Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ಉಗ್ರ ದಾಖಲೆ ಇಲ್ವಂತೆ! ಮುಂಬೈ ದಾಳಿ ರೂವಾರಿ ಹಫೀಜ್​ ಯಾವುದೇ ಕ್ಷಣ ಬಿಡುಗಡೆ

Wednesday, 11.10.2017, 3:36 PM       No Comments

ಲಾಹೋರ್​: ಒಂದೆಡೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸುವ ಪಾಕ್​ ತೆರೆಮರೆಯಲ್ಲಿ ಅವರಿಗೆ ರಕ್ಷಣೆ ನೀಡುವುದೂ ಅನೇಕ ಸಂದರ್ಭಗಳಲ್ಲಿ ಬಯಲಾಗಿದೆ. ಈಗ ಪಾಕ್​ ಸರ್ಕಾರ ಮತ್ತೋರ್ವ ಮೋಸ್ಟ್​ ವಾಂಟೆಡ್​ ಉಗ್ರನನ್ನು ರಕ್ಷಿಸಲು ಮುಂದಾಗಿದ್ದು, ಅವನ ವಿರುದ್ಧ ಕೋರ್ಟ್​ಗೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ವಿಳಂಬ ಮಾಡುತ್ತಿದೆ. ಇದರಿಂದಾಗಿ ಅವನಿನ್ನು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಮತ್ತು ಜಾಗತಿಕ ಉಗ್ರ ಹಣೆಪಟ್ಟಿ ಅಂಟಿಸಿಕೊಂಡಿರುವ ಹಫೀಜ್​ ಸಯೀದ್​ ಮತ್ತು ಆತನ ನಾಲ್ವರು ಸಹಚರರನ್ನು ಪಾಕ್​ ಸರ್ಕಾರ ಬಂಧಿಸಿದೆ. ಭಯೋತ್ಪಾದನಾ ವಿರೋಧಿ ಕಾಯ್ದೆಯನ್ವಯ ಬಂಧಿತರಾಗಿರುವ ಇವರನ್ನು ಜನವರಿ 31 ರಿಂದ ಗೃಹ ಬಂಧನದಲ್ಲಿಯೂ ಇರಿಸಲಾಗಿದೆ.

ಆದರೆ ಹಫೀಜ್​ ತನ್ನ ಬಂಧನವನ್ನು ಪ್ರಶ್ನಿಸಿ ಲಾಹೋರ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಹಫೀಜ್​ನ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ಆತನ ವಿರುದ್ಧ ಸಾಕ್ಷ್ಯಾಧಾರ ಸಲ್ಲಿಸುವಂತೆ ಪಾಕ್​ ಸರ್ಕಾರಕ್ಕೆ ಸೂಚಿಸಿತ್ತು.

ಅದರಂತೆ ಮಂಗಳವಾರ ನಡೆದ ವಿಚಾರಣೆಯಲ್ಲಿ ಪಾಕ್​ ಆಂತರಿಕ ಸಚಿವಾಲಯದ ಕಾರ್ಯದರ್ಶಿ ಹಫೀಜ್​ ವಿರುದ್ಧ ಸಾಕ್ಷ್ಯಾಧಾರಗಳನ್ನು ಕೋರ್ಟ್​ಗೆ ಸಲ್ಲಿಸಬೇಕಿತ್ತು. ಆದರೆ ಕಾರ್ಯದರ್ಶಿ ಕೋರ್ಟ್​ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್​ ಪಾಕ್​ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಶೀಘ್ರ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸೂಚಿಸಿದೆ.

ಜತೆಗೆ, ಕೇವಲ ಪತ್ರಿಕಾ ವರದಿಗಳ ಆಧಾರದ ಮೇಲೆ ಯಾವುದೇ ನಾಗರಿಕನ ಬಂಧನದ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಸರ್ಕಾರದ ವರ್ತನೆಯಿಂದ ಹಫೀಜ್​ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವುದು ತಿಳಿದು ಬರುತ್ತಿದೆ. ಪ್ರಬಲ ಸಾಕ್ಷ್ಯಾಧಾರಗಳನ್ನು ಸಲ್ಲಿಸದಿದ್ದರೆ ಹಫೀಜ್​ನನ್ನು ಬಿಡುಗಡೆ ಮಾಡುವ ಕುರಿತು ಚಿಂತಿಸಲಾಗುವುದು ಎಂದು ಹೈಕೋರ್ಟ್​ ಜಸ್ಟೀಸ್​ ಸಯ್ಯದ್​ ಮಜಹರ್​ ಅಲಿ ಅಕ್ಬರ್​ ನಖ್ವಿ ತಿಳಿಸಿದ್ದಾರೆ.

ಕೋರ್ಟ್​ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್​ 13 ಕ್ಕೆ ಮುಂದೂಡಿದೆ.

ಪಾಕಿಸ್ತಾನದ ಪಂಜಾಬ್​ ಸರ್ಕಾರ ಹಫೀಜ್​ ಮತ್ತು ಇತರ ನಾಲ್ವರು ಜಮಾತ್​ ಉದ್​ ದವಾ ಉಗ್ರ ಸಂಘಟನೆಯ ನಾಯಕರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದೆ. ಇವರ ಬಿಡುಗಡೆಯಿಂದ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುತ್ತದೆ ಎಂದು ತಿಳಿಸಿದೆ.

ಪಂಜಾಬ್​ ಸರ್ಕಾರ ಹಫೀಜ್​ ಮತ್ತು ಆತನ ಸಹಚರರ ಗೃಹ ಬಂಧನದ ಅವಧಿಯನ್ನು ಸೆಪ್ಟೆಂಬರ್​ 25 ರಂದು 30 ದಿನ ವಿಸ್ತರಿಸಿ ಆದೇಶಿಸಿತ್ತು. ಅಮೆರಿಕ ಸಹ 2014ರ ಜೂನ್​ನಲ್ಲಿ ಜಮಾತ್​ ಉದ್​ ದವಾ ಉಗ್ರ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸಿತ್ತು. ಜತೆಗೆ ಹಫೀಜ್​ ಸಯೀದ್​ ತಲೆಗೆ 10 ಮಿಲಿಯನ್​ ಡಾಲರ್​ ಬಹುಮಾನವನ್ನೂ ಸಹ ಘೋಷಿಸಿದೆ. (ಏಜನ್ಸೀಸ್​)

Leave a Reply

Your email address will not be published. Required fields are marked *

Back To Top