದು ಶನಿವಾರ ಪತನಗೊಂಡಿದ್ದು, ಐವರು ಮೃತಪಟ್ಟಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ 7 ಮಂದಿ ಒಎನ್‌ಜಿಸಿ ಸಿಬ್ಬಂದಿಯಿದ್ದರು. ಬೆಳಗ್ಗೆ 10.20ಕ್ಕೆ ಹೆಲಿಕಾಪ್ಟರ್‌ ಜುಹುದಿಂದ ಹೊರಟಿತ್ತು. ಅದಾಗಿ ಹತ್ತೇ ನಿಮಿಷಕ್ಕೆ ಸಂಪರ್ಕ ಕಡಿದುಕೊಂಡಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ.

10.20ಕ್ಕೆ ಹೊರಟ ಹೆಲಿಕಾಪ್ಟರ್‌ 10.58ರ ವೇಳೆಗೆ ಒಎನ್‌ಜಿಸಿ ನಾರ್ತ್‌ ಫಿಲ್ಡ್‌ಗೆ ತಲುಪಬೇಕಿತ್ತು. ಆದ್ರೆ 10.30ರ ವೇಳೆ ಹೆಲಿಕಾಪ್ಟರ್‌ ಸಂಪರ್ಕ ಕಡಿತಗೊಂಡು ಪತನವಾಗಿರೋ ಕುರಿತು ಮಾಹಿತಿ ಲಭ್ಯವಾಗಿದೆ.

ಹೆಲಿಕಾಫ್ಟರ್​ನಲ್ಲಿ ಮೂರುಗಂಟೆ 10 ನಿಮಿಷಗಳಷ್ಟು ಬಳಸಬಹುದಾದ ಇಂಧನ ಇತ್ತು ಎನ್ನಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದೆ.

 

Leave a Reply

Your email address will not be published. Required fields are marked *

Back To Top